ಸಾಧಕರ ವೇದಿಕೆಯ ಸಾಧನೆಯ ಪರಿಚಯ ಹಂಚಿಕೊಂಡ ಪ್ರಧಾನ ಕಾರ್ಯದರ್ಶಿ :- ಶ್ರೀ ಹಾಲೇಶ್ ಹಕ್ಕಂಡಿ.
ಸಾಧಕರ ವೇದಿಕೆಯ ಸ್ಥಾಪನೆಯ ಕುರಿತು ಸಂಕ್ಷಿಪ್ತ ನೋಟ ನೋಡುವುದಾದರೆ :- ಪ್ರಸ್ತುತ ದಿನಮಾನಗಳಲ್ಲಿ ಕನ್ನಡಮ್ಮನ ಸೇವೆಗಾಗಿ ನಾಡಿನಲ್ಲೆಲ್ಲಾ ಹಲವಾರು ಸಂಘ, ಸಂಸ್ಥೆಗಳು, ಸಂಘಟನೆಗಳು ಚೌಕಟ್ಟಿನಲ್ಲಿ ಹೆಜ್ಜೆ ಹಾಕುತ್ತಿವೆ. ತಾಯಿ ಭುವನೇಶ್ವರಿ ಸೇವೆಗಾಗಿ ನಾವುಗಳು ಸದಾ ಸಿದ್ಧ ಎಂದು ಕಂಕಣ ತೊಟ್ಟು ಕನ್ನಡ ನಾಡು ನುಡಿಗಾಗಿ ತಮ್ಮದೇ ಆದ ಹೊಸತನವನ್ನು ಈ ನಾಡಿನಲ್ಲಿ ಬಿತ್ತರಿಸುವ ಕೆಲಸ ಬಲು ಜೋರಾಗಿಯೇ ನಡೆದಿದೆ.
ಕನ್ನಡ ಸಾಹಿತ್ಯಕ್ಕಾಗಿ, ಸೇವೆಗಾಗಿ ಕನ್ನಡ ನಾಡಿನ ಜನತೆ ತನು,ಮನ,ಧನ ಅರ್ಪಿಸುವಂತಹ ಸನ್ನಿವೇಶಗಳನ್ನ ಕಂಡ ಯುವ ಸಾಹಿತಿ ಕುಮಾರ ಕಾರ್ತಿಕ್ ಆಚಾರ್ಯ ರವರ ಮನದಲ್ಲಿ ಕನ್ನಡಮ್ಮನ ಸೇವೆಗಾಗಿ ನಮ್ಮಿಂದ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ ದಿನಾಂಕ 08-11-2020 ರಂದು ಹಿರಿಯ ಸಾಹಿತಿಗಳಾದ ಹಾಲಪ್ಪ ಚಿಗಟೇರಿ ಅವರೊಂದಿಗೆ ಮುಕ್ತ ಮನಸ್ಸಿನಿಂದ ವಿಷಯಗಳನ್ನು ವಿನಿಮಯ ಮಾಡಿಕೊಂಡಾಗ ಯುಟ್ಯೊಬ್ ಚಾನಲ್ ಮುಖಾಂತರ ನಾಡಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದರೂ ಎಲೆಕಾಯಿಮರಿಗಳಾಗಿ ಸಮಾಜಕ್ಕೆ ಗುರುತಿಸಿಕೊಳ್ಳದೇ ಉಳಿದಿರುವ ಸಾಧಕರನ್ನು ನಾವು ನೇರವಾಗಿ ಸಂದರ್ಶನದ ಮೂಲಕ ಪರಿಚಯಿಸೋಣ ಎಂಬ ಚರ್ಚೆಯೊಂದಿಗೆ ಒಂದು ದಿವಸ ಅದರ ಬಗ್ಗೆಯೇ ಇಟ್ಟಿಗಿ ಹಾಚಿ ಸರ್ ಮನೆಯಲ್ಲಿ ತ್ರಿವೇಣಿ ಸಂಗಮದಂತೆ ಹಾಚಿ, ಕಾರ್ತಿಕ್ ಆಚಾರ್ಯ ಹಾಗೂ ನಾನು ಅಂದರೆ ಹಾಲೇಶ್ ಹಕ್ಕಂಡಿ ಒಂದು ಪುಟ್ಟ ಸಭೆಯಲ್ಲಿ ವೇದಿಕೆಯ ಸ್ಥಾಪನೆಗೆ ಅಡಿಗಲ್ಲು ಹಾಕಲಾಯಿತು. ಈ ಮೊದಲೇ ಕಾರ್ತಿಕ್ ಹಾಗೂ ಹಾಚಿ ಸರ್ ರವರು ಅಭಿಪ್ರಾಯದಂತೆ ಯುಟ್ಯೊಬ್ ಚಾನಲ್ ಮೂಲಕ ಸಂದರ್ಶನ ಮಾಡಲು ನಮಗೆ ಒಂದು ವೇದಿಕೆ ಬೇಕು ಎಂದು ಅಂದೇ ಸತತ ನಾಲ್ಕು ಘಂಟೆಗಳ ಕಾಲ ತ್ರಿಮೂರ್ತಿಗಳಾದ ನಾವು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದು ” ಸಾಧಕರ ವೇದಿಕೆ ಇಟ್ಟಿಗಿ ಕೇಂದ್ರ ಎಂಬ ಹೆಸರಿನ ವೇದಿಕೆಯ ಅಡಿಯಲ್ಲಿ ಯುಟ್ಯೊಬ್ ಚಾನಲ್ ಮೂಲಕ ಸಾಧಕರ ಸಂದರ್ಶನ ನಡೆಸೋಣ ಎಂದು ಅಂತಿಮವಾಗಿ ತೀರ್ಮಾನಕ್ಕೆ ಬಂದು ಅಂದೇ ವೇದಿಕೆಯ ಗುರಿ ಉದ್ದೇಶಗಳನ್ನು ಅವಲೋಕಿಸಿ ಸಿದ್ದಪಡಿಸಲಾಯಿತು.
ಸಾಧಕರ ವೇದಿಕೆಯ ಉದ್ದೇಶದಂತೆ ಸಾಧಕರನ್ನು ಪರಿಚಯಿಸುವ ಒಂದು ಕಾರ್ಯ ಹಿರಿಯ ಕಿರಿಯ ಕವಿ ಸಾಹಿತಿಗಳೊಂದಿಗೆ, ಹಾಗೂ ಸಾಧಕರ ವೇದಿಕೆಯ ಸರ್ವ ಸದಸ್ಯರ, ಉತ್ಸಾಹದಿಂದ ಜೋರಾಗಿಯೇ ನಡೆಯುತ್ತಿದೆ.
ಸಾಧಕರ ವೇದಿಕೆಯ ಪದಾಧಿಕಾರಿಗಳ ಸಹಕಾರದಲ್ಲಿ ಹಲವಾರು ಆನ್ಲೈನ್ ಕಾರ್ಯಕ್ರಮಗಳನ್ನು ನಡೆಸಿದ್ದು, ಸಾಧಕರ ಸ್ಥಳಗಳಿಗೆ ತೆರಳಿ ಭೇಟಿಯಾಗಿ ಒಟ್ಟು 15 ಜನ ಸಾಧಕರನ್ನು ಗುರುತಿಸಿ ನೇರವಾಗಿ ಯುಟ್ಯೊಬ್ ಚಾನಲ್ ಮುಖಾಂತರ ಸಂದರ್ಶಿಸಿ ಸಮಾಜಕ್ಕೆ ಪರಿಚಯಿಸುವಂತಹ ಒಂದು ಸಣ್ಣ ಪ್ರಯತ್ನ ಫಲಕಾರಿಯಾಗಿದೆ ಎಂದು ಹೇಳಲಿಕ್ಕೆ ಇಷ್ಟ ಪಡುತ್ತೇನೆ.
ಇದರನ್ವಯ ಸಾಹಿತ್ಯಾಸಕ್ತರ, ಸಮಾಜ ಸೇವಕರ ಸಹಕಾರದಿಂದ ಹಾಗೂ ಗುರುಹಿರಿಯರ ಮಾರ್ಗದರ್ಶನದಿಂದ,ಪದಾಧಿಕಾರಿಗಳ ಜೊತೆಗೂಡಿ ದಿನಾಂಕ 15-08-2023 ರಂದು ಹೂವಿನ ಹಡಗಲಿಯ ರಂಗಭಾರತಿ ಭವ್ಯ ವೇದಿಕೆಯಲ್ಲಿ ಸಾಧಕರ ವೇದಿಕೆ ಉದ್ಘಾಟನಾ, ಪದಗ್ರಹಣ ಹಾಗೂ ಆಯ್ದ ಕ್ಷೇತ್ರಕ್ಕನುಗುಣವಾಗಿ ಐದು ಮಹನೀಯರಿಗೆ ರಾಜ್ಯ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಮತ್ತು ತಾಲೂಕಿನ ಆಯ್ದ ಕ್ಲಸ್ಟರ್ ನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ದೇಶದ ರಕ್ಷಣೆಯಲ್ಲಿ ನಮ್ಮ ಪಾತ್ರ ” ಎಂಬ ವಿಷಯದಡಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಪ್ರಥಮ,ದ್ವಿತೀಯ ಸ್ಥಾನ ಗಳಿಸಿದ 80 ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಈ ಕ್ಷಣ ನಿಮ್ಮ ಮುಂದೆ ಅದ್ದೂರಿಯಾಗಿ ಸಾಧಕರ ವೇದಿಕೆಯ ” ಪ್ರಥಮ ವರ್ಷದ ವಾರ್ಷಿಕೋತ್ಸವ ” ಮುಸುಕಿನೂರ ನಾಡಿನಲ್ಲಿ ಸಂಗಮ ಸಂಭ್ರಮ 2024 ರ ವ್ಯಾಕ್ಯದಡಿ ಅತೀ ಸಂಭ್ರಮ ಸಡಗರದಿಂದ ಮುಸುಕಿನ ಕಲ್ಲಹಳ್ಳಿಯಲ್ಲಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿಯಾಗಿ ನಾವೇಲ್ಲರೂ ಇಂದು ಈ ಸಭಾಂಗಣದಲ್ಲಿ ವಿಕ್ಷಿಸುತ್ತಿರುವುದು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿಕ್ಕೆ ಕಾರಣಿಭೂತರಾದವರನ್ನು ಧನ್ಯತಾ ಭಾವದಿಂದ ಪದಾಧಿಕಾರಿಗಳ ಪರವಾಗಿ ಮತ್ತು ವೈಯಕ್ತಿಕವಾಗಿ ಧನ್ಯವಾದಗಳನ್ನು ತಿಳಿಸುವುದು ಈ ಕ್ಷಣ ಸಾಧಕರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ನನ್ನ ಜವಾಬ್ದಾರಿ ಮತ್ತು ಕರ್ತತವ್ಯವಾಗಿದೆ.
ಈ ಹಿಂದೆ ನಡೆದ ಕಾರ್ಯಕ್ರಮಕ್ಕೆ ಸಹಕರಿಸಿದವರೆಲ್ಲರಿಗೂ ಮತ್ತೊಮ್ಮೆ ಧನ್ಯವಾದ ತಿಳಿಸುತ್ತಾ ಈ ದಿನದ ಕಾರ್ಯಕ್ರಮಕ್ಕೆ ತನು,ಮನ,ಧನ ಸಹಕರಿಸಿದ ಶ್ರೀ ಅಶೋಕ್ ಅರ್ಕಸಾಲಿ, ಶ್ರೀ ಬಸವರಾಜ ಕರುವಿನ, ಶ್ರೀ ಸೋ.ದಾ.ವಿರೂಪಾಕ್ಷ ಗೌಡರು, ಹೊಸಪೇಟೆ, ಶ್ರೀ ಶ್ರೀನಿವಾಸ ಚಿತ್ರಗಾರ ಕೊಪ್ಪಳ, ಚಿರಂಜೀವಿ ಪಾರ್ಥ್ ನಂದೀಶ್ ಹೊಸಮಠ್, ಶ್ರೀಮತಿ ನಯನಮಲ್ಲಿನಾಥ, ಶ್ರೀ ಬಿ.ಎಂ ದೊಡ್ಡಬಸಯ್ಯ, ಶ್ರೀ ಕೆಂಚಪ್ಪ ಸಿರಗುಪ್ಪ, ಮತ್ತು ಮಹಿಳಾ ಅಭ್ಯುದಯ ಸಂಸ್ಥೆ ಬನ್ನಿಕಲ್ಲ, ಶ್ರೀ ಬಸವರಾಜ ಆಚಾರ್ಯ ಇವರಿಗೆ ಹಾಗೂ ಪ್ರತ್ಯೇಕ ಪರೋಕ್ಷವಾಗಿ ಸಹಕರಿಸಿದ ಗ್ರಾಮದ ನಾಗರೀಕರೆಲ್ಲರಿಗೂ ಸಾಧಕರ ವೇದಿಕೆಯ ಪದಾಧಿಕಾರಿಗಳಿಂದ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತಾ,
” ನುಡಿದಂತೆ ನಡೆ ” ಎಂಬ ವಾಕ್ಯವನ್ನು ” ನಡೆದಂತೆ ನುಡಿ ” ಎಂಬಂತೆ ಹಿರಿಯರು ಹೇಳಿದಾಗೆ ಮೊದಲು ಕೆಲಸ ಆಮೇಲೆ ಮಾತು ಎಂಬುದನ್ನು ಸಾಧಕರ ವೇದಿಕೆ ಇಂದು ಸಾಭೀತು ಮಾಡುವುದರೊಂದಿಗೆ ಅದಕ್ಕೆ ಸಾಕ್ಷಿಯಾಗಿ ಈ ಅದ್ದೂರಿ ಕಾರ್ಯಕ್ರಮ ಎಂದರೆ ತಪ್ಪಾಗಲಾರದು.
ಪದಾಧಿಕಾರಿಗಳ ಸಹಕಾರದಿಂದ ಸಾಧಕರನ್ನು ಗುರುತಿಸಿ ಸಂದರ್ಶನ ಮಾಡಲು ಗುರು ಹಿರಿಯ ಸಾಹಿತಿಗಳ ಬಳಗ ನಮ್ಮ ಸಾಧಕರ ವೇದಿಕೆಗೆ ಪ್ರೋತ್ಸಾಹ ,ಸಹಕಾರ ನೀಡಿ ಹರಸಿ ಹಾರೈಸಿ ಆಶೀರ್ವಾದಿಸಲೆಂದು ಕೇಳುತ್ತಾ ಇಲ್ಲಿಯವರೆಗೆ ನನ್ನ ನುಡಿಗಳನ್ನು ಆಲಿಸಿದ ತಮ್ಮೇಲ್ಲರಿಗೂ ಅನಂತ ಅನಂತ ಧನ್ಯವಾದಗಳು….
ವರದಿ. ಪ್ರಕಾಶ್ ಕಲ್ಮನಿ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030