ಸೇವಾದಳ ಜಿಲ್ಲಾ ಸಮಿತಿಗೆ ಕೊಡುಗೆ
ಹಾಸನ :- ರೋಟರಿ ಮಿಡ್ ಟೌನ್ ಅಧ್ಯಕ್ಷರು ಹಾಗೂ ಕಾರ್ಲೆ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳಾದ ತೇಜಸ್ವಿಯವರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಂದು ಜಿಲ್ಲಾಧಿಕಾರಿಗಳು ಸಿ ಸತ್ಯಭಾಮ ಅವರ ಮೂಲಕ ಸುಮಾರು 25000 ರೂ ಬೆಲೆಬಾಳುವ ಒಂದು ಸೆಟ್ ಬ್ಯಾಂಡ್ ಸೆಟ್ ಅನ್ನು ಬೇಸ್ಡ್ರಮ್, ಸೈಡ್ ಡ್ರಮ್, ಬ್ಯುಗಲ್ಗಳು, ಬ್ಯಾಂಡ್ ಸ್ಟಿಕ್, ಇತರೆ ಪರಿಕರಗಳನ್ನು ಭಾರತ ಸೇವಾದಳ ಜಿಲ್ಲಾ ಸಮಿತಿಗೆ ಕೊಡುಗೆಯಾಗಿ ನೀಡಿದರು. ಇದರೊಂದಿಗೆ ಎರಡು ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಟಿವಿಯನ್ನು ಸಹ ಕೊಡುಗೆಯಾಗಿ ನೀಡಿದರು.
ಬ್ಯಾಂಡ್ ಸೆಟ್‌ಅನ್ನು ಸ್ವೀಕರಿಸಲು ಭಾರತ ಸೇವಾ ದಳದ ಜಿಲ್ಲಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಆದ ಎಮ್ ಕೆ ಕಮಲ್ ಕುಮಾರ್ ರವರು ಹಾಗೂ ಜಿಲ್ಲಾ ಸಮಿತಿಯ ಸದಸ್ಯರಾದ ಹರೀಶ್ ಜೆ ಹಾಗೂ ರವಿ ಎಂ ಮತ್ತು ತಾಲೂಕು ಸಮಿತಿಯ ಅಧ್ಯಕ್ಷರಾದ ಎನ್ ಕುಮಾರ್, ಉಪಾಧ್ಯಕ್ಷರಾದ ವರದರಾಜು ಬಿ, ವಲಯ ಸಂಘಟಕರಾದ ರಾಣಿ ವಿ.ಎಸ್ ರವರು ಹಾಜರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030