ಸಿರವಾರ ತಾಲೂಕ ಪ್ರಾ.ಶಾ.ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಜಾಹೀದ್ ಪಾಶಾ, ಪ್ರ.ಕಾ.ಯಾಗಿ ರಾಘವೇಂದ್ರ ಆಯ್ಕೆ
ಸಿರವಾರ : ಸಿರವಾರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ತಾಲೂಕ ಅಧ್ಯಕ್ಷರಾಗಿ ಜಾಹೀದ್ ಪಾಶಾ ಇವರನ್ನು ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರು ಘೋಷಿಸಿದ್ದಾರೆ.
ಸಿರವಾರ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ರಾಜ್ಯ ಸಂಘದ ಆದೇಶದ ಮೇರೆಗೆ ಸಿರವಾರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನೆಯ ಹಿತದೃಷ್ಟಿಯಿಂದ ತಾಲೂಕ ಅಡ್ಯಕ್ ಸಮೀತಿಯನ್ನು ರಚಿಸಿ ಸಿರವಾರ ತಾಲೂಕ ಅಧ್ಯಕ್ಷರನ್ನಾಗಿ ಜಾಹೀದ್ ಪಾಶಾ, ಪ್ರಧಾನ ಕಾರ್ಯದರ್ಶೀಯಾಗಿ ರಾಘವೇಂದ್ರ, ಮಹಿಳಾ ಉಪಾಧ್ಯಕ್ಷರಾಗಿ ನಿರ್ಮಲಾ, ಇನ್ನೋರ್ವ ಉಪಾಧ್ಯಕ್ಷರಾಗಿ ಪವನ್ ಕುಮಾರ, ಖಜಾಂಚಿಯಾಗಿ ಬಸವರಾಜ ಕಲ್ಮಾಲ ಇವರುಗಳನ್ನು ತಾಲೂಕ ಪದಾಧಿಕಾರಿಗಳನ್ನಾಗಿ ಸಂಘದ ಬೈಲಾ ನಿಯಮಗಳು ಹಾಗೂ ರಾಜ್ಯ ಸಂಘದ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಆದೇಶ ಪತ್ರದ ಮೂಲಕ ಪ್ರಕಟಿಸಲಾಗಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030