ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ನಾಯಕ ಸ್ವತಂತ್ರ ಭಾರತದ ಮೊದಲ ಪ್ರಧಾನಿ ನವ ಭಾರತ ನಿರ್ಮಾತೃ ಭಾರತ ರತ್ನ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಹುಟ್ಟು ಹಬ್ಬದ ಅಂಗವಾಗಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಗೊಲ್ಲ ಲಿಂಗಮ್ಮನಹಳ್ಳಿಯ ಶ್ರೀ ಸಾಯಿ ಬಾಬಾ ಶಾಲೆಯಲ್ಲಿ ಮುಗ್ಧ ಮನಸ್ಸಿನ ಹೂವುಗಳು ತುಂಟತನದ ಕಂಗಳು , ಕನಸು ತುಂಬಿದ ಮಂದಾರಗಳ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಅವಕಾಶಗಳನ್ನು ಹೆಚ್ಚಿಸಿಕೊಳ್ಳೋಣ ಮಕ್ಕಳು ಎಂದರೆ ನೆಹರುಗೆ ಅಪಾರ ಪ್ರೀತಿ ಹಾಗೆಯೇ ನಮ್ಮ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ನಿರ್ಮಲ ಮೇಡಂ ನವರು ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಕಾಳಜಿಗಳಿಂದ ಸ್ಪೂರ್ತಿಯ ನೆಲೆಯಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಗೆ ಕೇಕನ್ನು ಉಚಿತವಾಗಿ ನೆನಪಿನ ಕಾಣಿಕೆಯಾಗಿ ನೀಡುತ್ತಿರುವ ನಿರ್ಮಲ ಯರಿಸ್ವಾಮಿ ಸ್ವಾಮಿಹಳ್ಳಿ ಅವರ ಕುಟುಂಬಕ್ಕೆ ಭಗವಂತ ಸುಖ ಸಂತೋಷ ಆರೋಗ್ಯ ಕರುಣಿಸಲಿ ಎಂದು ನಮ್ಮ ಶಾಲೆಯ ಆಡಳಿತ ಮಂಡಳಿ ಹಾಗೂ ಗುರುಮಾತೆಯರು ಮುದ್ದು ಪುಟಾಣಿಗಳು ಅರಸಿ ಹಾರೈಸಿದರು . ಇಂದಿನ ಮಕ್ಕಳು ನಾಳಿನ ಭಾರತವನ್ನು ನಿರ್ಮಿಸುತ್ತಾರೆ ಮಕ್ಕಳನ್ನು ಬೆಳೆಸುವ ವಿಧಾನ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ . ಹಾಗೂ ಹಾಲಿನಂತಹ ಮನಸ್ಸು ಇರುವ ಎಲ್ಲಾ ಮುದ್ದು ಮಕ್ಕಳಿಗೆ ಅದ್ದೂರಿಯಾಗಿ ಆಹ್ವಾನಿಸಿ ಮುದ್ದು ಪುಟಾಣಿಗಳ ಕೈಯಿಂದ ಕೆಕ್ ಕತ್ತರಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳ ದಿನಾಚರಣೆ ಕುರಿತು ನಮ್ಮ ಶಾಲೆಯ ಮುಖ್ಯ ಗುರುಗಳು ಹಾಗೂ ಗುರುಮಾತೆಯರು ಮಕ್ಕಳ ದಿನಾಚರಣೆಯ ಕುರಿತು ಮಾತನಾಡಿದರು . ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಕುಮಾರಸ್ವಾಮಿ ಸರ್ ಹಾಗೂ ಕಾರ್ಯದರ್ಶಿಗಳಾದ ಮರಿಸ್ವಾಮಿ ಸರ್ ನಮ್ಮ ಶಾಲೆಯ ಮುಖ್ಯ ಗುರುಗಳಾದ ಚಿತ್ತಪ್ಪ ಸರ್
ಸಹ ಶಿಕ್ಷಕರುಗಳಾದ ಹುಲುಗಪ್ಪ ಏ ಕೆ ಗಂಗಮ್ಮ ಮೇಡಂ ತಾರಾಕ್ಷಿ ಮೇಡಂ ತ್ರಿವೇಣಿ ಶೋಭಾ ಕರಿಬಸಮ್ಮ ಸಿಂಧು ಗೌರಮ್ಮ ವರಲಕ್ಷ್ಮಿ ಭಾಗವಹಿಸಿದ್ದರು. …
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030