ಸಂಡೂರು ಉಪಚುನಾವಣೆಯ ಅಂಗವಾಗಿ ಇಂದು ಸಂಡೂರಿನ ಹುಲಿಕುಂಟೆ 73, ಗಿರೇನಹಳ್ಳಿ ಹಾಗೂ ಕೊಂಡಾಪುರ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತುರವರ ಪರವಾಗಿ ಮತಯಾಚನೆ ಮಾಡಲಾಯಿತು.
ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೆ ಜನತೆ ಭ್ರಷ್ಟ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿದ ಪರಿಣಾಮ ಕ್ಷೇತ್ರದಲ್ಲಿ ಅಭಿವೃದ್ದಿ ಎನ್ನುವುದು ಶೂನ್ಯವಾಗಿದ್ದು ಈ ಬಾರಿ ಮಾದರಿ ಸಂಡೂರು ಕ್ಷೇತ್ರ ನಿರ್ಮಾಣಕ್ಕಾಗಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕೆಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅನಿಲ್ ಲಾಡ್, ಮಾಜಿ ಶಾಸಕರಾದ ರಾಮಚಂದ್ರ ರೆಡ್ಡಿ, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಸಹೋದರ ಕೆ.ಎಸ್ ದಿವಾಕರ್, ಮಂಡಲದ ಅಧ್ಯಕ್ಷರಾದ ನಾನಾಸಾಹೇಬ್ ನಿಕ್ಕಂ ಗಿರೇನಹಳ್ಳಿಯ ಪ್ರಮುಖರಾದ ಹೊನ್ನೂರುಪುರ ಹನುಮಂತಪ್ಪ, ಜಿ.ಟಿ ಮಹಾಂತೇಶ, ಗೋವಿಂದಪ್ಪ, ಒಬಪ್ಪ, ಹುಲುಗಪ್ಪ ತಳವಾರ, ಹನುಮಂತಪ್ಪ, ಕೊಂಡಾಪುರ ಗ್ರಾಮದ ಪ್ರಮುಖರಾದ ಗೂಳೆಪ್ಪನವರು, ಭರಮಣ್ಣ, ಪ್ರಭಾಕರ, ಚಂದ್ರಪ್ಪ ಹಾಗೂ ಗ್ರಾಮದ ಗುರು ಹಿರಿಯರು, ಪ್ರಮುಖರು ಪದಾಧಿಕಾರಿಗಳು, ಕಾರ್ಯಕರ್ತ ಬಂಧುಗಳು, ತಾಯಂದಿರು, ಯುವಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು…
ವರದಿ. ಉಜ್ಜಿನಯ್ಯ ಸಂಡೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030