ಎಚ್,ದೇವಪ್ಪ ಹಿರಿಯ ಮುಖ್ಯ ಗುರುಗಳು ಇವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮ…!!!

Listen to this article

ಶ್ರೀ ಎಚ್ ದೇವಪ್ಪ ಹಿರಿಯ ಮುಖ್ಯ ಗುರುಗಳು ಇವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭ
ಇಂದು ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಂಜಾರ್ ಹೆಗ್ಡಳ್ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀ ಎಚ್ ದೇವಪ್ಪ ಅವರ ವಯೋ ನಿವೃತ್ತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ವಿಶೇಷವೆಂದರೆ, ಪಿಂಜಾರ್ ಹೆಗ್ಡಳ್ ಗ್ರಾಮದ ಗ್ರಾಮಸ್ಥರು, ತಮ್ಮೂರಿನ ಶಾಲೆಯ ಯಾರೇ ಶಿಕ್ಷಕರು ವರ್ಗಾವಣೆಯಾದರೆ ಅಥವಾ ನಿವೃತ್ತಿ ಯಾದರೆ, ಊರಿನ ಹಿರಿಯರು ಮತ್ತು ಯುವಕರು ಎಲ್ಲಾ ಸೇರಿ ವಿಶೇಷ ಗೌರವ ಆದರಗಳನ್ನು ನೀಡಿ ಗೌರವಿಸುವುದು ವಾಡಿಕೆ.ಶಾಲೆಗೆ ಸಂಬಂದಿಸಿದ ಯಾವುದೇ ಕೆಲಸಗಳಿರಲಿ ಊರಿನ ಹಿರಿಯರು ಯುವಕರು ಸೇರಿ ಯಾವುದೇ ಪಕ್ಷ ಪಾತ ಮಾಡದೆ ತಮ್ಮ ಮನೆ ಕೆಲಸದಂತೆ ಜವಾಬ್ದಾರಿಯಿಂದ ಮಾಡುವುದೇ ವಿಶೇಷ.
ಈ ಮೊದಲು ಈ ಊರಿನಲ್ಲಿ ಊರಿನ ಗ್ರಾಮಸ್ಥರು ಒಂದು ಎಕರೆ ಭೂಮಿಯನ್ನು ಖರೀದಿಸಿ ಶಾಲಾ ಶಿಕ್ಷಣ ಇಲಾಖೆ ಗೆ ನೀಡಿ ಅದೇ ಜಾಗದಲ್ಲಿ ಹತ್ತು ರೂಮುಗಳನ್ನ ಒಳಗೊಂಡ ಒಂದು ಅತ್ಯುತ್ತಮ ಪ್ರೌಢಶಾಲೆ ನಿರ್ಮಿಸಲು ಕಾರಣಿಬೂತರಾಗಿದ್ದಾರೆ. ಜೊತೆಗೆ ಆ ಶಾಲೆಗೆ ವಿದ್ಯುತ್ ಅಳವಡಿಸಲು ಹಣದ ದೇಣಿಗೆ ಮತ್ತು ನೂತನವಾಗಿ ಎಲ್ ಕೆ ಜಿ ಮತ್ತು ಯು ಕೆ ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ರಾರಂಭಗೊಂಡಿರುವುದರಿಂದ ಆ ಮಕ್ಕಳಿಗೆ ಬೇಕಾದ ಆಟಿಕೆ.ಛೇರು ಟೇಬಲ್ ಮುಂತಾದ ಪರಿಕರಗಳನ್ನು ನೀಡಿರುವುದು. ಇನ್ನೂ ಅನೇಕ ಸಹಾಯ ಸಹಕಾರ ಸೌಲಭ್ಯಗಳನ್ನು ನೀಡಿದ ಕೀರ್ತಿ ಹೆಗ್ಡಳ್ ಜನಕ್ಕೆ ಸಲ್ಲುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಇವತ್ತು ಪಿಂಜಾರ್ ಹೆಗ್ಡಳ್ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಯಾವುದೇ ಪ್ರೈವೇಟ್ ಶಾಲೆಗಳಿಗೂ ಸಡ್ಡು ಹೊಡೆಯುವಂತೆ ನಿರ್ಮಾಣಗೊಂಡು ಅದರಂತೆ ಕಾರ್ಯನಿರ್ವಹಿಸುತ್ತಿವೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮಾದರಿ ಶಾಲೆಯಾಗಿ ರುವುದು ಹೆಮ್ಮೆಯ ವಿಷಯ.ಈ ಒಂದು ಅದ್ಭುತ ಕಾರ್ಯಕ್ರಮದಲ್ಲಿ. ಕ್ಷೇತ್ರ ಶಿಕ್ಷಣ ಅಧಿಕಾರಿಯಾದ ಮೈಲೇಶ್ ಬೇವೂರ್ ಸಾರ್ ಮತ್ತು ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಹಿತೈಷಿಗಳು ಭಾಗವಹಿಸಿ ನಿವೃತ್ತಿ ಜೀವನ ಸುಖವಾಗಿರಲೆಂದು ಹಾರೈಸಿದರು. ಈ ಶುಭ ಸಮಾರಂಭದಲ್ಲಿ ಊರಿನ ಹಿರಿಯರಾದ ಹೆಗ್ಡಳ್ ರಾಮಣ್ಣನವರು ಹೋರಾಟಗಾರರಾದ ಆರ್ ಎಸ್ ಬಸವರಾಜ್ ಜೆ ಎಂ ವೀರಸಂಗಯ್ಯ ನವರು, ಬುಡ್ಡಿ ಬಸವರಾಜ್. ಸಣ್ಣದುರ್ಗಪ್ಪ, ಮಹಾದೇವಪ್ಪ,ಹಂಪಾಪಟ್ಟಣ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುನಾಥ್ ಮಾಜಿ ಅಧ್ಯಕ್ಷರಾದ ಪರಶುರಾಮ್, ನಾಗಭೂಷಣ ಹಾಗೂ ಊರಿನ ಹಿರಿಯರು ಯುವಕರು ಮತ್ತು ಶಿಕ್ಷಣ ಪ್ರೇಮಿಗಳು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು…

ವರದಿ… ಏಳುಕೋಟಿ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend