ಹಿರಿಯೂರಿನಲ್ಲಿ ರೈತ ಸಂಘಟನೆಗಳಿಂದ ಆಮರಣಾಂತ ಉಪಾಸ ಸತ್ಯಾಗ್ರಹ
ಹಿರಿಯೂರು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರಿಯೂರು ಶಾಖೆ ಇವರಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಜವಗೊಂಡನಹಳ್ಳಿಯ ಗಾಯತ್ರಿ ಜಲಾಶಯ ಸೇರಿದಂತೆ ಈ ಹೋಬಳಿಯಲ್ಲಿ ಬರುವ 16 ಕೆರೆಗಳಿಗೆ ಹಾಗೂ ಕಸಬಾ ಹೋಬಳಿಯ 6 ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಈ ಸಂಘಟನೆಗಳ ಪದಾಧಿಕಾರಿಗಳು ಪಟ್ಟು ಹಿಡಿದು ಆಮರಣಾಂತ ಉಪಾಸ ಸತ್ಯಾಗ್ರಹ ಪ್ರಾರಂಭಿಸಿದ್ದು, ಈಗಾಗಲೇ ಈ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಉದ್ದೇಶ ಈಡೇರಿಕೆಗಾಗಿ ಕಳೆದ 254 ದಿವಸಗಳ ಧರಣಿ ಮಾಡಿದ್ದರು ಸಹ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ. ಅದಕ್ಕಾಗಿ ಈಗ ಪ್ರಾಣ ಕೊಟ್ಟಾದರೂ ನೀರು ತುಂಬಿಸುವ ಕೆಲಸವನ್ನು ಮಾಡಬೇಕೆಂದು ಉಪಾಸತ್ಯಾಗ್ರಹ ಮಾಡುತ್ತಿದ್ದೇವೆಂದು ತಾಲೂಕು ಅಧ್ಯಕ್ಷರಾದ ಕೆ ಟಿ ತಿಪ್ಪೇಸ್ವಾಮಿ ಹೇಳಿದರು. ಇವರು ಮಾತನಾಡುತ್ತಾ ಹಿರಿಯೂರು ತಾಲೂಕಿನಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು ಜನ ಜಾನುವಾರಗಳಿಗೆ ನೀರಿಲ್ಲದಂತಾಗಿದೆ. ಹಿಂದೆ ಸರ್ಕಾರ ಇಂತಹ ಪರಿಸ್ಥಿತಿಯಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಿತ್ತು. ಈಗ ನಮ್ಮದೇ ತಾಲೂಕಿನಲ್ಲಿ 135 ಅಡಿ ನೀರಿರುವ ಜಲಾಶಯವಿದ್ದರೂ ನೀರಿನ ಕೊರತೆ ಅನುಭವಿಸುವಂತಾಗಿದೆ. ಅದಕ್ಕಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನೀರು ತುಂಬಿಸುವ ಕೆಲಸವನ್ನು ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಇದಕ್ಕೆ ಇದೆ ಬಹಳ ದೊಡ್ಡ ಮಟ್ಟದ ಹಣವೇನು ಬೇಕಾಗುವುದಿಲ್ಲ. ಇದು ನೂರರಿಂದ ಇನ್ನೂರು ಕೋಟಿ ಒಳಗೆ ಮುಗಿಯುವ ಕೆಲಸವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಣ್ಣತಿಮ್ಮಣ್ಣ, ಮೀಸೆ ಗೌಡ ಜೆ.ಜೆ ಹಳ್ಳಿ
ಹೋಬಳಿ ಅಧ್ಯಕ್ಷರು, ವೀರಣ್ಣ, ಶಿವಣ್ಣ, ಚಂದ್ರಗಿರಿ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ವರದಿ : ಶಫಿವುಲ್ಲಾ ಎಸ್ ಹೆಚ್ ಹಿರಿಯೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030