ಹಿರಿಯೂರು ರಾಷ್ಟ್ರೀಯ ಹೆದ್ದಾರಿಯಲ್ಲಿಜೆ.ಜಿ.ಹಳ್ಳಿ ಬಳಿ
ಉಪಸಭಾಪತಿ ರುದ್ರಪ್ಪಲಮಾಣಿ ಪ್ರಯಾಣಿಸುತ್ತಿದ್ದಕಾರು
ಅಪಘಾತವಾಗಿ ಶಾಸಕರು ಗಾಯಗೊಂಡ ಘಟನೆ ನಡೆದಿದೆ.
ಹಿರಿಯೂರು:
ಉಪಸಭಾಪತಿ ರುದ್ರಪ್ಪಲಮಾಣಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಶಾಸಕರು ಗಾಯಗೊಂಡಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಗ್ರಾಮದ ಘಟನೆ ಜೆ.ಜಿ.ಹಳ್ಳಿ ಸಮೀಪ ನಡೆದಿದೆ.
ಶಾಸಕರು ಅದೃಷ್ಟವಶಾತ್ ಪ್ರಾಣಾಪಯಾಯದಿಂದ ಪಾರಾಗಿದ್ದಾರೆ. ಉಪಸಭಾಪತಿಗಳಿಗೆ ಸಣ್ಣಪಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಉಪಸಭಾಪತಿ ಜೆ.ಜಿ.ಹಳ್ಳಿ ಬಳಿ ಕಾರಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿಲ್ಲಿಸಿ ಯಾವುದೇ ರೀತಿ ಸಿಗ್ನಲ್ ಹಾಕದೆ ನಿಲ್ಲಿಸಿದರು.ಇದನ್ನು ಗಮನಿಸದ ಬೈಕ್ ಸವಾರ ನೇರವಾಗಿ ಬಂದು ಉಪಸಭಾಪತಿಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಇದರಿಂದಾಗಿ ಉಪಸಭಾಪತಿಗಳು ಬಲವಾಗಿ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಎಸ್.ಸ್.ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಸುದ್ಧಿ ತಿಳಿಯುತ್ತಿದ್ದಂತೆ ಹಿರಿಯೂರು ಡಿ.ವೈ.ಎಸ್ಪಿ ಶಿವಕುಮಾರ್ ಹಾಗೂ ಹಿರಿಯೂರು ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಹಾಗೂ ಹಿರಿಯೂರು ನಗರದ ಇನ್ಸ್ ಪೆಕ್ಟರ್ ರಾಘವೇಂದ್ರ ಅವರು ಅಪಘಾತ ಸ್ಥಳಕ್ಕೆ ತೆರಳಿ , ಉಪಸಭಾಪತಿಗಳನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಂಬುದಾಗಿ ತಿಳಿದು ಬಂದಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030