ಸಂಡೂರು ಪಟ್ಟಣಕ್ಕೆ ಕೂಡ್ಲಿಗಿ,ಹೊಪೇಟೆ ಮತ್ತು ಬಳ್ಳಾರಿಯಿಂದ ರಾತ್ರಿ 8 ರ ನಂತರ ಸಾರಿಗೆ ವ್ಯವಸ್ಥೆ ಇಲ್ಲದಿರುವ ಬಗ್ಗೆ 20.11.2024 ರಂದು ಕರ್ನಾಟಕ ರಾಜ್ಯ ರೈತ ಸಂಘಟನೆ ಸಾರಿಗೆ ಸಚಿವರಿಗೆ ಮತ್ತು ವ್ಯವಸ್ಥಾಪಕ ನಿರ್ದೇಶಕರು ಕ.ಕ.ರ.ಸಾರಿಗೆ ನಿಗಮ ಕಲಬುರ್ಗಿ ಇವರಿಗೆ ದೂರನ್ನು ನೀಡಲಾಗಿತ್ತು ಈ ದೂರಿನ ವಿಷಯವಾಗಿ ದಿನಾಂಕ 26.11.2024 ರಂದು ವಿಭಾಗೀಯ ನಿಯಂತ್ರಕರಾದ ಇನಾಯತ್ ಬಗ್ಬಾನ್ ಇವರೊಂದಿಗೆ ಸಭೆಯನ್ನು ನಡೆಸಲಾಯಿತು
ಸಂಡೂರಿ ನಿಂದ ಹೊಸಪೇಟೆ ಗೆ ರಾತ್ರಿ ಇದೇ ಶನಿವಾರದಿಂದ ಸಂಡೂರು-ಹೊಸಪೇಟೆಗೆ 8.30 ಕ್ಕೆ ಹೊಸಪೇಟೆ-ಸಂಡೂರಿಗೆ ರಾತ್ರಿ 10.00 ಕ್ಕೆ ಮಂಗಳವಾರದಿಂದ, ಇನ್ನು ಕೂಡ್ಲಿಗಿ ಇಂದ ಸಂಡೂರಿಗೆ ರಿಗೆ 9.00 ಘಂಟೆಗೆ ಓಡಿಸಲಾಗುವುದು
ಇನ್ನು ಸಂ-ದೇವಗಿರಿ ದೇವಗಿರಿ-ಸಂಡೂರು ಮಾರ್ಗವಾಗಿ ಸಂಚರಿಸುವ ಬಸ್ ಗಳನ್ನು ಇಂದಿನಿಂದಲೇ ಕುಮಾರಸ್ವಾಮಿ ದೇವಸ್ಥಾನದ ಕ್ರಾಸ್ ನಲ್ಲಿ ಪ್ರಯಾಣಿಕರನ್ನು ಇಳಿಸದೆ ಕಡ್ಡಾಯವಾಗಿ ದೇವಸ್ಥಾನದ ಆವರಣಕ್ಕೆ ಹೋಗಿ ಬರಲು ಆದೇಶ ಮಾಡಿದರು.
ಇನ್ನು ಸಂಡೂರು-ಬೆಂಗಳೂರು/ಬೆಂಗಳೂರು-ಸಂಡೂರು AC/Volvo/ಪಲ್ಲಕ್ಕಿ ಹವಾನಿಯಂತ್ರಿತ ಬಸ್ ಗಳು ಯಶವಂತನಗರದ ಹತ್ತಿರ ಇರುವ ರೈಲ್ವೆ ಬ್ರಿಡ್ಜ್ ಅಡಿಯಲ್ಲಿ ಹೋಗಲಿಕ್ಕೆ ಸಾಧ್ಯವಿಲ್ಲದಿರುವುದರಿಂದ ಈ ಬಸ್ ಗಳನ್ನು ಈ ಮಾರ್ಗವಾಗಿ ಓಡಿಸಲು ಸಾಧ್ಯವಿಲ್ಲ ಎಂದು ಸಾರಿಗೆ ಅಧಕಾರಿಗಳು ತಿಳಿಸಿದರು, ಸಂಘಟನೆಯು ಈ ಬಸ್ ಗಳು ಓಡಿಸಲು ಇರುವ ಪರ್ಯಾಯ ಮಾರ್ಗವನ್ನು ( ಮಲಿಯಮ್ಮ ದೇವಸ್ಥಾನದ ಎದುರಗಡೆ ಇರುವ ಕಾಂಕ್ರೀಟ್ ರಸ್ತೆಯ ಮೂಲಕ ಪಾಲಿಟೆಕ್ನಿಕ್ ಕಾಲೇಜ್ ಮುಖಾಂತರ ಯಶವಂತನಗರ ದ ಮೂಲಕ ಸಂ-ಕೂ ಮಾರ್ಗಕ್ಕೆ ಸೇರಿಸಬಹುದು ಎಂದು ಸಲಹೆ ನೀಡಿತು, ಇದಕ್ಕೆ ಒಪ್ಪಿದ ಅಧಿಕಾರಿಗಳು ಕೂಡಲೆ ಸ್ಥಳ ಪರಿಶೀಲನೆ ಮಾಡಿ ಹವಾನಿಯಂತ್ರಿತ ಬಸ್ ಗಳನ್ನು ಓಡಿಸಲಾಗುವುದು ಎಂದು ತಿಳಿಸಿದರು.
ಹೊಸಪೇಟೆ-ನರಸಿಂಗಾಪುರ ನೈಟ್ ಹಾಲ್ಟ್ ಬಸ್ ಮಾರ್ಗವು ರದ್ದಾಗಿದ್ದು ಕೂಡಲೆ ಈ ಮಾರ್ಗವನ್ನು ಚಾಲನೆ ಮಾಡಬೇಕೆನ್ನುವ ಅಭಿಪ್ರಾಯಕ್ಕೆ ನರಸಾಪುರ ಗ್ರಾಮದಿಂದ ಬೆಳಿಗ್ಗೆ 5.30 ಮತ್ತು 6.00 ಘಂಟೆ ನಡುವೆ ಸಂಡೂರಿಗೆ NMDC ಯವರು 4 ಬಸ್ ಗಳನ್ನು ಪಡೆದಿದ್ದು ಈ ಬಸ್ ಗಳಲ್ಲಿ 2 ಬಸ್ ಗಳನ್ನು ದೋಣಿಮಲೈ ನಿಂದ ಸಂಚರಿಸೋ ಬದಲು ನರಸಾಪುರ ದಿಂದ ಓಡಿಸಲು ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಇನ್ನು ಶಾಲಾ ಮಕ್ಕಳಿಗೆ/ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಯಬೇಕಾದರೆ ಸಂಡೂರು ಬಸ್ ಡಿಪೋ ಘಟಕಕ್ಕೆ ಹೆಚ್ಚುವರಿಯಾಗಿ 10 ಬಸ್ ಗಳನ್ನು ಸಂಡೂರು ಘಟಕಕ್ಕೆ ಅವಶ್ಯಕತೆ ಇದೆ ಎಂದೂ ತಿಳಿಸಿದರು..
ವರದಿ,ಕಾಶಪ್ಪ ಸಂಡೂರು ಗ್ರಾಮಾಂತರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030