ವರದಿ. ವಿರೇಶ್ ಸಿರುಗುಪ್ಪ

ಶಾಲಿಗನೂರು ಗ್ರಾಮ:ಸಾಲಭಾದೆಗೆ ರೈತಮಹಿಳೆ-ಬಲಿ*-ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ಶಾಲಿಗನೂರು ಗ್ರಾಮದಲ್ಲಿ ,ಸಾಲ ಭಾದೆ ತಾಳಲಾರದೆ ತನ್ನ ಇಬ್ಬರು ಮಕ್ಕಳೊಂದಿಗೆ ರೈತ ಮಹಿಳೆ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಮೃತರನ್ನು ನಾಗರತ್ನ,ಗಿರಿಜಾ,ಶೃತಿ ಎಂದು ಗುರುತಿಸಲಾಗಿದೆ.ಮೃತ ಮಹಿಳೆ ಆಂಧ್ರ ಬ್ಯಾಂಕ್ನಲ್ಲಿ 5.6 ಲಕ್ಷ ಹಾಗೂ ಖಾಸಗಿಯಾಗಿ 15 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.20 ಲಕ್ಷಕ್ಕೂ ಅಧಿಕವಾಗಿದ್ದ ಸಾಲದ ಹೊರೆಯನ್ನು ತೀರಿಸಲಾಗದ 40 ವರ್ಷದ ನಾಗರತ್ನ ಇಂದು ತಮ್ಮ 12 ವರ್ಷದ ಮಗಳು ಶೃತಿ ಹಾಗೂ 7 ವರ್ಷದ ಮಗಳು ಗಿರಿಜಾಳೊಂದಿಗೆ ಕರೆಗೆ ಹಾರಿ ಆತ್ಮಹತ್ಯೆಗೀಡಾಗಿದ್ದಾರೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
