ಗಣಿ ಭಾದಿತ ಪ್ರದೇಶಗಳಾದ 111 ಗ್ರಾಮಗಳ 87,000 ರೈತರ ಎರಡು ಲಕ್ಷ ಎಕರೆ ಬಂಜರ ಭೂಮಿಯಲ್ಲಿ ಅರಣ್ಯ ಬೆಳೆಸಲು ಸಮಗ್ರ ಪರಿಸರ ಯೋಜನೆ(CEPMIZ ) ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಿ, ಸ್ವಾಮಿ.:: ಎಚ್ ಎಮ್ ಶಿವನಂದಯ್ಯ. ಇಂದು ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಎಚ್ ಎಮ್ ಶಿವನಂದಯ್ಯ ಸಂಸ್ಥಾಪಕರು ಹಾಗೂ ಸಂಚಾಲಕರು, ಮಹಾತ್ಮ ಗಾಂಧಿ ವಿದಿದ್ದೋಶ ಸಹಕಾರ ಸಂಘ ನಿಯಮಿತ ” ಹಾಗೂ ಸಂಡೂರು ನ ಸುತ್ತ ಸಂಡೂರಿನ ಮರುಸ್ಥಾಪನೆ ಸಂಚಾಲಕ ಸಮಿತಿ ಸಂಡೂರು.”ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರು ವಿ ನಾಗಲಾಪುರ ಸಂಡೂರು ತಾಲೂಕು ಇದರ ಸದಸ್ಯರಿಗೆ ಸಂಬಂಧಿಸಿದ ಗಣಿ ಭಾದಿತ ಪ್ರದೇಶಗಳ 111 ಗ್ರಾಮಗಳ 87,000 ರೈತರ 2 ಲಕ್ಷ ಎಕರೆ ಬಂಜರ ಭೂಮಿಯಲ್ಲಿ ಅರಣ್ಯ ಬೆಳೆಸಲು ಗಣಿಗಾರಿಕೆ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆ(CEPMIZ ) ಅಡಿಯಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಯಾಕೆಂದರೆ ಈ ಬಗ್ಗೆ ನೇಡಬಹುದಾದ ಸಸ್ಯಗಳ, ವಿಧಗಳು, ಜಾತಿಗಳು, ಎಕರೆಗೆ ಎಷ್ಟು ಗಿಡಗಳನ್ನು ನೆಡಬಹುದು. ಅವುಗಳ ವರ್ಷವಾರು ನಿರ್ವಹಣೆ ವೆಚ್ಚ ಇತ್ಯಾದಿಗಳ ಕರ್ನಾಟಕ ಅರಣ್ಯ ಇಲಾಖೆಯ, ಸಲಹೆಯನ್ನು ಪಡೆದು ಅಂದಾಜು ತಯಾರಿಸಿ ಸ್ಥೂಲ ಪ್ರಸ್ತಾವನೆಯನ್ನು ಸಲ್ಲಿಸಿದಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಿ ಮುಂದಿನ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು. ಈಗಾಗಲೇ ಅರಣ್ಯ ಇಲಾಖೆಗೆ ಎರಡು ಕೋಟಿಯನ್ನ ಸರ್ಕಾರ ಕೊಟ್ಟಿದೆ.
” ಆ ಎರಡು ಕೋಟಿ ಎಲ್ಲಿ ಹೋಗಿದೆ. ಆ ಎರಡು ಕೋಟಿ ಕೊಟ್ಟಿರುವ ಉದ್ದೇಶವೇನೆಂದರೆ ಅರಣ್ಯ ಪುನರ್ ಸ್ಥಾಪನೆ ಮಾಡುವುದಕ್ಕಾಗಿ. “ಅರಣ್ಯವನ್ನು ರಕ್ಷಣೆ ಮಾಡುವ ಇವರೇ ಜ್ಞಾನವಂತರೇ ಅರಣ್ಯವನ್ನು ನಾಶ ಮಾಡಲು ಅನುಮತಿ ನೀಡುತ್ತಿದ್ದಾರೆ. ಮತ್ತು ಅರಣ್ಯ ಗೋಸ್ಕರ ಮಾಡಲು 78 ಕೋಟಿ ಗಣಿ ದುಡ್ಡು. ಅರಣ್ಯ ಬೆಳೆಸಿ ಅರಣ್ಯ ಉಳಿಸಿ ಎನ್ನುವಂತ ನಿಟ್ಟಿನಲ್ಲಿ ಬಳಸಿಕೊಳ್ಳಬಹುದು. ಈ ಒಂದು ಗಣಿಗಾರಿಕೆಯಿಂದ ಅರಣ್ಯದಲ್ಲಿರುವ 33 ಪ್ರಭೇದದ ಜೀವಿಗಳು, ಕಣ್ಮರೆಯಾಗಿವೆ. 60% ಗರ್ಭಕೋಶ ಆಪರೇಷನ್ ಗಳು ಆಗಿವೆ. ಅನೇಕ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಿಜ್ಞಾನಿಗಳು ಹೇಳು ಪ್ರಕಾರ ರೈತರಿಗೆ 45% ಪ್ರತಿ ಬೆಳೆ ನಷ್ಟ. ಪ್ರಕಾರ ಸರ್ಕಾರ ಕೊಡಬೇಕು. ಆದರೆ ಇದನ್ನೆಲ್ಲಾ ಸರ್ಕಾರ ಹೆಚ್ಚು ಎಚ್ಚೆತ್ತುಕೊಳ್ಳಬೇಕಾಗಿದೆ. ಜಿಂದಾಲ್ ಅಂತ ದೊಡ್ಡ ದೊಡ್ಡ ಕಂಪನಿಗಳು ರೈತರ ಜಮೀನುಗಳನ್ನು ಕಬಳಿಸಿ. ರೈತರ ಹೊಟ್ಟೆಗೆ ಮಣ್ಣು ತುಂಬುತ್ತಿದ್ದಾವೆ. ಈ ಸಂದರ್ಭದಲ್ಲಿ ನನಗೆ ವಯಸ್ಸಾಗಿದೆ. ಆದ್ದರಿಂದ ನನ್ನ ನೂತನ ಸಮಿತಿನ ರಚನೆ ಮಾಡಿದ್ದೇನೆ. ಸಮಿತಿಯಲ್ಲಿ ಹೊನ್ನೂರು ಸ್ವಾಮಿ ಸಂಚಾಲಕರು. ವಕೀಲರು. ರೈತರು. ಇದ್ದಾರೆ ಇದನ್ನು ಬಿಡದೆ ಮುಂದುವರಿಸಿಕೊಂಡು ಹೋಗುವ ನಂಬಿಕೆ ನನಗಿದೆ. ಎಂದು ನೂತನ ಸಮಿತಿಯನ್ನು ಘೋಷಣೆ ಮಾಡಿದರು.
ವರದಿ…ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030