ವಾಲ್ಮೀಕಿ ನಿಗಮದ ಹಣದಿಂದ ಕೆಜಿಗಟ್ಟಲೆ “ಬಂಗಾರ ಕರಿದಿ, ಹೆಂಡಾ” ಅಂಗಡಿಗಳಿಗೆ ಹೋಯ್ತು. ಸುದ್ದಿಗೋಷ್ಠಿಯಲ್ಲಿ ಬಹಿರಂಗ ಹೇಳಿಕೆ :: ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಶ್ರೀ ಎಂ ಪಿ ರೇಣುಕಾಚಾರ್ಯರವರು ಸುದ್ದಿಗೋಷ್ಠಿ ಮಾಡಿದರು. ಸಂಡೂರಿನ ವಾಲ್ಮೀಕಿ ಜನತೆ ಅರ್ಥಮಾಡಿಕೊಳ್ಳಬೇಕಾದ ವಿಷಯ ಏನೆಂದರೆ, ವಾಲ್ಮೀಕಿ ನಿಗಮದ ಹಣ ಎಲ್ಲಿ ಹೋಯಿತು ನೀವು ಸರ್ಕಾರಕ್ಕೆ ಪ್ರಶ್ನೆ ಮಾಡಬೇಕಾಗಿದೆ. ಸಿದ್ದರಾಮಯ್ಯನವರೇ ಹಣಕಾಸು ಸಚಿವರು ಇದ್ದರು, ಹಾಗಾದ್ರೆ ಹಣ ಎಲ್ಲಿ ಹೋಯಿತು? ಮುಖ್ಯಮಂತ್ರಿ ಅವರ ಅನುಮತಿ ಇಲ್ಲದೆ ಹಣ ಹೇಗೆ ಎಲ್ಲಿಗೆ ಹೋಯಿತು? ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಸನ್ಮಾನ್ಯ ಶ್ರೀ ಯಡಿಯೂರಪ್ಪರೂ, ವಾಲ್ಮೀಕಿ ನಿಗಮವನ್ನು ಸ್ಥಾಪನೆ ಮಾಡಿದರು ಯಾಕೆಂದರೆ, ಸಣ್ಣ ವ್ಯಾಪಾರಸ್ಥರಿಗೆ, ವ್ಯಾಸಂಗಕ್ಕೆ, ಕಾರ್ಮಿಕರಿಗೆ, ರೈತರು ಬೋರ್ವೆಲ್ ಹಾಕಿಸಿಕೊಳ್ಳಲು, ಆದರೆ ಇವತ್ತು ವಾಲ್ಮೀಕಿ ಹಗರಣದ ಹಣದಲ್ಲಿ, ಕೆಜಿಗಟ್ಟಲೆ ಬಂಗಾರ ಖರೀದಿ ಮಾಡಿದ್ದಾರೆ. ಮತ್ತು ನಿಗಮದ ಹಣ ಹೆಂಡ ಅಂಗಡಿಗಳಿಗೆ ಹೋಗಿದೆ. ಸಿದ್ದರಾಮಯ್ಯನವರೇ ಈಗ ನನಗೆ ಉತ್ತರ ಕೊಡಿ, ನನ್ನ ಜನಗಳಿಗೆ ಉತ್ತರ ಕೊಡಿ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಮೂಡಾಗರಣ ಮಾಡಿದ್ದಾರೆ. ಇದರ ಜೊತೆಗೆ ಜಮೀರ್ ಮಾತಂದ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಟೀಕೆ ಮಾಡುತ್ತಿದ್ದೇನೆ. ಜಮಿರಿಗೆ ಐದು ಮಿಷದಲ್ಲಿ ನಾನು ನಿನಗೆ ಉತ್ತರ ಕೊಡುತ್ತೇನೆ. ಸಿದ್ದರಾಮಯ್ಯನವರೇ ಜಮೀರ್ ವಿರುದ್ಧ ನಾನು ಕ್ರಮಕ್ಕೆ ಒತ್ತಾಯಿಸುತ್ತಿದ್ದೇನೆ. ಜಮೀರ್ ಅವರೇ ಹೆಚ್ಚು ತಲೆ ಹರಟೆ ನಡೆಸಿದರೆ ಜಾಸ್ತಿ ಮಾಡಿದರೆ ನಿನಗೆ ತಕ್ಕ ಪಾಠ ಕಲಿಸುತ್ತೇವೆ. ಸಂಡೂರು ಉಪ ಚುನಾವಣೆಯಲ್ಲಿ ಜನತೆ ತೀರ್ಮಾನ ಮಾಡಿದ್ದಾರೆ…
ವರದಿ..ಕಾಶಪ್ಪ ಸಂಡೂರು ಗ್ರಾಮಾಂತರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030