ದಿನಾಂಕ 24-11-2024 ಯರದಮ್ಮನಹಳ್ಳಿ ಎಲ್ಲಿ 537 ಶ್ರೀ ಭಕ್ತ ಕನಕದಾಸ ಜಯಂತಿಯನ್ನು ನೆರವೇರಿಸಲಾಯಿತು ಈ ಕಾರ್ಯಕ್ರಮದಲ್ಲಿ ಅಂಜಿನಪ್ಪ ಲಕ್ಷ್ಮಣ ದಾಸಪ್ಪ ಶಿವಣ್ಣ ಕೆಂಚಲಿಂಗಪ್ಪ ಇದ್ದರು ಶಿವಣ್ಣ ಶಿಕ್ಷಕರು ಅವರು ಕನಕದಾಸರ ಬಗ್ಗೆ ಒಂದೆರಡು ಅನಿಸಿಕೆಗಳನ್ನು ಮಾತನಾಡಿದರು. ಕನಕದಾಸರ ಇನ್ನೊಂದು ಹೆಸರೇ ತಿಮ್ಮಪ್ಪ ನಾಯಕ ಎಂದು ಪ್ರಸಿದ್ಧ ಪಡಿಸಿದ ಇವರು. ಅಕ್ಕಿ ಮತ್ತು ರಾಗಿಯ ಸಾಮ್ಯ ರೂಪದಲ್ಲಿ ಹೇಳಿ, ಕನಕದಾಸರು ಯಾರು ಗಟ್ಟಿ ಯಾರು ಟೊಳ್ಳು ಎಂಬುವುದನ್ನು ಈ ಕಥೆಯಲ್ಲಿ ಅತ್ಯಂತ ಸರಳವಾಗಿ ಸುಲಭ ರೂಪದಲ್ಲಿ ತಿಳಿಸಿದರು ಅಂದರೆ ಅಕ್ಕಿಯನ್ನು ಮತ್ತೆ ರಾಗಿಯನ್ನ ಚೀಲದಲ್ಲಿ ಕಟ್ಟಿ ಕೆಲವು ದಿನಗಳ ನಂತರ ಅದನ್ನು ಬಿಚ್ಚಿ ನೋಡಿದಾಗ ಅಕ್ಕಿ ಮುಗ್ಗು ಹಿಡಿದು ಕೆಲಸಕ್ಕೆ ಬಾರದಂತೆ ಆಗಿರುತ್ತದೆ. ಅದೇ ರಾಗಿಯೂ ಎಷ್ಟೇ ದಿನವಾದರೂ ತನ್ನ ಶಕ್ತಿಯನ್ನು ಕಳೆದುಕೊಳ್ಳದೇ ಗಟ್ಟಿ ಪಿಂಡ ಉಳಿದಿರುತ್ತದೆ. ಎಂಬುದನ್ನು ಕನಕದಾಸರ ಕೃತಿಯಲ್ಲಿ ತಿಳಿಯಪಡಿಸಲಾಗಿದೆ. ಇದೇ ರೀತಿಯಾಗಿ ನಮ್ಮ ಜೀವನದಲ್ಲಿ ಗಟ್ಟಿಯ ಕೆಲಸಗಳನ್ನು ಮಾಡಬೇಕೆಂದು. ತಿಳಿಸಿ ಕಾರ್ಯಕ್ರಮವನ್ನು ಸರಳವಾಗಿ ಮುಗಿಸಿದರು…
ವರದಿ.ಕಾಶಪ್ಪ ಸಂಡೂರು ಗ್ರಾಮಾಂತರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030