2024 -25 ನೇ ಸಾಲಿನ ಸಂಡೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮದಲ್ಲಿ ಸಂಡೂರು ತಾಲೂಕಿನ ಗೊಲ್ಲಲಿಂಗನಹಳ್ಳಿ ಗ್ರಾಮದ ಶ್ರೀ ಸಾಯಿಬಾಬಾ ಶಾಲೆ ಯ 4ನೇ ತರಗತಿಯ ವಿದ್ಯಾರ್ಥಿಯಾದ ಪವನ್ ಕುಮಾರ್ ಕ್ಲೇ ಮಾಡ್ಲಿಂಗ್ ನಲ್ಲಿ ಪ್ರಥಮ ಸ್ಥಾನ ಐದನೇ ತರಗತಿಯ ವಿದ್ಯಾರ್ಥಿನಿಯಾದ ಲತಾ ಅಭಿನಯ ಗೀತೆಯಲ್ಲಿ ದ್ವಿತೀಯ ಸ್ಥಾನ,ಎರಡನೇ ತರಗತಿಯ ವಿದ್ಯಾರ್ಥಿಯಾದ ಕೌಶಿಕ್ ರೆಡ್ಡಿ ಅವರು ಛದ್ಮವೇಷದಲ್ಲಿ ತೃತೀಯ ಸ್ಥಾನ ಹಾಗೂ ಇಂಗ್ಲಿಷ್ ಕಂಠಪಾಠದಲ್ಲಿ ಕೀರ್ತಿ ತೃತೀಯ ಸ್ಥಾನ ಕಥೆ ಹೇಳುವುದರಲ್ಲಿ ಗೌತಮಿ ತೃತೀಯ ಸ್ಥಾನದಲ್ಲಿ ವಿಜೇತರಾಗಿ ಶಾಲೆಗೆ ಹಾಗೂ ಸಂಡೂರಿಗೆ ಕೀರ್ತಿಯ ಪಟಾಕಿಯ.
ಸಂಭ್ರಮ ಸಡಗರದ ಬಗ್ಗೆ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಮರಿಸ್ವಾಮಿ ಸರ್ ಹಾಗೂ ಅಧ್ಯಕ್ಷರಾದ ಎನ್ ಕುಮಾರಸ್ವಾಮಿ ಸರ್ ಸಾಯಿ ಬಾಬಾ ಶಾಲೆಯ ಮುಖ್ಯಗುರುಗಳಾದ ಚಿತ್ತಪ್ಪ ಸರ್ ಸಹ ಶಿಕ್ಷಕರಾದ ಹುಲುಗಪ್ಪ ಏ ಕೆ ಹಾಗೂ ಶಾಲೆಯ ಸಮಸ್ತ ಗುರು ಬಳಗದವರು ಊರಿನ ಪಾಲಕ ಪೋಷಕರು ಹರ್ಷ ವ್ಯಕ್ತಪಡಿಸಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಪ್ರತಿಭಾಕಾರಂಜಿಯಲ್ಲಿ ಅತ್ಯುತ್ತಮ ಸಾಧನೆಗೈದ ಶ್ರೀ ಸಾಯಿ ಬಾಬಾ ಶಾಲೆಯ ಪಾಲಕ ಪೋಷಕರು ಹಾಗೂ ನಮ್ಮ ಕ್ಲಸ್ಟರ್ ನ ಸಮಸ್ತ ಗುರು ಬಳಗದವರು ಶಾಲೆಯ ಬಗ್ಗೆ ಹಾಗೂ ಮಕ್ಕಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು…
ವರದಿ. ಕಾಶೇಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030