ವೇದಾವತಿಸರ್ಕಾರಿಪ್ರಥಮದರ್ಜೆಕಾಲೇಜಿನಲ್ಲಿ ಕರ್ನಾಟಕ ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನದಂತೆ ಜಾನಪದ ಉತ್ಸವ ನಡೆಸಲಾಯಿತು…!!!

Listen to this article

ನಗರದ ವೇದಾವತಿಸರ್ಕಾರಿಪ್ರಥಮದರ್ಜೆಕಾಲೇಜಿನಲ್ಲಿ
ಕರ್ನಾಟಕ ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆ
ನಿರ್ದೇಶನದಂತೆ ಜಾನಪದ ಉತ್ಸವ ನಡೆಸಲಾಯಿತು
ಹಿರಿಯೂರು:
ನಗರದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನದಂತೆ ಜಾನಪದ ಉತ್ಸವವನ್ನು ಕಳೆದ ನಾಲ್ಕೈದು ದಿನಗಳಿಂದ ಆಚರಿಸಲಾಯಿತು.
ಇಂದಿನ ಆಧುನಿಕ ಜೀವನದಲ್ಲಿ ದೇಶಿಯ ಸಂಸ್ಕೃತಿಯು, ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುತ್ತಿದ್ದು, ಇನ್ನೂ ಸಹ ಹಳ್ಳಿಗಳಲಲಿ ತನ್ನ ಮೂಲ ಮೂಲ ನೆಲೆಯನ್ನು ಉಳಿಸಿಕೊಂಡಿರುವುದು ಸಮಾಧಾನದ ಸಂಗತಿ.
ಜಾನಪದ ಸಾಹಿತ್ಯ, ಸಂಸ್ಕೃತಿ, ಕಲೆ, ಸಾಹಿತ್ಯ, ದೇಶೀಯ ಆಹಾರ ಪದ್ಧತಿ, ದೇಶೀಯ ಉಡುಗೆ-ತೊಡುಗೆ ಮುಂತಾದವುಗಳನ್ನು ಪುನಃ ತಮ್ಮ ವಿದ್ಯಾರ್ಥಿಗಳಿಗೆ ನೆನಪಿಸುವ ಸಲುವಾಗಿ ಜಾನಪದ ಉತ್ಸವ-2025 ” ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ” ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದರ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಂಪ್ರದಾಯಿಕ ಕಲೆಯನ್ನು, ಸಂಸ್ಕೃತಿಯನ್ನು ಪ್ರದರ್ಶಿಸಲಿಕ್ಕೆ ವೇದಿಕೆಯನ್ನು ಕಲ್ಪಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ಭಾಗವಹಿಸಿದ್ದು, ಜಾನಪದ ಉತ್ಸವಕ್ಕೆ ಒಂದು ಮೆರುಗು ತಂದುಕೊಟ್ಟಿದ್ದಾರೆ.
ಈ ಜಾನಪದ ಉತ್ಸವದ ಸಮಾರೋಪ ಸಮಾರಂಭವನ್ನು ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಫ್ರೊ. ಮಹೇಶ್ ಅಧೀಕ್ಷಕರಾದ ನರಸಿಂಹಮೂರ್ತಿ, ವೇದಾವತಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಿ.ಆರ್.ಹನುಮಂತರಾಯ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಪುಷ್ಪಲತಾ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಪ್ರೊ.ಮಹೇಶ್ ರವರು ಜಾನಪದ ಉತ್ಸವದ ಬಗ್ಗೆ, ದೇಶೀಯ ಕಲೆಗಳ ಬಗ್ಗೆ, ಜಾನಪದ ಕಲೆಗಳ ಬಗ್ಗೆ ಸುಧೀರ್ಘವಾಗಿ ವಿಷಯವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತ ಪ್ರಾಂಶುಪಾಲರಾದ ಪ್ರೊ.ಡಿ.ಆರ್.ಹನುಮಂತರಾಯ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಅಧ್ಯಾಪಕರನ್ನು ನೆನಪಿಸುತ್ತಾ ವಿದ್ಯಾರ್ಥಿಗಳನ್ನು ಕೊಂಡಾಡಿದರು. ಈ ಕಾರ್ಯಕ್ರಮದ ಮಹತ್ವವನ್ನು ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಚಾಲಕರಾದ ಪುಷ್ಪಲತಾ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ನಡೆದು ಬಂದಂತಹ ವಿವರವನ್ನು ತಿಳಿಸಿಕೊಟ್ಟರು. ಜಾನಪದ ಉತ್ಸವದಲ್ಲಿ ಹಲವಾರು ಕ್ರೀಡೆಗಳನ್ನು, ದೇಶೀಯ ಆಹಾರ ಪದ್ದತಿ, ದೇಶೀಯ ಆಟಗಳನ್ನು ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಕಚೇರಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend