ಸುದ್ದಿಗೋಷ್ಠಿಯಲ್ಲಿ “ಕಪ್ಪು ಬಾವುಟ” ಆರಿಸುತ್ತೇವೆಂದು, ಬಹಿರಂಗ ಹೇಳಿಕೆ,ಬಿ. ನರಸಪ್ಪ ರವರನ್ನು ವಶಕ್ಕೆ ಪಡೆದ ಪೊಲೀಸರು. ಮನವೊಲಿಸುವಲ್ಲಿ ಸಂಡೂರು ಪೊಲೀಸ್ ಇಲಾಖೆ ಯಶಸ್ವಿ…!!!

Listen to this article

ಇಂದು ದಿನಾಂಕ:07/11/2024 ರಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಲು ಹಾಗೂ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಸಂಡೂರಿಗೆ ಆಗಮಿಸಿದ ರಾಜ್ಯದ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು. ಮಂದಕೃಷ್ಣ ಮಾದಿಗ ರವರ ನಾಯಕತ್ವದಲ್ಲಿ 30 ವರ್ಷಗಳ ಒಳ ಮೀಸಲಾತಿ ಹೋರಾಟದ ಹಿನ್ನೆಲೆ ಅಗಸ್ಟ್.1ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಮತ್ತು ಸಚಿವ ಸಂಪುಟದಲ್ಲಿ ಮೂರು ತಿಂಗಳು ಸಮಯವನ್ನು ತೆಗೆದುಕೊಂಡು ಹೋರಾಟಗಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಿಗೆ ಮಾದಿಗ ದಂಡೋರ ರಾಜ್ಯಾಧ್ಯಕ್ಷರು ಬಿ. ನರಸಪ್ಪ ದಂಡೋರ ರವರ ನಾಯಕತ್ವದಲ್ಲಿ ಹಾಗೂ ಮಾದಿಗ ದಂಡೋರ(MRPS)ಜಿಲ್ಲಾ ಮತ್ತು ತಾಲೂಕು ಬಳ್ಳಾರಿ ಸಮಿತಿ ವತಿಯಿಂದ ಕಪ್ಪು ಬಟ್ಟೆ ಮತ್ತು ಘೇರಾವ್ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ತನ್ನ ಅಧಿಕಾರದ ದೃಢ ಆಡಳಿತದಿಂದ ಬಳ್ಳಾರಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾದಿಗ ದಂಡೋರ ರಾಜ್ಯಧ್ಯಕ್ಷರು ಬಿ. ನರಸಪ್ಪ ದಂಡೋರ ರವರನ್ನು ಹಾಗೂ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳನ್ನು ನ್ಯಾಯಯುತವಾದ ಹಕ್ಕನ್ನು ಕೇಳಲು ಮುಂದಾದರೆ ಹೋರಾಟಗಾರರು ಅಕ್ರಮವಾಗಿ ಬಂಧಿಸಿ ತೋರಣಗಲ್ ಪೊಲೀಸ್ ಠಾಣೆಗೆ ತೆರಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು ನಮ್ಮ ಹೋರಾಟ ನಿಲ್ಲುವುದಿಲ್ಲ ನಮ್ಮ ಹಕ್ಕನ್ನು ಪಡೆಯುತ್ತೇವೆ ಎನ್ನುವ ಸಂದೇಶವನ್ನು ನೀಡಿದರು…

ವರದಿ. ಕಾಶೇಪ್ಪ ಸಂಡೂರು ಗ್ರಾಮಾಂತರ

 

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend