ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು.

ದಿನಾಂಕ:- 08/03/2021 ರಂದು ಹರಪನಹಳ್ಳಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಶ್ರೀಮತಿ ಎಂ.ಪಿ. ವೀಣಾ ಮಹಾಂತೇಶ್ ಅಧ್ಯಕ್ಷರು ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ , ಎಂ.ಪಿ.ಪಿ.ಎಸ್.ಟ್ರಸ್ಟ್ ಸಹಯೋಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ರಸ ಪ್ರಶ್ನೆ,ಭಜನಾ ಮತ್ತು ಕೋಲಾಟ ಸ್ಪರ್ಧೆ ಹಮ್ಮಿಕೊಂಡಿತ್ತು . ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಿದ್ದರು. ನಂದಿಬೇವೂರು, ಬಾಗಳಿ, ಹರಕನಾಳು, ತೆಲಿಗಿ, ದೇವರ ತಿಮ್ಮಲಾಪುರ, ಹಲುವಾಗಲು, ನೀಲಗುಂದ, ಕುಂಚೂರು, ನಿಟ್ಟೂರು, ದುಗ್ಗಾವತಿ, ಅಣಿಮೇಗಳ ತಂಡ, ವ್ಯಾಸನ ತಾಂಡ , ಚಿಗಟೇರಿ, ಸಾಸ್ವೆಹಳ್ಳಿ, ನಿಲುವಂಜಿ ಮತ್ತು ಅನೇಕ ಗ್ರಾಮಗಳಿಂದ ಮಹಿಳೆಯರು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೀಮತಿ ನಾಗರತ್ನಮ್ಮ ಸೋಗಿ ರಂಗಕಲಾವಿದೆ, ಶ್ರೀಮತಿ ಲಲಿತಮ್ಮ ಸಮಾಜ ಸೇವಕರು ಹರಪನಹಳ್ಳಿ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೀಮತಿ ರೇಖಮ್ಮ ಚಿಗಟೇರಿ , ರೈತ ಮಹಿಳೆ ಶ್ರೀಮತಿ ಗೋಣಿ ಬಸಮ್ಮ ಮಾಡ್ಲಿಗೆರೆ, ಸಮಾಜಸೇವಕರು ಶ್ರೀಮತಿ ವಿಶಾಲಾಕ್ಷಮ್ಮ ಹುಲಿಕಟ್ಟಿ, ಶ್ರೀಮತಿ ಚೌಡಿಗೆ ರಕ್ಕಮ್ಮ ರೈತ ಮಹಿಳೆ, ಶ್ರೀಮತಿ ಇಟಗಿ ಭಾಗ್ಯಮ್ಮ ಕೂಲಿಕಾರ್ಮಿಕರು, ಶ್ರೀಮತಿ ನಾಗನರ್ ಬಸಮ್ಮ ಕೂಲಿ ಕಾರ್ಮಿಕರು, ಶ್ರೀಮತಿ ಸರಸ್ವತಿ ಕ್ರೀಡಾಕ್ಷೇತ್ರ , ಶ್ರೀಮತಿ ಕಾಳಮ್ಮ ತೆಲಿಗಿ ವೈದ್ಯಕೀಯ ಕ್ಷೇತ್ರ ಇವರೆಲ್ಲರಿಗೂ ಸನ್ಮಾನ ಮಾಡಲಾಯಿತು ಮತ್ತು ಕಿರಗೂರಿನ ಗೈಯಾಳ್ಳಿಗಳು ಚಿತ್ರದ ನಟಿ ಮಾನಸ ಜೋಷಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು ಹಾಗೂ ಶ್ರೀಮತಿ ಸುಭದ್ರಮ್ಮ ಟೀಚರ್, ಶ್ರೀಮತಿ ಮಮ್ತಾಜ್ ಟೀಚ್ಚರ್ ರಸಪ್ರಶ್ನೆ ತೀರ್ಪುಗಾರರಾಗಿ,
ಶ್ರೀಮತಿ ಪುಷ್ಪ ಹೊಸಪೇಟೆ, ಶ್ರೀಮತಿ ಟುವಿ ಟುವಿ ಚಿಗಟೇರಿ ಭಜನಾ ಸ್ಪರ್ಧೆ ತೀರ್ಪುಗಾರರಾಗಿ, ಕೋಲಾಟದ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀಮತಿ ನಾಗರತ್ನಮ್ಮ ಮರಿಯಮ್ಮನಹಳ್ಳಿ ಮತ್ತು ಶ್ರೀಮತಿ ವೈಷ್ಣವಿ ಹರಿಹರ ಹಾಗೂ ಭಾಗ್ಯ ಸಖಿ ಟ್ರಸ್ಟ್ ಹೊಸಪೇಟೆ ಕವಿತಾ ಪ್ರಧಾನ ಕಾರ್ಯದರ್ಶಿ, ಮಹಿಳಾ ಕಾಂಗ್ರೆಸ್, ಶಿವಮೊಗ್ಗ ಹಾಗೂ ಊರಿನ ಮುಖಂಡರು, ಯುವಕರು , ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಊರಿನ ಮುಖ್ಯಸ್ಥರು ಭಾಗವಹಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
