ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗುರುವಂದನಕಾರ್ಯಕ್ರಮ
ನಿಜಕ್ಕೂಅರ್ಥಪೂರ್ಣವಾಗಿದೆ:ನಿವೃತ್ತ ಮುಖ್ಯಶಿಕ್ಷಕ ಅನಂತರೆಡ್ಡಿ
ಹಿರಿಯೂರು :
ದೀಪದಿಂದ ದೀಪ ಹಚ್ಚಿ ಕತ್ತಲೆಯನ್ನು ಹಣತೆಯಿಂದ ಹೊಡೆದೋಡಿಸಿ ಅಜ್ಞಾನದ ಅಂಧಕಾರವನ್ನು ಸುಜ್ಞಾನವೆಂಬ ಜ್ಯೋತಿ ಬೆಳಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಗುರುಗಳಿಗೆ ವಿದ್ಯಾರ್ಥಿಗಳು ಗುರುವಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂಬುದಾಗಿ ಶಾಲೆಯ ನಿವೃತ್ತ ಮುಖ್ಯಶಿಕ್ಷಕರಾದ ಎ.ಅನಂತರೆಡ್ಡಿ ಹೇಳಿದರು.
ತಾಲ್ಲೂಕಿನ ವಿ.ವಿ.ಪುರ ಗ್ರಾಮದ ಶ್ರೀ ಬಿ.ಎಲ್.ಗೌಡ ಸ್ಮಾರಕ ಪ್ರೌಢಶಾಲೆಯಲ್ಲಿ 1996ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಬಿ.ಟಿ.ತಿಪ್ಪೇಸ್ವಾಮಿ, ಎಸ್.ಜಿ.ಪುಟ್ಟರಂಗಪ್ಪ, ಬಿ.ಎಸ್.ಚಂದ್ರಹಾಸರೆಡ್ಡಿ, ಎ.ಎನ್.ಚಂದ್ರಪ್ಪ, ಜಿ.ಬಿ.ಪಂಚಾಕ್ಷರಪ್ಪ, ಮಂಜುನಾಥಸ್ವಾಮಿ, ಜಿ.ಮಂಜುನಾಥಪ್ಪ, ಸೇರಿದಂತೆ ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು ಹಾಗೂ 1996ನೇ ಸಾಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030