ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಚಿವರೊಂದಿಗೆ ಚರ್ಚಿಸುವೇ – ಬಸನಗೌಡ ಬಾದರ್ಲಿ ಶಾಸಕರು…!!!

Listen to this article

ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಚಿವರೊಂದಿಗೆ ಚರ್ಚಿಸುವೇ – ಬಸನಗೌಡ ಬಾದರ್ಲಿ ಶಾಸಕರು.

ಸಿಂಧನೂರು: ಸಿಂಧನೂರು ನಗರದಲ್ಲಿ ಬೀದಿ ವ್ಯಾಪಾರಸ್ಥರ ಸತ್ಯಾಗ್ರಹದಲ್ಲಿ ಪಾಲ್ಗೊಂಡ ವಿಧಾನಪರಿಷತ್ ಸದಸ್ಯರು. ಸರದಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬೇಟಿ ನೀಡಿ ನಿಮ್ಮ ಜೊತೆ ನಾನು ಇರುತ್ತೇನೆ, ಸರ್ಕಾರದ ಮಟ್ಟದಿಂದ ಪರ್ಯಾಯ ವ್ಯವಸ್ಥೆ ಮಾಡಿಸಲು ಸಚಿವರೊಂದಿಗೆ ಚರ್ಚಿಸಿ ಹಾಗೂ ಅಧಿಕಾರಿಗಳೊಂದಿಗೆ ಶೀರ್ಘವೆ ಸಭೆಯನ್ನು ಕರೆದು ಪರಿಹರಿಸಲು ಮುಂದಾಗುತ್ತೇನೆ ಎಂದು ತಿಳಿಸಿ. ‘ನಗರಾಭಿವೃದ್ಧಿ, ಪೌರಾಡಳಿತ ಸಚಿವರು ಮತ್ತು ಇಲಾಖೆಯ ನಿರ್ದೇಶಕರು ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾನವೀಯತೆ ದೃಷ್ಟಿಯಿಂದ ಎಲ್ಲಾ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಭರವಸೆ ನೀಡಿದರು.
ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿಯಿಂದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಮೂರನೇ ದಿನವಾದ ಗುರುವಾರ ಭೇಟಿ ನೀಡಿ ಅವರು ಮಾತನಾಡಿದರು.
ಎಐಸಿಸಿಟಿಯು ರಾಜ್ಯ ಮುಖಂಡೆ, ವಕೀಲೆ ಲೇಖಾ ಮಾತನಾಡಿ,
ಸರದಿ ಉಪವಾಸ ಸತ್ಯಾಗ್ರಹ
‘ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿರುವುದೇ ಕಾನೂನುಬಾಹಿರ, ನಗರಸಭೆಯಿಂದ ರಚಿಸಿದ ಪಟ್ಟಣ ಅಭಿವೃದ್ಧಿ ಸಮಿತಿಯಿಂದ ನೋಟಿಸ್ ಕೊಡಬೇಕು. ಅಲ್ಲದೇ ವ್ಯಾಪಾರಿಗಳು
ಅತಿಕ್ರಮಿಸಿರುವ ಬಗ್ಗೆ ಸೂಕ್ತ ದಾಖಲಾತಿ ನೀಡಬೇಕು. 2014 ಮತ್ತು 2019 ಬೀದಿಬದಿ ವ್ಯಾಪಾರಿಗಳ ಅಧಿನಿಯಮದ ಅನ್ವಯ ಗ್ಯಾರೇಜ್, ವರ್ಕ್ ಶಾಪ್,
ಕಾರ್ಪೆಂಟರ್ ಅವರುಗಳು ಇದೇ ಕಾನೂನು ವ್ಯಾಪ್ತಿಗೊಳಪಡುತ್ತಾರೆ. ದಿನದ ಆದಾಯ ₹499ಕ್ಕಿಂತ ಕಡಿಮೆ ಇರುವ ಯಾವುದೇ ವ್ಯವಹಾರ ಬೀದಿಬದಿ ಅಧಿನಿಯಮದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಜನಸಂದಣಿ ಇರುವ ಪ್ರದೇಶದಲ್ಲಿಯೇ ಇಂತಹ ವ್ಯವಹಾರಗಳಿಗೆ ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು.

ಪ್ರಗತಿಪರ ಬೀದಿಬದಿ ವ್ಯಾಪಾರಸ್ಥರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಾಬು, ಕೊಪ್ಪಳ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಮುಖಂಡರಾದ ವಿಜಯ ದೊರೆರಾಜ್, ಕೇಶವ ನಾಯಕ್, ಪರಶುರಾಮ, ಬಾಬ‌ರ್ ಧರಣಿ ನಿರತರನ್ನು ಬೆಂಬಲಿಸಿ ಮಾತನಾಡಿದರು. ಹೋರಾಟ ಸಮಿತಿಯ ಸಂಚಾಲಕರಾದ ನಾಗರಾಜ , ಟಿ.ಹುಸೇನ್‌ಸಾಬ್‌, ಬಿ.ಎನ್.ಯರದಿಹಾಳ, ಬಸವರಾಜ್ ಬಾದರ್ಲಿ, ವಸೀಮ್, ಅಮೀನ್‌ಸಾಬ್ ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend