ಇದುವರೆಗೂ ಸಂಡೂರಿನಲ್ಲಿ ಅಭಿವೃದ್ಧಿ ಆಗಿಲ್ಲ. ಸುದ್ದಿಗೋಷ್ಠಿಯಲ್ಲಿ, “ಸ್ವತಂತ್ರ ಅಭ್ಯರ್ಥಿ ಎನ್ ವೆಂಕಟಣ್ಣ” ಸಂಡೂರು ತಾಲೂಕಿನ y D ಹಳ್ಳಿ ಗ್ರಾಮ ನಿವಾಸಿಯಾದ ಎನ್ ವೆಂಕಟಣ್ಣ ಇವರು ಸಂಡೂರು ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಶೆಡ್ ಒಡೆದಿದ್ದಾರೆ. ದಿನಾಂಕ 11.11.2024. ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರು ಸಂಡೂರು ತಾಲೂಕಿನಲ್ಲಿ 20 ಬಾರಿ ಕಾಂಗ್ರೆಸ್ ಆಡಳಿತದಲ್ಲಿದ್ದರೂ ಯಾವುದೇ ಅಭಿವೃದ್ಧಿ ಇಲ್ಲ ಮತ್ತು ಸರಿಯಾದ ಬಸ್ ನಿಲ್ದಾಣ ಇಲ್ಲ, ಸರಿಯಾದ ಹಾಸ್ಪಿಟಲ್ ಇಲ್ಲ, ಒಳ್ಳೆ ಡಿಪ್ಲೋಮಾ ಕಾಲೇಜಿಗೆ ಇಲ್ಲ, ಸರಿಯಾದ ರಸ್ತೆಗಳು ಇಲ್ಲ, ರೈತರ ಬಗ್ಗೆ ಕಾಳಜಿ, ರೈತರ ಜಮೀನುಗಳನ್ನು ಜಿಂದಾಲ್ ಫ್ಯಾಕ್ಟರಿಗೆ ಮಾರಿಕೊಂಡಿದ್ದಾರೆ. 2008ರಲ್ಲಿ ನಾನು ಸ್ಪರ್ಧೆ ಮಾಡಿ 3700 ಮತಗಳನ್ನು ಪಡೆದಿದ್ದೇನೆ. ಈ ಬಾರಿ ನಾನು ಒಂಬತ್ತರಿಂದ ಹತ್ತು ಸಾವಿರ ಮತಗಳನ್ನು ಪಡೆಯುವುದರ ಜೊತೆಗೆ ಮತ್ತೆ ಗೆಲ್ಲವನ್ನು ಸಾಧಿಸುತ್ತೇನೆ. ಮತ್ತು ಸಂಡೂರ ಅಭಿವೃದ್ಧಿಗೆ ನಾನು ಪಣತೊಟ್ಟಿದ್ದೇನೆ. ಹಳ್ಳಿ ಭಾಗದ ಸಾಕಷ್ಟು ರೈತರು ನನ್ನ, ನನ್ನನ್ನು ಬೆಂಬಲಿಸಿದ್ದಾರೆ, ನೂರು ಜನ ನನ್ನ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 2008ರಿಂದ 2024ರ ವರೆಗೆ ನಾನು ಜನರ ಮಧ್ಯದಲ್ಲಿ ಜನರ ಸಂಪರ್ಕದಲ್ಲಿದ್ದೇನೆ. ನನಗೆ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ನಾನು ಈ ಬಾರಿ ಗೆಲ್ಲೋದು ನಿಶ್ಚಿತ…
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030