ಶ್ರೀ ರಾಮನಗರ (ಕೋಗಳಿ ತಾಂಡ)ದ ಕೋಗಳಿ ಹೋಗುವ ರಸ್ತೆಯಲ್ಲಿರುವ ಊರಿನ ಮಧ್ಯೆ ಇರುವ ಕರೆಂಟಿನ ಕಂಬಗಳು ಯಾವ ರೀತಿ ಇದೆ ಎಂದು ಈ ಫೋಟೋದಲ್ಲಿ ನಾವು ನೋಡಬಹುದು.
ಒಂದೊಂದು ಲೈನು ಕೂಡ 11 ಕೆವಿ ಅಂದ್ರೆ ಹನೊಂದು ಸಾವಿರ ವೋಲ್ಟೇಜ್ ಹೊಂದಿರುವ ಕರೆಂಟ್ ಲೈನ್ ಆಗಿದ್ದು ಕಂಬಗಳು ಬಿಳುವ ಹಂತಕ್ಕೆ ಬಂದಿದ್ದು ಈ ಕಂಬಗಳು ಏನಾರು ಬಿದ್ದರೆ ದೊಡ್ಡದಾದ ಅನಾಹುತ ಆಗುವುದು ಖಂಡಿತಈ ವಿಷಯವಾಗಿ ಹಲವಾರು ಬಾರಿ ಸೆಕ್ಷನ್ ಆಫೀಸರ್ ಯಮನೂರಪ್ಪರಿಗೂ ಲೈನ್ ಮ್ಯಾನ್ ಹನುಮಂತಪ್ಪ ಇವರಿಗೆ ಹೇಳಿದರು ಕೂಡ ನಮ್ಮ ಮನವಿಗೆ ಯಾವುದೇ ರೀತಿಯ ಸ್ಪಂದನೆ ಇರುವುದಿಲ್ಲ. ಸೆಕ್ಷನ್ ಆಫೀಸರ್ ಯಮನಪ್ಪನವರು ನಾವು ಹೇಳಿದಾಗ ನಮ್ಮ ಕಂಪನಿ ತುಂಬಾ ಬಡತನದಲ್ಲಿದೆ ಸದ್ಯ ಹೀಗೆ ಇರಲಿ ಏನು ಆಗುವುದಿಲ್ಲ ಎಂಬ ಉಡಾಫೆ ಉತ್ತರವನ್ನು ನೀಡುತ್ತಾರೆ ಕರೆಂಟ್ ಟಿಸಿಯ ಕೆಳಗಿರುವ ಬಾಕ್ಸ್ ಕೆಟ್ಟು ಹೋಗಿದ್ದು ಯಾವುದಾದರೂ ಮಕ್ಕಳು ಅದನ್ನು ಅಚನಕ್ಕಾಗಿ ಮುಟ್ಟಿದರೆ ಮುಂದಾಗುವ ಅನಾಹುತಕ್ಕೆ ಯಾರು ಉತ್ತರಕೋಡುತ್ತಾರೆ.
ಮತ್ತು ಆ ಟಿ.ಸಿ ಯ ಸುತ್ತಮುತ್ತ ಸ್ವಚ್ಛತೆಯನ್ನು ಮಾಡಿಸದೆ ನಿರ್ಲಕ್ಷ ವಹಿಸುವ ಅಧಿಕಾರಿಗಳು ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಕಚೇರಿ ಅಧಿಕಾರಿಗಳ ನಿರ್ಲಕ್ಷ ಈ ರೀತಿ ಇರುತ್ತದೆ. ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ಹಗರಿಬೊಮ್ಮನಹಳ್ಳಿ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಕಚೇರಿಯ ಸೆಕ್ಷನ್ ಆಫೀಸರ್, ಸಂಬಂಧಪಟ್ಟ ಅಧಿಕಾರಿಗಳು ಹೊಣೆಗಾರರಾಗಿರುತ್ತಾರೆ. ಎಂದು ಪ್ರಕಾಶ ಆರ್ ಅಧ್ಯಕ್ಷರು ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ (ಕೋಗಳಿ ತಾಂಡ)ರವರು ತಮ್ಮ ಒಂದು ಏಳಿಕೆಯನ್ನು ಪತ್ರಿಕೆಗೆ ಕೊಟ್ಟರು…
ವರದಿ, ಸಂತೋಷ ಮ್ಯಾಗೇರಿ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030