ಸಮಾಜ ಕಲ್ಯಾಣ ಇಲಾಖೆ ತಾಲೂಕ್ ಆಡಳಿತ ವತಿಯಿಂದ ಡಾ!!ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ..
ಹಗರಿಬೊಮ್ಮನಹಳ್ಳಿ ಸಮಾಜ ಕಲ್ಯಾಣ ಇಲಾಖೆ ತಾಲೂಕು ಆಡಳಿತ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಪರಿನಿರ್ವಾಣ ದಿನದ ಪ್ರಯುಕ್ತ ಡಾ. ಬಿ ಆರ್ ಅಂಬೇಡ್ಕರ್ ಸರ್ಕಲ್ ರಾಮನಗರದಲ್ಲಿ ತಾಲೂಕು ಆಡಳಿತ ವತಿಯಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರಿಗೆ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮ ಕುರಿತು ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಗೆದ್ದಿಕೆರೆ ದೊಡ್ಡಬಸಪ್ಪನವರು ಮಾತನಾಡಿ ಡಿಸೆಂಬರ್ 6 12 1956 ರಂದು ಭಾರತ ದೇಶಕ್ಕೆ ಮಹಾನ್ ವಿಶ್ವಜ್ಞಾನಿ ಕಳೆದುಕೊಂಡ ದಿನ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇಡೀ ವಿಶ್ವವೆ ಮೆಚ್ಚಿಕೊಳ್ಳುವಂತಹ ವ್ಯಕ್ತಿ ಮಹಾನ್ ವಿಶ್ವಜ್ಞಾನಿ ಅಂಬೇಡ್ಕರ್ ಅವರು ಬರೆ ಸಂವಿಧಾನ ರಚನೆಗೆ ಮಾತ್ರ ಸೀಮಿತವಾಗದೆ, ಪರಿಣಿತ ಅರ್ಥಶಾಸ್ತ್ರಜ್ಞರು, ಸಾಮಾಜಿಕ ಚಿಂತಕರು, ರಾಜಕೀಯ ವಿಶ್ಲೇಷಕರು, ಎಲ್ಲ ರಂಗದಲ್ಲಿ ಒಳಗೊಂಡಂತ ವ್ಯಕ್ತಿ ಯಾರಾದರೂ ಇದ್ದರೆ ಬಾಬಾ ಸಾಬ್ ಅಂಬೇಡ್ಕರ್ ಅವರ ಎಂದು ಹೇಳಿದರು.
ಹಿರಿಯಾ ದಲಿತ ಮುಖಂಡರಾದ ಕಿತ್ತೂರು ದುರಗಪ್ಪ ಮಾತನಾಡಿ. ಹಗರಿಬೊಮ್ಮನಹಳ್ಳಿ ತಾಲೂಕು ಎಸ್ಸಿ ಮೀಸಲಾ ಕ್ಷೇತ್ರವಾದರೂ ಕೂಡ ಅಂಬೇಡ್ಕರ್ ಕೊಟ್ಟಂತ ಸಂವಿಧಾನದ ಅಡಿಯಲ್ಲಿ ಮೀಸಲಾತಿ ಪಡೆದು 18 ವರ್ಷಗಳಿಂದ ಶಾಸಕರಾದಂತಹವರು ಮೋಹನ್ ಚೇತನ ವಿಶ್ವಜ್ಞಾನಿ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಆಗಿಲ್ಲ. ಬಾಬಾ ಸಾಹೇಬ್ ಅವರ ಕೊಟ್ಟಂತ ಮೀಸಲಾತಿ ಭಿಕ್ಷೆಯಲ್ಲಿ ಶಾಸಕರಾದವರು ಅಂಬೇಡ್ಕರ್ ರವರಿಗೆ ಗೌರವ ಕೊಡುವಂತಹ ಒಂದು ವಿನಯತೆ ಕೂಡ ಇಲ್ಲ. ತಾಲೂಕಿನ ಅಧಿಕಾರಿ ವರ್ಗವೂ ಕೂಡ ಮನಸ್ಸು ಮಾಡುತ್ತಿಲ್ಲ. ತಾಲೂಕಿನ ಗ್ರೇಡ್ ಒನ್ ಅಧಿಕಾರಿಗಳು ಯಾರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಇದು ಅಂಬೇಡ್ಕರ್ ರವರಿಗೆ ಮಾಡುವ ಅವಮಾನ ಎಂದು ಹೇಳಿದರು. ಯುವ ಮುಖಂಡರಾದ ದಸಮಾಪುರ ಮರಿಯಪ್ಪ ಮಾತನಾಡಿ ಕಳೆದ 40 ವರ್ಷಗಳಿಂದ ಡಾ. ಬಿಆರ್ ಅಂಬೇಡ್ಕರ್ ಸರ್ಕಲ್ ಮತ್ತು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ದಲಿತ ಸಂಘಟನೆಗಳ ಮತ್ತು ವಿವಿಧ ಸಂಘ ಸಂಸ್ಥೆಗಳು ಹೋರಾಟ ಮಾಡಿದರು ಕೂಡ ಜನರಿಂದ ಆಯ್ಕೆ ಆದಂತಹ ಜನಪ್ರತಿನಿಧಿಗಳು ತಾವು ಆಯ್ಕೆಯಾಗಲು ಬಾಬಾ ಸಾಹೇಬರು ಕೊಟ್ಟಂತಹ ಮೀಸಲಾತಿ ಬೇಕು ಆದರೆ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಇವರಿಗೆ ಮನಸ್ಸಿಲ್ಲ. ಬೇರೆ ಬೇರೆ ದೇಶಗಳಲ್ಲಿ ವಿಶ್ವ ಜ್ಞಾನಿ ಮಹಾನ್ ಚೇತನರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಮಹಾನ್ ವಿಶ್ವಜ್ಞಾನಿ ಮೂರ್ತಿ ಮಾಡಲು ಜಾತಿ ಲೇಪನದ ಮೂಲಕ ಅಳೆಯುತ್ತಾರೆ. ಇದು ನಮ್ಮ ದೇಶದ ದುರಂತ ಎಂದು ಹೇಳಿದರು. ಈ ಸಮಾಜ ಕಲ್ಯಾಣ ಇಲಾಖೆಯ ಶೋಭಾ ಚಂದ್ರ ನಾಯ್ಕ ಪಿಎಸ್ಐ ಬಸವರಾಜ್ ಅಡಿವಿಬಾವಿ. ಪುರಸಭೆ ಮುಖ್ಯ ಅಧಿಕಾರಿಗಳು ಪ್ರಭಾಕರ ಗದ್ದಿಕೆರೆ ದೊಡ್ಡಬಸಪ್ಪ, ಮಾದೂರು ಮಹೇಶ್, ದಸಮಾಪುರ ಮರಿಯಪ್ಪ,ಹೆಗ್ಡಾಳ್ ರಾಜ್, ಕಿತ್ತೂರು ದುರಗಪ್ಪ, ಯಡ್ರಾಮ್ನಳ್ಳಿ ಮರಿಯಪ್ಪ, ಬಿ ಮಂಜುನಾಥ್, ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು,..
ವರದಿ.. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030