ಸಂಡೂರು ಉಪ ಕದನ ಬಂಗಾರು V/S ಅನ್ನಪೂರ್ಣ ತುಕಾರಾಂ , ಇಂದು ಬಂಗಾರು ನಾಮಪತ್ರ ಸಲ್ಲಿಕೆ. ಸಂಡೂರು:: ನಿನ್ನೆ ಸಂಡೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಗುರುವಾರ ಪಕ್ಷದ ಮುಖಂಡರ ಹಾಗೂ ಅಪಾರ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಇಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು ಆಗಸ್ಟ್ 25ರಂದು ಬಿಜೆಪಿ ರಾಜ್ಯಾಧ್ಯಕ್ಷರಾದ, ಬಿ.ವೈ ವಿಜಯೇಂದ್ರ, ಶಾಸಕರದ ಗಾಲಿ ಜನಾರ್ದನ ರೆಡ್ಡಿ, ಶ್ರೀರಾಮುಲು, ಕೆ ಎಸ್ ದಿವಾಕರ್, ಜಿ.ಟಿ ಪಂಪಾಪತಿ, ಇನ್ನು ಅನೇಕ ಪಕ್ಷದ ಮುಖಂಡರು ಸೇರಿ, ಕಾರ್ಯಕರ್ತರು, ಅಭಿಮಾನಿಗಳು, ನಿನ್ನೆಗಿಂತ ಇಂದು, ಅಪಾರ ಜನಸಾಗರದೊಂದಿಗೆ, ಮೆರವಣಿಗೆ ಮುಖಾಂತರ, ಬೃಹತ್ ಮಟ್ಟದ ಪೊಲೀಸ್ ಭದ್ರತೆಯೊಂದಿಗೆ, ಇಂದು ನಾಮಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಂಗಾರು ಹನುಮಂತ. ನಾವು ಈ ಬಾರಿ ಸಂಡೂರಿನಲ್ಲಿ ಗೆಲುವು ಸಾಧಿಸುವಲ್ಲಿ ಯಾವುದೇ ಅನುಮಾನವಿಲ್ಲ.ಇಂದು ಸೇರಿದ ಜನಸಾಮಾನ್ಯರು ಕಾರ್ಯಕರ್ತರು ಜನಸಾಗರವನ್ನು ನೋಡುವುದಾದರೆ, ಮತ್ತು ಕಾರ್ಯಕರ್ತರ ಉತ್ಸವವನ್ನು ನಾವು ನೋಡಿ. ಕಣ್ಣು ತುಂಬಿಕೊಂಡಿದ್ದೇವೆ ಈ ಬಾರಿ ಸಂಡೂರಿನಲ್ಲಿ ಬಿಜೆಪಿ ಬಾವುಟವನ್ನು ಆರಿಸಲಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು..
ವರದಿ ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030