ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಕೋಗಳಿ ತಾಂಡದ ಶಾಲೆಯ ಮುಖ್ಯ ಗುರುಗಳಿಗೆ ಮನವಿ. ಕೋಗಳಿ ತಾಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಿರುವ ಸುಮಾರು 40 ಲಕ್ಷ ದಿಂದ 60 ಲಕ್ಷದವರೆಗೆ ಕಂಪ್ಯೂಟರ್ ಎಸ್ಟಿಮೆಂಟ್ ಆಗಿದ್ದು ನೀಡಿರುವ ಕಂಪ್ಯೂಟರ್ ಕಳಪೆಯಾಗಿದ್ದು ಮಕ್ಕಳಿಗೆ ಅನಾನುಕೂಲ ಆಗುತ್ತದೆ ಗಣಕಯಂತ್ರಗಳನ್ನ ನೀಡಿರುವ ಏಜೆನ್ಸಿ ಗಣಕಯಂತ್ರವನ್ನು ಇಡಲು ಸುರಕ್ಷಿತ ಇಲ್ಲದಿರುವ ಸ್ಥಳಕ್ಕೆ ಇಟ್ಟಿದೆ ಹಾಗಾಗಿ ಇನ್ನು ಹಲವಾರು ಸಮಸ್ಯೆಗಳಿದ್ದು ಆ ಸಮಸ್ಯೆಗಳು ಬಗೆ ಹರಿಯುವ ತನಕ ಮತ್ತು ಸೂಕ್ತ ತನಿಖೆ ಆಗುವ ತನಕ ಕಂಪ್ಯೂಟರ್ಗಳನ್ನ ಹಸ್ತಾಂತರವನ್ನು ಜೊತೆಗೆ ಒಪ್ಪಿಗೆ ಪತ್ರವನ್ನು ನೀಡಬಾರದೆಂದು ಮುಖ್ಯ ಗುರುಗಳಿಗೆ ಮನವಿಯನ್ನು ಸಲ್ಲಿಸಿದ್ದೆವು.
ಮಾನ್ಯ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರವನ್ನ ಸಲ್ಲಿಸಿ ಹಸ್ತಾಂತರ ಮತ್ತು ಒಪ್ಪಿಗೆ ಪತ್ರ ನೀಡಬಾರದೆಂದು ಮುಖ್ಯ ಗುರುಗಳಿಗೆ ಸೂಚನೆಯನ್ನು ನೀಡಬೇಕೆಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷರು ಪ್ರಕಾಶ ಆರ್ ಸಂಘಟನಾ ಕಾರ್ಯದರ್ಶಿಗಳು ಜಾಡದುರ್ಗಪ್ಪ , ಚಿಂತ್ರಪಳ್ಳಿ ಮಂಜು, ಕೈಲಾಸ್ ಕತ್ರಿ ಗ್ರಾಮ ಘಟಕದ ಸಂಘಟನ ಕಾರ್ಯದರ್ಶಿ ಅರುಣ್ ಕುಮಾರ್ ಖಜಾಂಚಿಯಾದ ಕೃಷ್ಣ ನಾಯ್ಕ್ ಶಾಲೆಯ ಶಿಕ್ಷಕ ಸಿಬ್ಬಂದಿಗಳು ಇನ್ನು ಮುಂತಾದವರು ಇದ್ದರು…
ವರದಿ, ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030