ಇಂದಿನಮಕ್ಕಳು ಉತ್ತಮಶಿಕ್ಷಣ ಪಡೆಯುವ ಮೂಲಕ
ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕಿದೆ
ಸಂಜೆವಾಣಿ ವರದಿಗಾರರಾದ ಎಂ.ರವೀಂದ್ರನಾಥ್
ಹಿರಿಯೂರು :
ಇಂದಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶದ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು, ಈ ಮೂಲಕ ಶಿಕ್ಷಣವಂತರಾದಾಗ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆಯುವ ಜೊತೆಗೆ ಸ್ವತಂತ್ರ್ಯವಾದ ಬದುಕು ರೂಪಿಸಿಕೊಳ್ಳಬಹುದು ಎಂಬುದಾಗಿ ಹಿರಿಯ ಪತ್ರಕರ್ತರು, ಸಂಜೆವಾಣಿ ವರದಿಗಾರರು ಮತ್ತು ರವಿ ಕಿರಣ್ ನ್ಯೂಸ್ ನ ಮುಖ್ಯಸ್ಥರಾದ ಎಂ.ರವೀಂದ್ರನಾಥ್ ಹೇಳಿದರು.
ನಗರದ ಚಂದ್ರವಳ್ಳಿ ಪತ್ರಿಕೆ ವರದಿಗಾರರು ಹಾಗೂ ಛಾಯಾಗ್ರಹಕರ ಸಂಘದ ಮಾಜಿ ಅಧ್ಯಕ್ಷರಾದ ಎಮ್. ಎಲ್. ಗಿರಿಧರ್ ಮತ್ತು ಕೆ.ಎಸ್.ಆರ್ ಟಿ ಸಿ ನಿರ್ವಾಹಕಿ, ಶ್ರೀಮತಿ ರೂಪ ಇವರ ಸುಪುತ್ರಿ ಜಿ.ಆರ್. ನಂದಿತ ಇವರು ಎಸ್ ಎಸ್ ಎಲ್ ಸಿ ಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿರುವ ಪ್ರಯುಕ್ತ ಅವರ ಮನೆಗೆ ಭೇಟಿ ನೀಡಿ ಸಿಹಿ ಕೊಟ್ಟು ಸನ್ಮಾನಿಸಿ, ಮಾತನಾಡಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದ ಕುಮಾರಿ ನಂದಿತಾ ಅವರು ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 125 ಹಾಗೂ ಹಿಂದಿಯಲ್ಲಿ 100 ಕ್ಕೆ100 ಅಂಕಗಳನ್ನು ಪಡೆದಿದ್ದು, ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿರುತ್ತಾರೆ ನಂದಿತಾ ಇವರ ಮುಂದಿನ ಶಿಕ್ಷಣ ಉನ್ನತ ಮಟ್ಟದಲ್ಲಿರಲಿ ಎಂಬುದಾಗಿ ಅವರು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಾಹಿತಿ ಎಂ.ಕಿರಣ್ ಮಿರಜ್ಕರ್, ನಂದಿತಾ ಇವರ ತಂದೆ ಎಂ.ಎಲ್.ಗಿರಿಧರ್, ತಾಯಿ ಶ್ರೀಮತಿ ರೂಪ ಉಪಸ್ಥಿತರಿದ್ದರು…

