ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ (ಕೋಗಳಿ ತಾಂಡ) ದ ವತಿಯಿಂದ ಮನವಿ ಸಲ್ಲಿಕೆ…!!!

Listen to this article

ದಿನಾಂಕ 04-12-203 ರಿಂದ ನಾನು ಸಂಬಂಧಪಟ್ಟ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ತಾಸಿಲ್ದಾರ್ ಜಿಲ್ಲಾಧಿಕಾರಿಗಳಿಗೆ , ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಲವಾರು ಬಾರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಾಗೂ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆದಿರುವ ಅಧಿಕಾರಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲೆ ಮಾಡಬೇಕು ಮತ್ತು ಆ ಅಧಿಕಾರಿಯನ್ನ ಕೆಲಸದಿಂದ ವಜಾ ಮಾಡಬೇಕೆಂದು ಹಲವಾರು ಬಾರಿ ಮನವಿಯನ್ನ ಸಲ್ಲಿಸಿದ್ದೇನೆ ಜೊತೆಗೆ ದಿನಾಂಕ 29-06-2024 ರಂದು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕೂಡ ಮನವಿಯನ್ನ ಸಲ್ಲಿಸಿರುತ್ತೇನೆ. ಇದನ್ನೆಲ್ಲಾ ಆಧಾರವಾಗಿಟ್ಟುಕೊಂಡು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಗರಿಬೊಮ್ಮನಹಳ್ಳಿ ಇವರು ಮೂರು ಜನ ಅಧಿಕಾರಿಗಳ ತಂಡವನ್ನ ರಚನೆ ಮಾಡಿ ತನಿಖೆಯನ್ನು ಮಾಡಿ ವರದಿಯನ್ನು ಸಲ್ಲಿಸಲು ಸೂಚಿಸುತ್ತಾರೆ ಮೂರು ಜನ ಅಧಿಕಾರಿಗಳು ನೀಪಕ್ಷಪಾತವಾಗಿ ತನಿಖೆಯನ್ನ ಮಾಡಿ ಈ ಅಧಿಕಾರಿಯು ಸಲ್ಲಿಸಿರುವ ದಾಖಲೆಗಳು ಸುಳ್ಳು ಮತ್ತು ಇವರ ಆಯ್ಕೆಯು ಕಾನೂನು ವಿರುದ್ಧವಾಗಿದೆ
ಎಂದು ವರದಿಯನ್ನ ಮಾನ್ಯ ಕಾರ್ಯನಿರ್ವ ಕಾಧಿಕಾರಿಗಳು ಹಗರಿಬೊಮ್ಮನಹಳ್ಳಿ ಇವರಿಗೆ ವರದಿಯನ್ನು ಸಲ್ಲಿಸುತ್ತಾರೆ. ಆ ವರದಿಯನ್ನ ಮುಂದಿನ ಕ್ರಮಕ್ಕಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಜಯನಗರ ಜಿಲ್ಲಾ ಪಂಚಾಯತ್ ಇವರಿಗೆ ಹಗರಿಬೊಮ್ಮನಹಳ್ಳಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಲ್ಲಿಸುತ್ತಾರೆ . ಹಾಗೂ ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ (ಕೋಗಳಿ ತಾಂಡ) ದ ವತಿಯಿಂದ ವಿಜಯನಗರ ಜಿಲ್ಲಾ ಪಂಚಾಯತ್ ಸಿ ಓ ಅವರಿಗೆ ಎರಡು ಬಾರಿ ಮನವಿಯನ್ನ ಸಲ್ಲಿಸಿದ್ದೇವೆ. ಒಂದು ವೇಳೆ ಅವರ ಮೇಲೆ ಯಾವುದೇ ರೀತಿಯ ಕ್ರಮವನ್ನ ಕೈಗೊಳ್ಳದೆ ಇದ್ದರೆ ತಾಲೂಕು ಪಂಚಾಯಿತಿ ಹಗರಿಬೊಮ್ಮನಹಳ್ಳಿ ಅವರಣದ ಮುಂದೆ ಜಯ ಕರ್ನಾಟಕ ಸಂಘಟನೆ ವತಿಯಿಂದ ಅನಿದಿಷ್ಟ ಅವಧಿ ಧರಣಿ ಮಾಡುತ್ತೇವೆಂದು ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್ ಆರ್ ಹೇಳಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಜಯ ಕರ್ನಾಟಕ ಸಂಘಟನೆಯ ಎರಡು ಬಾರಿ ಮನವಿಯನ್ನ ಡಿಎಸ್ 1 ಸ್ವೀಕರಿಸಿ ಮಾತನಾಡಿದ ಡಿಎಸ್ 1 ಭೀಮೇಶ್ ಲಾಳಿ ಅವರು ಮನವಿಯನ್ನ ಸ್ವೀಕರಿಸಿ ಮಾತನಾಡಿ ಈಗಾಗಲೇ ಡ್ರಾಫ್ಟ್ ರೆಡಿ ಮಾಡಿದ್ದೇವೆ ಇನ್ನೇನು ಸಿ ಓ ಅವರ ಗಮನಕ್ಕೂ ಕೂಡ ಈ ವಿಷಯ ಬಂದಿದೆ. ಇನ್ನು ಒಂದು ಬಾರಿ ಡ್ರಾಪ್ ಪರಿಶೀಲನೆ ಮಾಡಿ ಆ ಅಧಿಕಾರಿಯನ್ನ ನೇಮಕ ಮಾಡಿದ ಪ್ರಾಧಿಕಾರಕ್ಕೆ ಆ ಅಧಿಕಾರಿಯನ್ನ ಕೆಲಸದಿಂದ ವಜಾ ಮಾಡುವಂತೆ ಶಿಸ್ತುಕ್ರಮಕ್ಕೆ ಆದೇಶಿಸುತ್ತೇವೆ ಎಂದು ಹೇಳಿದರು ಆ ಅಧಿಕಾರಿಯನ್ನ ಆಯ್ಕೆ ಮಾಡಿದವರಿಗೆ ತೆಗೆಯುವ ಅಧಿಕಾರ ಇರುತ್ತದೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರ ಗಮನಕ್ಕೆ ತಂದು ಕೆಲಸದಿಂದ ವಜಾ ಮಾಡಬೇಕೆಂದು ಕಟ್ಟು ನಿಟ್ಟಿನ ಆದೇಶವನ್ನು ಮಾಡುತ್ತೇವೆ ಎಂದು ಭರವಸೆಯನ್ನ ನೀಡಿದ್ದಾರೆ .
ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್ ಆರ್ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಜಾಡರ್ ದುರ್ಗಪ್ಪ ಇದ್ದರು…

ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend