ತಾಲ್ಲೂಕಿನ ಐಮಂಗಲಹೋಬಳಿಯ ಬುರುಜನರೊಪ್ಪ
ಗ್ರಾಮಪಂಚಾಯಿತಿ ಅಧ್ಯಕ್ಷೆಯಾಗಿ ಚಿಕ್ಕಸಿದ್ಧವ್ವನಹಳ್ಳಿ
ಸದಸ್ಯೆಯಾದ ಶ್ರೀಮತಿಕವಿತಾರವರುಆಯ್ಕೆಯಾಗಿದ್ದಾರೆ
ಹಿರಿಯೂರು:
ತಾಲ್ಲೂಕಿನ ಐಮಂಗಲ ಹೋಬಳಿಯ ಬುರುಜನರೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 19 ಸದಸ್ಯರಿದ್ದು, ಈ ಪೈಕಿ 9 ಬಿ.ಜೆ.ಪಿ, 3 ಜೆ.ಡಿ.ಎಸ್, 7 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಕೇವಲ ಮೂರು ಸದಸ್ಯರಿರುವ ಜೆ.ಡಿ.ಎಸ್.ಬೆಂಬಲಿತ, ಹಿರಿಯೂರು ತಾಲ್ಲೂಕು ಜೆ.ಡಿ.ಎಸ್.ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರಾಧಮ್ಮ ಇವರನ್ನು ಬಿ.ಜೆ.ಪಿ. ಮುಖಂಡರಾದ ದ್ಯಾಮೇಗೌಡ ಇವರು ಒಡಂಬಡಿಕೆ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಾಕಷ್ಟು ಶ್ರಮಿಸಿದ್ದರು.
ಒಡಂಬಡಿಕೆಯಂತೆ ಅಧ್ಯಕ್ಷೆ ಶ್ರೀಮತಿ ರಾಧಮ್ಮ ರಾಜೀನಾಮೆ ನೀಡದಿದ್ದಾಗ ಮತ್ತು ಅಧಿಕಾರದಲ್ಲಿ ಮುಂದುವರೆಯುವ ಆಸೆಗಾಗಿ ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಶ್ರೀಮತಿ ರಾಧಮ್ಮರವರ ವಿರುದ್ಧ ಅವಿಶ್ವಾಸ ತಂದು ಶ್ರೀಮತಿ ಕವಿತಾ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಸಿದ ಕೀರ್ತಿ ದ್ಯಾಮೇಗೌಡರವರಿಗೆ ಸಲ್ಲುತ್ತದೆ.
ಜೆ.ಡಿ.ಎಸ್. ಮುಖಂಡರುಗಳಾದ ಎಂ.ತಿಪ್ಪೇಸ್ವಾಮಿ, ಸುರೇಶ್, ರಾಮಚಂದ್ರಪ್ಪ, ರಂಗನಾಥ್, ಮಹಂತೇಶ್ ಇವರುಗಳು ಪತ್ರಿಕೆಯೊಂದಿಗೆ ಮಾತನಾಡಿ ಬುರುಜನರೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೆವಲ ಜೆ.ಡಿ.ಎಸ್. ಬೆಂಬಲಿತ 3 ಸದಸ್ಯರಿದ್ದರೂ ಕೂಡ ದ್ಯಾಮೇಗೌಡರ ಕಾರಣಕ್ಕಾಗಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ, ಕೋವೇರಹಟ್ಟಿ ಗ್ರಾಮಪಂಚಾಯಿತಿ ಸದಸ್ಯೆಯಾದ ಶ್ರೀಮತಿ ರಾಧಮ್ಮರವರನ್ನು ಆಯ್ಕೆ ಮಾಡಲಾಗಿತ್ತು.
ಆದರೆ ಕೊಟ್ಟ ಮಾತಿನಂತೆ ಅವರು ರಾಜೀನಾಮೆ ನೀಡದಿದ್ದಾಗ ಅವರ ಸಹೋದರ ಕೆ.ದ್ಯಾಮಣ್ಣ ಮುಂದೆ ನಿಂತು ಅವಿಶ್ವಾಸ ಮಂಡಿಸಿ ಅಧಿಕಾರದಿಂದ ತಂಗಿಯನ್ನು ಕೆಳಗಿಳಿಸಿರುವುದಲ್ಲದೆ, ಇತಿಹಾಸದಲ್ಲೇ ಎಂದೂ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನ ಪಡೆಯದ ಚಿಕ್ಕಸಿದ್ಧವ್ವನಹಳ್ಳಿ ಸದಸ್ಯೆ ಶ್ರೀಮತಿ ಕವಿತಾರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಸಿದ ಕೀರ್ತಿ ಕೆ.ದ್ಯಾಮಣ್ಣಅವರಿಗೆ ಸಲ್ಲುತ್ತದೆ ಎಂಬುದಾಗಿ ಅವರು ಹೇಳಿದರು…
ವರದಿ:ಎಂ.ಎಲ್.ಗಿರಿಧರ,ಮಲ್ಲಪ್ಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030