ಜಿಲ್ಲಾಡಳಿತದ ಮೆಚ್ಚುಗೆಗೆ ಪಾತ್ರವಾದ ವಿಸ್ಮಯ ಕೀಟ ಪ್ರಪಂಚ ವಸ್ತು ಪ್ರದರ್ಶನ
ಹಾಸನ:- ಇತ್ತೀಚಿಗೆ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಒಳಪಡುವ, ಕೃಷಿ ಮಹಾವಿದ್ಯಾಲಯ ಹಾಸನವು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹಾಸನ, ಪಶು ವೈದ್ಯಕೀಯ ಮಹಾವಿದ್ಯಾಲಯ, ಹೆಚ್.ಡಿ.ಎಫ್.ಸಿ ಬ್ಯಾಂಕ್ ಲಿಮಿಟಿಡ್ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಇವರ ಸಹಯೋಗದೊಂದಿಗೆ ಹಾಸನ ನಗರದ ರೆಡ್ ಕ್ರಾಸ್ ಭವನದಲ್ಲಿ 4 ದಿನಗಳ ಕಾಲ ಜರುಗಿದ ವಿಸ್ಮಯ ಕೀಟ ಪ್ರಪಂಚ ಪ್ರದರ್ಶನಕ್ಕೆ ಜಿಲ್ಲಾಧಿಕಾರಿಯಾದ ಸತ್ಯಭಾಮ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಪೂರ್ಣಿಮಾರವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೀಟಶಾಸ್ತç, ಆಹಾರ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳನ್ನೊಳಗೊಂಡ ತಂಡ ಹಾಗೂ ಕೃಷಿ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರ ಪರಿಶ್ರಮ ಮತ್ತು ಕಲಾತ್ಮಕತೆಯಿಂದ ಈ ಪ್ರದರ್ಶನವು ಹಾಸನ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಮನಸೂರೆಗೊಂಡಿದೆ.
ಜಿಲ್ಲಾಧಿಕಾರಿಗಳಾದ ಸತ್ಯಭಾಮರವರು ಕೀಟ ಪ್ರಪಂಚ ಪ್ರದರ್ಶನವನ್ನು ವೀಕ್ಷಿಸುತ್ತ ಇದೊಂದು ಉತ್ತಮವಾದ ವಿಭಿನ್ನವಾದ ಹಾಗೂ ಅದ್ಬುತವಾದಂತಹ ಪ್ರಯೋಗ. ಇಂತಹ ಪ್ರದರ್ಶನವು ಇನ್ನು ಮುಂದೆಯೂ ಆಯೋಜಿಸಿ ಸಾರ್ವಜನಿಕರಿಗೆ ಕೀಟಗಳ ಬಗ್ಗೆ ಇರುವ ಕುತೂಹಲ ಹಾಗೂ ಭಾವನೆಗಳನ್ನು ಪರಿಹರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಈ ವಸ್ತು ಪ್ರದರ್ಶನಕ್ಕೆ ಸ್ಥಳಾವಕಾಶವನ್ನು ನೀಡಿದ ಡಾ. ಎಚ್. ಪಿ. ಮೋಹನ್, ಸಭಾಪತಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಎಲ್ಲಾ ಡೈರ್ಕ್ಟರ್ಗಳಿಗೂ ಉತ್ತಮ ನುಡಿಗಳನ್ನು ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಪೂರ್ಣಿಮರವರು ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಕೀಟಶಾಸ್ತç ವಿಭಾಗದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಲ್ಕು ದಿನದ ಕೀಟ ವಸ್ತು ಪ್ರದರ್ಶನದಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಕೆ. ಎನ್. ಮುನಿಸ್ವಾಮಿಗೌಡ, ಡಾ. ಬಿ. ಎಸ್. ಬಸವರಾಜು, ಡಾ. ಸುನೀತ, ಟಿ. ಆರ್. ಡಾ. ಹರ್ಷಿತ, ಎ. ಪಿ. ಹಾಗೂ ಸ್ನಾತಕೋತ್ತರ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಮತ್ತಿತರು ಹಾಜರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030