ಹರಪನಹಳ್ಳಿ ಪೊಲೀಸ್ ಇಲಾಖೆಯ ತಂಡದಿಂದ ಭರ್ಜರಿ ಬೇಟೆ….!!!

ಹರಪನಹಳ್ಳಿ ಪಟ್ಟಣದಲ್ಲಿ, ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಬರುತ್ತಿದ್ದ, ಗ್ರಾಹಕರ ಗಮನವನ್ನು ಬೇರೆಡೆ ಸೆಳೆದು, ಹಣವನ್ನು ಕಳ್ಳತನ ಮಾಡುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದ ಆರೋಪಿತರ ಪತ್ತೆಗಾಗಿ ಡಿ.ವೈ.ಎಸ್ಪಿ ಹರಪನಹಳ್ಳಿ ಉಪ ವಿಭಾಗ ಹಾಗೂ ಡಿ.ವೈ.ಎಸ್ಪಿ ಡಿ.ಸಿ.ಆರ್‌.ಬಿ ವಿಭಾಗ ರವರ ಮಾರ್ಗದರ್ಶನದಲ್ಲಿ ಹಾಗೂ ಸಿ.ಪಿ.ಐ ಹರಪನಹಳ್ಳಿ, ಪಿ. ಎಸ್. ಐ ಹರಪನಹಳ್ಳಿ ಮತ್ತು ಸಿ.ಡಿ.ಆರ್ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿರುತ್ತದೆ. ಸದರಿ ತಂಡವು ಪ್ರಕರಣದ 03 ಜನ ಆರೋಪಿಗಳನ್ನು ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿ,ದಸ್ತಗಿರಿ ಮಾಡಿ, ಅವರಿಂದ ಈ ಹಿಂದೆಯೂ ಸಹ ಇಂತಹದೇ 04 ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ಒಟ್ಟು 9,00,000/- ರೂ ಹಣವನ್ನು ಹಾಗೂ ಕಳ್ಳತನ ಮಾಡಲು ಉಪಯೋಗಿಸಿರುವ 02 ಮೋಟಾರ್ ಸೈಕಲ್ ಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ತಂಡದ ಕಾರ್ಯಾಚರಣೆಯನ್ನು ಶ್ಲಾಘಿಸಲಾಯಿತು.ಮತ್ತು ಜಿಲ್ಲೆಯಲ್ಲಿ ಮತ್ತೆ ಇಂತಹ ಘಟನೆಗಳು ಸಂಭಾವಿಸದಂತೆ ನಿಗಾ ವಹಿಸಬೇಕು ಪೊಲೀಸ್ ಇಲಾಖೆ ಮತ್ತು ಅಪರಿಚಿತ ವ್ಯಕ್ತಿಗಳನ್ನು ಸಾರ್ವಜನಿಕರು ಅತಿಯಾಗಿ ನಂಬಿ ಇಂತಹ ಒಂದು ಘಟನೆಗಳಿಗೆ ಅನುವುಮಾಡಿಕೊಡಬೇಡಿ ಅನ್ನುವ ಕಿವಿಮಾತನ್ನು ತಿಳಿಸಿದರು…

ವರದಿ. ಆಶೀಪುಲ್ಲ ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *