l1990-91 ರ ಪ್ರೌಢಶಾಲಾ ಸ್ನೇಹಿತರ ಮಡಿಕೇರಿ ಪ್ರವಾಸದ ಒಂದು ನೋಟ
35 ವರ್ಷದ ನಂತರ
1990-91 ರ ಬ್ಯಾಚ್ ನ ಡಾ// ಜಿ.ಟಿ.ಹುಚ್ಚಪ್ಪ ಸ್ಮಾರಕ ಪ್ರೌಢಶಾಲೆ ಗೌಡನಕಟ್ಟೆಯ ವಿದ್ಯಾರ್ಥಿ ಈ.ರವೀಶ್ ರವರು ವಿಶ್ವ ಕನ್ನಡ ಕಲಾ ಸಂಸ್ಥೆ ನೋ ಹಿರಿಯೂರು ಚಿತ್ರದುರ್ಗ ಸಂಸ್ಥಾಪಕ ಅಧ್ಯಕ್ಷರಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಹಳೆಯ ಸ್ನೇಹಿತರನ್ನೆಲ್ಲ ಕಲೆ ಹಾಕಿ ಸೇರಿ ಹೊರಟಂತಹ ಪ್ರವಾಸ ಅವಿಸ್ಮರಣೀಯ ಎನ್ನಬಹುದು.ಎಲ್ಲರೂ ಒಂದೆಡೆ ಸೇರಿ ಬದುಕಿನ ಸಿಹಿ-ಕಹಿ ಅನುಭವಗಳನ್ನು ಹಂಚಿಕೊಂಡು ಬಸ್ಸನ್ನು ಹತ್ತಿದಾಗ ಅದರ ಯಶಸ್ಸು ಜೀವನದ ಸಾರ್ಥಕತೆಗೆ ಹಿಡಿದ ಕನ್ನಡಿಯಂತಾಗಿತ್ತು. ಹೀಗೆ ಹೊರಟಾಗ ಮುಖ್ಯವಾಗಿ
ಪ್ರವಾಸದ ಅನುಭವ ಪ್ರವಾಸದ ಮುಖ್ಯ ಉದ್ದೇಶ ಸ್ಥಳಗಳ ವೀಕ್ಷಣೆ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿತ್ತು.
ಮತ್ತು 35 ವರ್ಷದ ನಂತರ ಸೇರುವುದು ಎಲ್ಲರಿಗೂ ಸಂತೋಷ ತಂದಿತ್ತು.
ಪ್ರವಾಸ ಎಂಬುದು ಮೈಮನಗಳನ್ನು ಸಂತೋಷಗೊಳಿಸುವ ಹೆಚ್ಚು ಸ್ನೇಹವನ್ನು ಹತ್ತಿರದಿಂದ ತಿಳಿದುಕೊಳ್ಳುವ ತನ್ನಲ್ಲಿ ಹುದುಗಿಸಿಕೊಂಡಿರುವ ಹಲವು ಭಾವನೆಗಳನ್ನು ಹೇಳುವ. ಆರೋಗ್ಯಕರ ಚೇತರಿಕೆ ಮತ್ತು ಒತ್ತಡ ಕಡಿಮೆ ಮಾಡಿಕೊಳ್ಳುವಂತೆ ಪ್ರವಾಸದ ಸುಂದರ ಕ್ಷಣಗಳು ನೆನಪಿನಲ್ಲಿ ಉಳಿಯುವಂತೆ ಮಾಡಿತ್ತು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030