ವೈದ್ಯ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಶರಣ ಬಸವರಾಜ ದೇವರಡ್ಡಿ ಅವರಿಗೆ ಸನ್ಮಾನ…
ಸಿಂಧನೂರು:ಇತ್ತೀಚೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಕರ್ನಾಟಕ ಪ್ರೆಸ್ ಕ್ಲಬ್ ಪ್ರಧಾನ ಸಮಾರಂಭದಲ್ಲಿ ಸಿಂಧನೂರಿನ ಕೊಪ್ಪಳ ಗವಿಸಿದ್ದೇಶ್ವರ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಶರಣಬಸವರಾಜ ದೇವರಡ್ಡಿ ಇವರಿಗೆ ವೈದ್ಯ ಸೇವಾರತ್ನ ಪ್ರಶಸ್ತಿ ನೀಡಿಗೌರವಿಸಲಾಯಿತು. ಈ ಪ್ರಶಸ್ತಿ ಪಡೆದ ಡಾ.ಶರಣಬಸವರಾಜ ದೇವರೆಡ್ಡಿ ಪಾಟೀಲ ಇವರಿಗೆ ಇಂದು ವನಸಿರಿ ಫೌಂಡೇಶನ್ ವತಿಯಿಂದ ಸಿಂಧನೂರಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ, ಶಂಕರಗೌಡ ಎಲೆಕೂಡ್ಲಿಗಿ, ಆದನಗೌಡ ಎಲೆಕೂಡ್ಲಿಗಿ, ರಾಜು ಬಳಗಾನೂರ, ವೀರಭದ್ರಯ್ಯ ತಿಮ್ಮಾಪೂರ, ವೆಂಕಟರಡ್ಡಿ ಹಡಗಿನಾಳ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ಚನ್ನಪ್ಪ ಕೆ.ಹೊಸಹಳ್ಳಿ ವನಸಿರಿ ಫೌಂಡೇಶನ್ ಜಾಲತಾಣ ಅಧ್ಯಕ್ಷರು ಇದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030