ನಗರದಲ್ಲಿ ಅನೇಕ ಹೊಸಮಾರ್ಗಗಳಲ್ಲಿ ಸಾರಿಗೆಬಸ್ ಸಂಚಾರಕ್ಕೆ ಅನುಕೂಲಕರವಾಗುವಂತೆ ರಾಜ್ಯಸಾರಿಗೆ ಸಂಸ್ಥೆ ಡಿಪೋ ಆರಂಭಕ್ಕೆ ಕ್ಷಣಗಣನೆ…!!!

ನಗರದಲ್ಲಿ ಅನೇಕ ಹೊಸಮಾರ್ಗಗಳಲ್ಲಿ ಸಾರಿಗೆಬಸ್
ಸಂಚಾರಕ್ಕೆ ಅನುಕೂಲಕರವಾಗುವಂತೆ ರಾಜ್ಯಸಾರಿಗೆ
ಸಂಸ್ಥೆ ಡಿಪೋ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ
ಹಿರಿಯೂರು:
ಹಿರಿಯೂನಲ್ಲಿ ಈಗಾಗಲೇ ನಿರ್ಮಾಣವಾಗಿರುವ ಕೆ.ಎಸ್.ಆರ್.ಟಿ.ಸಿ. ಡಿಪೋ ಉದ್ಘಾಟಿಸುವಂತೆ ಜನಸ್ನೇಹಿ, ಜನಪರ ಹೋರಾಟಗಾರರು, ಸಂಘ-ಸಂಸ್ಥೆಗಳು, ಪ್ರತಿಭಟನೆ ಮಾಡಿ ಡಿಪೋ ಆರಂಭಕ್ಕೆ ಗಡವು ನೀಡಿದ್ದರು. ಹಲವು ಕಾರಣಗಳಿಂದ ಡಿಪೋ ಆರಂಭವಾಗುವುದು ವಿಳಂಬ ಆಗುತ್ತಿತ್ತು. ಆದರೆ, ಡೀಸೇಲ್ ಪಂಪ್ ಸೇರಿದಂತೆ ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ.
ರಾಜ್ಯ ಸಾರಿಗೆ ಸಂಸ್ಥೆಯ ಹಿರಿಯೂರು ಡಿಪೋ ಆರಂಭಕ್ಕೆ ಈಗ ಕಾಲ ಕೂಡಿಬಂದಿದ್ದು, ಡಿಪೋ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಹಿರಿಯೂರು ಡಿಪೋ ಆರಂಭವಾದರೆ ಅನೇಕ ಹೊಸಮಾರ್ಗಗಳಲ್ಲಿ ಸಾರಿಗೆ ಬಸ್ ಗಳ ಸಂಚಾರ ಆರಂಭಿಸಲಾಗುತ್ತದೆ.
ಈಗಾಗಲೇ ಈ ಹೊಸ ಕೆ.ಎಸ್.ಆರ್.ಟಿ.ಸಿ.ಡಿಪೋದಲ್ಲಿ ಡೀಸೆಲ್ ಪಂಪ್ ರೆಡಿಯಾಗಿ ಕಳೆದ ಒಂದು ತಿಂಗಳ ಹಿಂದೆಯೇ 40 ಸಾವಿರ ಲೀಟರ್ ಡೀಸೆಲ್ ತರಿಸಿ ಸ್ಟಾಕ್ ಮಾಡಲಾಗಿದೆ. ಈಗ ಕೇವಲ ಉದ್ಘಾಟನೆಗಾಗಿ ಕಾಯಲಾಗುತ್ತಿದ್ದು, ಇದರಿಂದಾಗಿ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗುತ್ತದೆ.
ಆದರೆ, ಕಚೇರಿ ಸೆಟ್ ಅಪ್ ಮಾಡಲು ಪೀಠೋಪಕರಣಗಳು, ಜನರೇಟರ್, ಯು.ಪಿ.ಎಸ್, ಕಂಪ್ಯೂಟರ್, ಏರ್ ಕಂಪ್ರೆಸರ್, ಸೇರಿದಂತೆ ಮತ್ತಿತರ ಅಗತ್ಯ ಸಾಮಾಗ್ರಿಗಳು ಬರಬೇಕಿದ್ದು, ಈಗಾಗಲೇ ಇವುಗಳ ಪೂರೈಕೆಗೆ ಕೇಂದ್ರ ಸರ್ಕಾರದಿಂದ ಟೆಂಡರ್ ಕರೆಯಲಾಗಿದೆ.
ಕ್ಷೇತ್ರದ ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಡಿಪೋ ಆರಂಭವನ್ನು ಮತ್ತಷ್ಟು ವಿಳಂಬ ಮಾಡದೇ ಸಾರಿಗೆ ಸಚಿವರ ದಿನಾಂಕ ಪಡೆದು ಹಿರಿಯೂರು ಡಿಪೋವನ್ನು ಆದಷ್ಟು ಬೇಗ ಆರಂಭಿಸಲಿ ಎನ್ನುವುದು ಕ್ಷೇತ್ರದ ಜನತೆಯ ನಿರೀಕ್ಷೆಯಾಗಿದೆ…

Leave a Reply

Your email address will not be published. Required fields are marked *