ಹಾವೇರಿಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ಸುದ್ದಿಗೋಷ್ಟಿ ನಡೆಸಿದ್ದಾರೆ. ಶಿಗ್ಗಾವಿ ಉಪಚುನಾವಣೆ ಹಿನ್ನೆಲೆ ಹಾವೇರಿ ಜಿಲ್ಲೆಯಲ್ಲಿ ನೀತಿ ಸಂಹಿತಿ ಅನ್ವಯವಾಗಿದ್ದು.ಅಕ್ಟೋಬರ್ 18 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿ. ಅಕ್ಟೋಬರ್ 25 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.
ಅಕ್ಟೋಬರ್ 28 ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ.
ಅಕ್ಟೋಬರ್ 30 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನವೆಂಬರ್ 13 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಶಿಗ್ಗಾವಿ ಕ್ಷೇತ್ರದಲ್ಲಿ 241 ಮತಗಟ್ಟೆಗಳಿವೆ. 121067 ಪುರುಷ, 115717 ಮಹಿಳೆಯರು,
6 ಇತರೆ ಸೇರಿದಂತೆ ಒಟ್ಟು 236790 ಮತದಾರರು. 85 ವರ್ಷ ಮೇಲ್ಪಟ್ಟವರು 2802, ಸೇವಾ ಮತದಾರರು 144, ಅಂಗವಿಕಲ ಮತದಾರರು 5251. 18 ರಿಂದ 19 ವರ್ಷದೊಳಗಿನ ಯುವ ಮತದಾರರು 9683. 2018 ರಲ್ಲಿ ಶೇಕಡಾ 79.80 ಮತದಾನವಾಗಿತ್ತು. 2023 ರಲ್ಲಿ ಶೇಕಡಾ 79.94 ರಷ್ಟು ಮತದಾನವಾಗಿತ್ತು. ಜಿಲ್ಲಾ ಗಡಿ ಭಾಗದಲ್ಲಿ 18 ಚೆಕ್ ಪೋಸ್ಟ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030