ಸಕಲ ಜೀವರಾಶಿಗಳ ಸುರಕ್ಷತೆ ಹಾಗೂ ಮನುಕುಲ ರಕ್ಷಣೆಗೆ ಗಿಡಮರಬೆಳೆಸುವುದುಅತ್ಯವಶ್ಯಕ:ಹೆಚ್.ಎಸ್.ಸುಂದರರಾಜ್…!!!

Listen to this article

ಸಕಲ ಜೀವರಾಶಿಗಳ ಸುರಕ್ಷತೆ ಹಾಗೂ ಮನುಕುಲ ರಕ್ಷಣೆಗೆ
ಗಿಡಮರಬೆಳೆಸುವುದುಅತ್ಯವಶ್ಯಕ:ಹೆಚ್.ಎಸ್.ಸುಂದರರಾಜ್
ಹಿರಿಯೂರು :
ನಾಡಿದಾದ್ಯಂತ ಸಕಲ ಜೀವರಾಶಿಗಳ ಸುರಕ್ಷತೆ ಹಾಗೂ ಮನುಕುಲದ ರಕ್ಷಣೆಗೆ ಪ್ರತಿಯೊಬ್ಬರೂ ಗಿಡ-ಮರಗಳನ್ನು ತಪ್ಪದೇ ಬೆಳೆಸುವುದು ಅತ್ಯವಶ್ಯಕವಾಗಿದೆ ಎಂಬುದಾಗಿ ಭಾರತೀಯ ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಅವರು ಹೇಳಿದರು.
ನಗರದ ಹೆಚ್.ಸಿ.ಎಸ್. ಬಡಾವಣೆಯಲ್ಲಿ ರೋಟರಿ ಸಂಸ್ಥೆ ಮತ್ತು ರೆಡ್ ಕ್ರಾಸ್ ಸಂಸ್ಥೆಗಳ ಸಹಯೋಗದಲ್ಲಿ “ವಿಶ್ವ ಪರಿಸರ ಸಂರಕ್ಷಣೆ” ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗಿಡಗಳ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಪರಿಸರದ ಸುತ್ತಮುತ್ತಲೂ ಪರಿಸರ ಸಂರಕ್ಷಣೆ ಮಾಡಿಕೊಳ್ಳುವುದರಿಂದ ವಾತಾವರಣ ಉತ್ತಮವಾಗಿರುವುದಲ್ಲದೆ, ನಮ್ಮ ಸುತ್ತಮುತ್ತಲೂ ಒಳ್ಳೆಯ ಗಾಳಿ, ಬೆಳಕು, ನೀರು, ಹಚ್ಚಹಸಿರಿನ ತಂಪಾದ ವಾತಾವರಣ ನಮಗೆ ಸಿಗುವಂತಾಗುತ್ತದೆ, ಇದರಿಂದ ನಮ್ಮೆಲ್ಲರ ಆರೋಗ್ಯ ಉತ್ತಮಗೊಳ್ಳುತ್ತದೆ ಎಂಬುದಾಗಿ ಅವರು ಹೇಳಿದರು.
ರೋಟರಿ ಅಧ್ಯಕ್ಷರಾದ ಹೆಚ್.ಜಿ.ಕಿರಣ್ ಕುಮಾರ್ ರವರು ಮಾತನಾಡಿ,ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ಬೆಳೆಸುವಂತೆ ಸೂಚನೆ ನೀಡಬೇಕು ಎಂದರಲ್ಲದೆ,
ಈಗಿನ ಆಧುನಿಕ ದಿನಗಳಲ್ಲಿ ಪ್ರಕೃತಿದತ್ತವಾಗಿ ಬರುವ ಎಲ್ಲವನ್ನು ನಾವುಗಳು ನಾಶ ಮಾಡುತ್ತಿದ್ದೇವೆ. ಆದ್ದರಿಂದ ಎಲ್ಲವೂ ನಾಶವಾಗಿದೆ. ನಾವೆಲ್ಲರೂ ಒಟ್ಟಾಗಿ ಒಂದೊಂದು ಗಿಡವನ್ನು ನೆಟ್ಟು ಮರವಾಗಿ ಬೆಳೆಸಬೇಕು. ಇದರಿಂದ ನಮ್ಮ-ನಿಮ್ಮೆಲ್ಲರ ಜೀವರಕ್ಷಣೆ ಆಗುತ್ತದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ರೋಟರಿಯ ಹೆಚ್.ಜಿ.ಕಿರಣ್, ಎಲ್.ಆನಂದಶೆಟ್ಟಿ, ಟಿ.ಮಲ್ಲೇಶಪ್ಪ, ಓಂಕಾರ್ ರಾಜೇಶ್, ವಿಕಾಶ್ ಜೈನ್, ಹೆಚ್.ವೆಂಕಟೇಶ್, ಚಂದ್ರಕೀರ್ತಿ ಗುಜ್ಜಾರ್, ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್, ವೈಸ್ ಛೇರ್ಮನ್ ರಾದ ಪ್ರಿಂಟ್ ರಾಘವೇಂದ್ರ, ಸಣ್ಣಭೀಮಣ್ಣ, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಪಿ.ಆರ್.ಸತೀಶ್ ಬಾಬು, ಪರಮೇಶ್ವರ್ ಭಟ್, ಶಶಿಕಲಾರವಿಶಂಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend