ದಿವ್ಯ ಜ್ಯೋತಿ ಶಾಲಾ ವಿದ್ಯಾರ್ಥಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ…!!!

Listen to this article

ಹೂವಿನ ಹಡಗಲಿ – ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಹಾಗೂ ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ ಕಲಬುರಗಿ ಇವರು ದಿನಾಂಕ 18-08-2024 ರಂದು ಸೊಪ್ಪಿನ ಕಾಳಮ್ಮ ಪದವಿಪೂರ್ವ ಕಾಲೇಜ್ ಹೂವಿನ ಹಡಗಲಿಯಲ್ಲಿ ನಡೆದ. 29 ಜನವರಿ – 06 ಫೆಬ್ರವರಿ 2025 ರವರೆಗೆ ನಗರ ಸೇಡಂ – ಕಲಬುರಗಿ ರಸ್ತೆಯಲ್ಲಿ ಜರುಗಲಿರುವ ” ಭಾರತೀಯ ಸಂಸ್ಕೃತಿ ಉತ್ಸವ -7 ” ರ ಹಿನ್ನೆಲೆಯಲ್ಲಿ ಆಯೋಜಿಸಿದ ಹೂವಿನ ಹಡಗಲಿ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೋಗಿ ಗ್ರಾಮದ ದಿವ್ಯ ಜ್ಯೋತಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ” ನಿತ್ಯ ವಿಜ್ಞಾನ ” ವಿಷಯದಡಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಕು.ಜಿ ಸಂಜನಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಕು.ಜೆ.ಆರ್ ಮನೋಜ್ ದ್ವಿತೀಯ ಸ್ಥಾನ, ದೇಶಭಕ್ತಿ ಗೀತೆಯಲ್ಲಿ ಕೆ.ಕೊಟ್ರಬಸವನಗೌಡ ತೃತೀಯ ಸ್ಥಾಗಳಿಸಿದ್ದಾರೆಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಹಾಲೇಶ್ ಹಕ್ಕಂಡಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೂ ಈ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ ಶಿಕ್ಷಕರಾದ ಐ.ಕೆ. ಮೇಘರಾಜ್ ಮತ್ತು ಸಿ.ಕೆ ಕಿರಣ್ ಕುಮಾರ್, ಶಾಲಾ ಶಿಕ್ಷಕ ಸಿಬ್ಬಂದಿ ವರ್ಗದವರು ಹಾಗೂ ಶ್ರೀ ಜ್ಞಾನ ಜ್ಯೋತಿ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಶುಭ ಕೋರಿದರು…

ವರದಿ. ಪ್ರಕಾಶ್ ಕಲ್ಮನಿ, ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend