ನ್ಯಾಯಾಲಯದ ಆದೇಶವನ್ನು ಗೌರವಿಸಿ ನ್ಯಾಯಾಲಯ ಅಂಗೀಕರಿಸಿದ ಮನವಿಯಂತೆ ನಡೆದುಕೊಂಡು ಗಣಿ ಭಾದಿತ ರೈತ ಸಮುದಾಯಕ್ಕೆ ನ್ಯಾಯ ಕೊಡಿ.ಅರಣ್ಯ ಇಲಾಖೆ ಕಚೇರಿ ಮುಂದೆ ರೈತರ ಧರಣಿ ಸತ್ಯಗ್ರಹ . ಸಂಡೂರು ಅರಣ್ಯ ಇಲಾಖೆ ಕಚೇರಿ ಮುಂದೆ ಗಣಿ ಬಾಧಿತ ರೈತರು ಸೇರಿ ಆನಿರ್ದಿಷ್ಟ ವದಿ,ಧರಣಿ ನಡೆಸಿದರು. ಗಣಿ ಬಾಧಿತ ಸಂತ್ರಸ್ತ ರೈತರ ಪರವಾಗಿ ಶಿವನಂದಯ್ಯ ಮಾತನಾಡಿ ಕೃಷಿ ಕಾರ್ಮಿಕರ ಗಣಿ ಉಕ್ಕು ಉತ್ಪಾದನೆ ಉದ್ಯಮ ಕಾರ್ಮಿಕರ K. M.E. R. C. ಯು ಅಂಗೀಕರಿಸಿರುವ 02 ಯೋಜನೆಗಳ ಮನವಿಯಂತೆ ನಡೆದುಕೊಳ್ಳಿ.1) ಗಣಿ ಬಾದಿತ ರೈತರ ಜಮೀನಿನಲ್ಲಿ ಅರಣ್ಯ ಬೆಳೆಸಲಿಕ್ಕಾಗಿ ಆದೇಶಿತ ರೈತರ ಜಮೀನಿಗೆ 10 ಅಡಿ ಚೈನ್ ಲಿಂಕ್ ತಂತಿ ಬೇಲಿ ಹಾಕಿ ನೀರಿನ ವ್ಯವಸ್ಥೆ ಮಾಡಿ ಶ್ರೀಗಂಧ, ರಕ್ತ ಚಂದನ, ನೇರಳೆ, ಸೀತಾಫಲ, ನುಗ್ಗೆ ಸಸಿಗಳನ್ನು ನೆಟ್ಟು, ಜಮೀನಿನ ಮಾಲೀಕನಿಗೆ ನಿರ್ವಹಣೆಗೆ ವೆಚ್ಚ ಒಂದು ತಿಂಗಳಿಗೆ 10,000 ಇದರಂತೆ 8 ವರ್ಷ ನೀಡಿ ಬಂದ ಫಲವನ್ನು ಸರ್ಕಾರವೇ ಖರೀದಿಸಿ ಹಣ ಪಾವತಿಸುವುದು.2) ಕೃಷಿ ಕಾರ್ಮಿಕರಿಗೆ ಗಣಿ ಉಕ್ಕು ಉದ್ಯಮಗಳ ಲಾರಿ ಡ್ರೈವರ್, ಕ್ಲೀನರ್, ಹಾಗೂ ಉದ್ಯಮಗಳ ಕಾರ್ಮಿಕರ, ಕುಟುಂಬದ ಮಹಿಳೆಯರಿಗೆ, ರಸ್ತೆ, ಅಕ್ಕ-ಪಕ್ಕ 10 ಅಡಿ ಮತ್ತು ಅರವತ್ತು ಅಡಿ ಅಳ್ತೆಯ ಮನೆ ಕಟ್ಟಿಸಿ 10 ಲೀಟರ್ ಹಾಲು ನೀಡುವ ಎರಡು ಎಮ್ಮೆ/ ಆಕಳು ಕೊಡಿಸಿ ತಿಂಗಳಿಗೆ 2000 ಕೊಡುವುದು.
03) ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆಯ ಜೊತೆಗೆ ಕೆಲಸ ಮಾಡಲು 15 ಜನರಿಗೆ ಆದೇಶವಿದ್ದು ಅರಣ್ಯ ಇಲಾಖೆಗೆ ಜೊತೆ ಕೆಲಸ ಮಾಡಲು ರೆಡಿ ಇದ್ದೇವೆ. ಇದನ್ನು ಸಹ ಅಂಗೀಕರಿಸಬೇಕು. ನನ್ನ ಸ್ವಂತ ಜಮೀನು ಸರ್ವೆ ನಂಬರ್ 363 1 ಎಕರೆ 82 ಸೆಂಡ್ಸ್ ಜಮೀನಿನಲ್ಲಿ ಅರಣ್ಯ ಬೆಳೆಸಲು ಒಪ್ಪಿ ಏರಿಸಿದ್ದು ಕೂಡಲೇ ಕೆಎಂಆರ್‌ಸಿ ಯೋಜನೆ ಪರಿಸರ ಮರುಸ್ಥಾಪನೆಯ ಹಣವನ್ನು ಬಿಡುಗಡೆ ಮಾಡಬೇಕು. ಕೇ ಶಾಂತಕುಮಾರ ತಂದೆ ಹನುಮಂತಪ್ಪ ಇವರು ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದರು.
ವರದಿ.ಕಾಶಪ್ಪ ಸಂಡೂರು ಗ್ರಾಮಾಂತರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030