ನಗರದಲ್ಲಿ ಶ್ರೀರಾಜಾದುರ್ಗಾಪರಮೇಶ್ವರಿಅಮ್ಮನವರ
ಜಾತ್ರಾಮಹೋತ್ಸವ ಹಾಗು ರಥೋತ್ಸವ ಭಕ್ತಿಯಿಂದ
ಭಕ್ತಸಮೂಹದಮಧ್ಯೆವೈಭವಪೂರಿತವಾಗಿನಡೆಯಿತು
ಹಿರಿಯೂರು:
ನಗರದಲ್ಲಿ ಶ್ರೀ ರಾಜಾದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಭಕ್ತಿ ಭಾವದಿಂದ ನಡೆಯಿತು. ದೇವಾಲಯದ ಆವರಣದಿಂದ ಹೊರಟ ರಥೋತ್ಸವ ಶ್ರೀ ತೇರುಮಲ್ಲೇಶ್ವರ ದೇವಸ್ಥಾನದ ವೃತ್ತದವರೆಗೆ ಸಾಗಿ ಅಲ್ಲಿಂದ ವಾಪಾಸ್ ಬಂದು ದೇವಸ್ಥಾನದ ಬಳಿ ನಿಂತಿತು.
ಶ್ರೀ ರಾಜಾದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಇದರ ಅಂಗವಾಗಿ ಚಪ್ಪರ ಶಾಸ್ತ್ರ, ಮದಲಂಗಿತ್ತಿ ಶಾಸ್ತ್ರ, ಹುಚ್ಚವ್ವನಹಳ್ಳಿ ಗ್ರಾಮಸ್ಥರಿಂದ ಅಮ್ಮನವರಿಗೆ ಮಡ್ಲಕ್ಕಿ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಶ್ರೀ ರಾಜಾದುರ್ಗಾಪರಮೇಶ್ವರಿ ಅಮ್ಮನವರ ಮೂಲ ಕಳಸದೊಂದಿಗೆ ಗಂಗಾಪೂಜೆ ಮೆರವಣಿಗೆ ಮೂಲಕ ದೇವಸ್ಥಾನ ಪ್ರವೇಶ, ಸೋಮವಾರ ಸಂಜೆ ಅಮ್ಮನವರ ಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಮಂಗಳವಾರ ಬೆಳಗ್ಗೆ ಸುಮಂಗಲೆಯರಿಂದ ಶ್ರೀ ರಾಜಾದುರ್ಗಾಪರಮೇಶ್ವರಿ ಅಮ್ಮನವರಿಗೆ ಉಡಿ ತುಂಬುವ ಕಾರ್ಯಕ್ರಮ , ಆರತಿಸೇವೆ, ಕುರಿಸೇವೆ, ಬೇವಿನ ಉಡಿಗೆ ಸೇವೆ ನಡೆಸಲಾಯಿತು.
ಹುಳಿಯಾರು ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ಅಮ್ಮನವರು ಹಾಗೂ ಹೊಸಹಳ್ಳಿಪಾಳ್ಯ ಶ್ರೀಅಂತರಘಟ್ಟಮ್ಮನವರ ಆಗಮಿಸಿ ವಿಶೇಷ ಪೂಜೆ ನಡೆಯಿತು.ಸಂಜೆ ಅಮ್ಮನವರ ಉಯ್ಯಾಲೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಗುರುವಾರ ಮಧ್ಯಾಹ್ನ ಮೇದಾರ ಸಮಾಜದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಎಲ್ಲಾ ದೇವರುಗಳ ಭೇಟಿ ಕಾರ್ಯಕ್ರಮ ನಡೆಯಿತು. ಶುಕ್ರವಾರ ಸಂಜೆ ಅಮ್ಮನವರ ಬ್ರಹ್ಮ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಸಲಾಯಿತು.
ಶ್ರೀ ರಾಜಾದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಟ್ರಸ್ಟ್ ವ್ಯವಸ್ಥಾಪಕರು ಹಾಗೂ ಭಕ್ತಾದಿಗಳು ಎಲ್ಲಾ ಪೂಜಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030