ಕನ್ನಡ ಜ್ಯೋತಿ ರಥಕ್ಕೆ ಗೌರವ ಸಮರ್ಪಣೆ
ಹಾಸನ:- ನಮ್ಮ ಮಾತೃಭಾಷೆಯಾದ ಕನ್ನಡವನ್ನು ಪೋಷಣೆ ಮಾಡಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ, ಕನ್ನಡವನ್ನು ಮರೆತರೆ ನಮಗೆ ನರಕ ಎಂಬುದನ್ನು ನಾವು ನಂಬಿದ್ದೇವೆ. ಸಿರಿಗನ್ನಡದಿಂದಲ್ಲೇ ಏಳಿಗೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದ್ದಾರೆ.
ಡಿಸೆಂಬರ್ 20, 21 ಹಾಗೂ 22 ರಂದು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥ ಸಂಚರಿಸುತ್ತಿದ್ದು ಇಂದು ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಲ್ಲೂಕು ಆಡಳಿತದಿಂದ ಕನ್ನಡ ಜ್ಯೋತಿ ರಥವನ್ನು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡು ತಾಯಿ ಭುವನ್ವೇಶ್ವರಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು ನಾವೆಲ್ಲಾ ಕನ್ನಡಿಗರು ಕನ್ನಡಿಗರ ಮನಸ್ಸು ಎಂದರೇ ಎಲ್ಲಾರಿಗೂ ಒಳ್ಳೆಯದನ್ನು ಬಯಸುವುದು ಮತ್ತು ಯಾರಿಗೂ ಕೇಡನ್ನು ಬಯಸದ ಮನಸ್ಸು ಕನ್ನಡಿಗರು ಎಲ್ಲಾ ಭಾಷಿಕರೊಂದಿಗೆ ಅನುವು ತನುವಾಗಿ ಸಹೋದರತ್ವದಿಂದ ಪೂರ್ವಜರ ಕಾಲದಿಂದಲ್ಲೂ ಬಾಳುತ್ತಿದ್ದಾರೆ ಎಂದು ತಿಳಿಸಿದರು.
ಕನ್ನಡಿಗರಿಗೆ ನೋವಾದರೆ ಕನ್ನಡಿಗರ ಭಾವನೆಗೆ ದಕ್ಕೆಯಾದರೆ ಸಯಿಸುವುದಿಲ್ಲ ಎಂದ ಅವರು ಕನ್ನಡ ರಥ ಯಾತ್ರೆ ಸುಗಮವಾಗಿ ನಡೆಯಲಿ ಎಂದು ತಿಳಿಸಿದರು
ಕರ್ನಾಟಕವನ್ನು ಇಡೀ ಭಾರತದಲ್ಲಿ ಮೇರುಪಂಕ್ತಿಯಲ್ಲಿ ನಿಲ್ಲಿಸಿದಂತಹ ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಪ್ರಾಂತ್ಯವನ್ನು ಇಡೀ ಪ್ರಪಂಚಕ್ಕೆ ಪ್ರಖ್ಯಾತಿಸಿದ್ದಾರೆ. ಕರ್ನಾಟಕದ ಮತ್ತೊಂದು ಮುತ್ತು ರತ್ನವಾದಂತಹ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಕನ್ನಡ ರಥಯಾತ್ರೆಯಲ್ಲಿ ಹಾಕಿದ್ದಾರೆ. ಇಡೀ ಪ್ರಪಂಚದಲ್ಲಿಯೇ ಅನ್ನ ಕೊಡುವಂತಹ ನೇಗಿಲ ಯೋಗಿಯ ಪ್ರತಿಕೃತಿಯನ್ನು ಸಹ ರಥದಲ್ಲಿ ಅಳವಡಿಸಲಾಗಿದೆ ಇವರನ್ನು ಸ್ಮರಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್. ಪೂರ್ಣಿಮಾ ಅವರು ಮಾತನಾಡಿ 1994 ರಲ್ಲಿ ಮಂಡ್ಯದಲ್ಲಿ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು 30 ವರ್ಷಗಳ ನಂತರ ಪುನಃ ಮಂಡ್ಯದಲ್ಲಿ ಡಿ. 20, 21 ಹಾಗೂ 22 ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದ ಅವರು ಈ ನುಡಿ ಜಾತ್ರ‍್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಮಾತನಾಡಿ ಕರ್ನಾಟಕಕ್ಕೆ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ ಕನ್ನಡ ರಥಯಾತ್ರೆಯಲ್ಲಿ ಪಾಲ್ಗೊಂಡಿರುವುದು ನಮಗೆ ಸಂತೋಷ ತಂದಿದೆ. ಸಾಹಿತ್ಯ ಸಮ್ಮೇಳನದ ಬಗ್ಗೆ ಎಲ್ಲಾರೂ ತಿಳಿದುಕೊಳ್ಳಬೇಕು ಎಂದರ ಅವರು ಶಾಲಾ ಮಕ್ಕಳಿಗೂ ಸಾಹಿತ್ಯ ಸಮ್ಮೇಳನ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬುವುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಈ. ಕೃಷ್ನೇಗೌಡ ಅವರು ಮಾತನಾಡಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯ ಹಾಗೂ ಹಾಸನ, ಜಿಲ್ಲೆಯ ಅನೇಕ ಮಹನೀಯರು ಸಾಹಿತಿಗಳು ಕನ್ನಡ ಭಾಷೆಗೆ ಕೊಡುಗೆ ನೀಡಿದ್ದಾರೆ. ಕನ್ನಡ ಕೇವಲ ಭಾಷೆಯಲ್ಲಿ ತನ್ನದೇ ಆದ ನೆಲ, ಜಲ ಸಂಸ್ಕೃತಿಯ ಹಿರಿಮೆಯನ್ನು ಒಳಗೊಂಡಿದೆ. ಉನ್ನತ ಭಾಷಾ ಪರಂಪರೆಯನ್ನು ಹೊಂದಿರುವ ಕನ್ನಡವನ್ನು ಉಳಿಸಿ ಬೆಳೆಸುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಗಟ್ಟಿಗೊಳಿಸೋಣ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿಗಳಾದ ಕೆ.ಟಿ. ಶಾಂತಲಾ, ತಹಸೀಲ್ದಾರ್ ಶ್ವೇತಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಪಿ. ತಾರನಾಥ್ ಮತ್ತಿತರರು ಹಾಜರಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030