ಶಾಖಾಪೂರ, ಸಿಂಗಡದಿನ್ನಿ ಗ್ರಾಮದ ಆರಾಧ್ಯ ದೈವನಾದ ಶ್ರೀ ಶ್ರೀ ಶ್ರೀ ದಂಡಗುಂಡ ಬಸವೇಶ್ವರ ಜಾತ್ರೆ…!!!

“ಸಿರವಾರ – ಡಿಸೆಂಬರ್ 29,30, 31ಕ್ಕೆ ಶಾಖಾಪೂರ, ಸಿಂಗಡದಿನ್ನಿ ಗ್ರಾಮದ ಆರಾಧ್ಯ ದೈವನಾದ ಶ್ರೀ ಶ್ರೀ ಶ್ರೀ ದಂಡಗುಂಡ ಬಸವೇಶ್ವರ ಜಾತ್ರೆ. ಸಿರವಾರ ತಾಲೂಕಿನ ಶಾಖಾಪೂರ, ಸಿಂಗಡದಿನ್ನಿ ಗ್ರಾಮದ ಆರಾಧ್ಯ ದೈವನಾದ ಶ್ರೀ ಶ್ರೀ ದಂಡಗುಂಡ ಬಸವೇಶ್ವರ ಜಾತ್ರೆ ವಿಶೇಷವಾಗಿ ನಡೆಯುತ್ತದೆ, 29ನೇ ತಾರೀಕು ರಾತ್ರಿ ಪುರವಂತಿಕೆಯೊಂದಿಗೆ ನಂದಿಕೋಲು ಸೇವೆ ಹಾಗೂ ಸಕಲವಾದ್ಯಗಳೊಂದಿಗೆ ಕಳಸರೋಹಣ ನಡೆಯುತ್ತದೆ , ಮರುದಿನ 30ನೇ ತಾರೀಕು ಸೋಮವಾರದಂದು ಬೆಳಿಗ್ಗೆ ರುದ್ರಭಿಷೇಕ ಪೂಜೆ ನೆರವೇರುತ್ತದೆ, ತದನಂತರ ಡೊಳ್ಳು ವಾದಿದೊಂದಿಗೆ ಉಚ್ಚಾಯ ನಿಲ್ಲಿಸುವುದು ಕಾರ್ಯಕ್ರಮ ಜರಗುತ್ತದೆ , ಸಾಯಂಕಾಲ ವಿಜೃಂಭಣೆಯಿಂದ ಉಚ್ಚಾಯ ಜರಗುತ್ತದೆ. ಅದೇ ರೀತಿ ಮರುದಿನ 31ನೇ ತಾರೀಖು ಬೆಳಿಗ್ಗೆ ಲಕ್ಕಿ ಡ್ರಾ ಕಾರ್ಯಕ್ರಮ ಇರುತ್ತದೆ. ಅದಾದ ನಂತರ ಸಾಯಂಕಾಲ ನಂದಿಕೋಲು ಸೇವೆ ಮುಖಾಂತರ ಉಚ್ಚಾಯ ಮಹೋತ್ಸವ ”ಕಡುಬಿನ ಕಾಳಗ ”ಜರುಗುತ್ತದೆ. ಹಾಗೂ ಹೂವಿನ ಹರಾಜು ಕಾರ್ಯಕ್ರಮ ನಡೆಯುತ್ತದೆ. ಕೊನೆಯದಾಗಿ ತೊಟ್ಟಿಲು ಕಾರ್ಯಕ್ರಮ ಜರುಗುತ್ತದೆ. ಸಹಸ್ರ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮದ ಜನರು ಬಂದು ಜಾತ್ರಾ ಮಹೋತ್ಸವ ನೋಡಿ, ಶ್ರೀ ದಂಡಗುಂಡ ಬಸವೇಶ್ವರನ ಕೃಪೆಗೆ ಪಾತ್ರರಾಗ ಬೇಕು. ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನದ ಸೇವಾ ಸಮಿತಿ ಪ್ರತಿ ವರ್ಷದ ಪದ್ಧತಿ ಈ ವರ್ಷವೂ ಕೂಡ ಜಾತ್ರೆ ಉತ್ಸವ ವಿಜೃಂಭಣೆಯಿಂದ ಜರುಗಲಿದೆ, ಈಗಾಗಲೇ ಗ್ರಾಮದ ಭಕ್ತರು ಸಕಲ ಸಿದ್ಧತೆಗಳು ಮಾಡಿ ಕೊಂಡಿದ್ದಾರೆ. ಸುತ್ತಮುತ್ತಲಿನ ಭಕ್ತರ ಬಂದು ಜಾತ್ರೆಯನು ಯಶಸ್ವಿಗೊಳಿಸಬೇಕು ವಿನಂತಿ….

ವರದಿ. ಅನಿಲ್ ಸಿರವಾರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *