ಅಕ್ರಮ ಮಧ್ಯ ಮಾರಾಟದ ಬಗ್ಗೆ ಮಹಿಳೆಯರು ದೂರು ಕೊಟ್ಟರು ಕ್ರಮ ಕೈಗೊಳ್ಳದ ಆರಕ್ಷಕ ಇಲಾಖೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಹಳ್ಳಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ಚಿಕ್ಕಸಬುಟಿ ಎಂಬ ಗ್ರಾಮದ ಮಹಿಳೆಯರು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟರು ಸಹ ಅಕ್ರಮ ಮಧ್ಯ ಮಾರಾಟದ ಬಗ್ಗೆ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ. ಈ ಗ್ರಾಮದಲ್ಲಿ ಯುವ ಸಮೂಹ ಕುಡಿತಕ್ಕೆ ಬಲೆಯಾಗಿ ಶಿಕ್ಷಣದ ಕಡೆಗೆ ಗಮನ ಹರಿಸುತ್ತಿಲ್ಲ ಮತ್ತು ಕುಡಿತದ ಚಟಕ್ಕೆ ದಾಸರಾಗಿ ಇವರ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಇಲ್ಲಿಯ ಪೋಷಕರ ಕೂಗಾಗಿದೆ . ಇದರಿಂದ ಇವರ ಕುಟುಂಬಕ್ಕೆ ಕುಡಿತದ ಚಟ ಶಾಪವಾಗಿ ಪರಿಣಮಿಸಿದೆ. ಅಕ್ರಮ ಮಧ್ಯ ಮಾರಾಟಗಾರರು ರಾಜ ರೋಷವಾಗಿ ಬೀದಿ ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದು ಪೊಲೀಸ್ ಇಲಾಖೆಯವರಿಗೆ ಮಾಮೂಲಿ ಕೊಡುವ ನೆಪದಲ್ಲಿ ಗ್ರಾಮದ ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಇದರಿಂದ ಈ ಕುಟುಂಬಗಳನ್ನು ರಕ್ಷಣೆ ಮಾಡಬೇಕಾದ ಆರಕ್ಷಕರೇ ಅಕ್ರಮದ ಮಧ್ಯ ಮಾರಾಟ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬದಲು ಕುಮ್ಮಕ್ಕು ನೀಡುವುದು ಎಷ್ಟು ಸರಿ?ಮತ್ತು ಮಧ್ಯ ಮಾರಾಟ ಮುಕ್ತ ಗ್ರಾಮವನ್ನು ಮಾಡಲು ಮಹಿಳೆಯರು ಪೊಲೀಸ್ ಇಲಾಖೆಗೆ ಒಮ್ಮತದ ಅಹವಾಲು ಸಲ್ಲಿಸಿರುತ್ತಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ತಕ್ಷಣ ಕ್ರಮ ಕೈಗೊಂಡು ಮಧ್ಯ ಮುಕ್ತ ಗ್ರಾಮ ವನ್ನಾಗಿ ಮಾಡಲು ತಿಳಿಸಿರುತ್ತಾರೆ…
ವರದಿ. ಏಳುಕೋಟಿ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030