ಸಂಡೂರು ಸರ್ಕಾರಿ ಆಸ್ಪತ್ರೆಯಲ್ಲಿ, ” ಉಚಿತ ರಕ್ತದಾನ ಶಿಬಿರ” “ಸಂವಿಧಾನ ದಿನ” ಪೀಠಿಕೆ ಓದುವಿಕೆ ಮೂಲಕ ಕಾರ್ಯಕ್ರಮ ಪ್ರಾರಂಭ. ದಿನಾಂಕ 26.11.2024 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು ” ಪ್ರಿನ್ಸ್ ರಕ್ತ ಬಂಡಾರ ಬಳ್ಳಾರಿ ಇವರ ಸಂಯುಕ್ತಾಕ್ಷರದಲ್ಲಿ, ಫ್ರೆಂಡ್ಸ್ ಮದರ್ ಬ್ಲಡ್ ಬ್ಯಾಂಕ್ ಬಳ್ಳಾರಿ, ಇವರ ಸಮ್ಮುಖದಲ್ಲಿ ಸಂಡೂರು ಸರ್ಕಾರ ಆಸ್ಪತ್ರೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿನೇಶ್ ಅವರ ಪ್ರಾರ್ಥನೆಯೊಂದಿಗೆ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ರಾಮ್ ಶೆಟ್ಟಿ ನಿವೃತ್ತಿ ವೈದ್ಯರು ಮಾತನಾಡಿ ನಮ್ಮ ಸರ್ಕಾರ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಅವಶ್ಯಕತೆ ಇದ್ದು ಸಂಡೂರಿನ ಅಪಘಾತ ಹೆಚ್ಚು ನಡೆಯುತ್ತವೆ. ಮತ್ತೆಹೆರಿಗೆ ಸಮಯದಲ್ಲಿ ರಕ್ತ ಅತ್ಯಂತ ಉಪಯುಕ್ತವಾಗಿದೆ. ಎಂದು ತಿಳಿಸಿದರು ಈ ಸಂದರ್ಭದಲ್ಲಿ H.O. D. ವೈ ಎಮ್ ಪವನ್ ಕುಮಾರ್ ಮಾತನಾಡಿದರು. ಎಲ್ಲಾ ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನ ಒಬ್ಬ ವ್ಯಕ್ತಿಯು ಒಂದು ಸಾರಿ ರಕ್ತವನ್ನು ಕೊಟ್ಟರೆ ಮತ್ತೆ ಮೂರು ತಿಂಗಳು ಒಳಗೆ ಆ ವ್ಯಕ್ತಿಗೆ ಬ್ಲಡ್ ರಿಕವರ್ ಆಗುತ್ತದೆ.ರಕ್ತ ಕೊಡುವುದರಿಂದ ಮನುಷ್ಯನ ಮೆದಳು ಪರಿವರ್ತನೆ ಹೊಸ ರಕ್ತ ಕಣಗಳು ಬೆಳೆಯುತ್ತವೆ. ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಪುಷ್ಪಮಂಜರಿ ಮೇಡಂ, ಡಾ. ರಾಮ ಶೆಟ್ಟಿ,ದಿನೇಶ,ಡಾ. ಸತೀಶ, ಕೊಟ್ರೇಶ್ ಕ್ರಾಂತಿಗಳ ಮುಖಂಡ, ಶಾಂತವೀರಪ್ಪ ಊರಿನ ಮುಖಂಡರು ಮಂಜುನಾಥ್ ಅಂಗಡಿ ಬಳ್ಳಾರಿ, ದಾದಾ ಕಲಂದರ್, ಮುಸ್ತಫ ಆಟೋ ಚಾಲಕರ ಅಧ್ಯಕ್ಷರು, ಸೀರಿಯಲ್ ಸ್ಟಾಪ್ ಈಶ್ವರಪ್ಪ, ತರಕಾರಿ ಆಸ್ಪತ್ರೆಯ ಎಲ್ಲಾ ಸ್ಟಾಪ್ ನರ್ಸಿಗಳು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು,ಈ ಸಂದರ್ಭದಲ್ಲಿ 20ರಿಂದ 25 ಜನರು ಉಚಿತ ರಕ್ತವನ್ನು ಸರ್ಕಾರಿ ಆಸ್ಪತ್ರೆಗೆ ನೀಡಿದರು. ರಕ್ತ ನೀಡಿದ ಪ್ರತಿಯೊಬ್ಬರು ಸಹ ನಮ್ಮಿಂದ ಇನ್ನೊಬ್ಬರ ಜೀವವನ್ನು ಉಳಿಸಬಹುದು ಎಂದು ಖುಷಿ ಸಂತೋಷವನ್ನು ಹಂಚಿಕೊಂಡರು.
ವರದಿ.ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030