ಗುರು ಶಿಷ್ಯರ ಮಹಾ ಸಂಗಮ…!!!

ಗುರು ಶಿಷ್ಯರ ಮಹಾ ಸಂಗಮ

ಲಿಂಗಸೂಗೂರು : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು,ಪ್ರೌಢ ಶಾಲಾ ವಿಭಾಗದಲ್ಲಿ 2001-2002ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಗುರು ಶಿಷ್ಯರ ಮಹಾಸಂಗಮ ಕಾರ್ಯಕ್ರಮ ಜರುಗಿತು.

ವೀ.ವಿ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಳೆ ವಿದ್ಯಾರ್ಥಿಗಳು ಮಾತನಾಡಿ ತಮ್ಮ ಶಾಲಾ ದಿನಗಳ ಕುರಿತಾದ ನೆನಪುಗಳನ್ನು ಮೆಲುಕು ಹಾಕಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕರಾದ ಎಂ.ಎಸ್ ಮಾಲಗತ್ತಿ, ಶಂಕರಗೌಡ ಗೌಡರ್, ಶರಣಪ್ಪ, ಷಣ್ಮುಖಪ್ಪ ಮಡ್ಡಿ, ಮಹೇಶ ನಂದಿಕೋಲಮಠ, ಈಶ್ವರ ಮೇಟಿ, ಶಿಕ್ಷಕರಾದ ಮುರಳೀಧರ ಕುಲಕರ್ಣಿ, ಶಂಕರ್ ರಾಠೋಡ, ಉಮಾಕಾಂತರಾವ್, ಶಕುಂತಲಾ, ಶಶಿರೇಖಾ, ಶ್ಯಾಮಲಾ, ಚಂದ್ರಕಲಾ ಸೇರಿದಂತೆ ಇನ್ನಿತರರಿಗೆ ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು…

ವರದಿ. ಲಿಂಗರಾಜ್ ತಡಕಲ್

Leave a Reply

Your email address will not be published. Required fields are marked *