ಬೊಮ್ಮಲಗುಂಡ:: ಗ್ರಾಮದಲ್ಲಿ, ಗ್ರಾಮಸ್ಥರಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ…. ಸಂಡೂರು ತಾಲೂಕಿನ ಬೊಮ್ಮಲಗುಂಡ ಚಿಕ್ಕ ಗ್ರಾಮದಲ್ಲಿ ಸಮಸ್ತ ಹಿರಿಯ ನಾಗರಿಕರು ಮತ್ತು ಯುವ ಮುಖಂಡರು , ಯುವಕರು ಸೇರಿ ” ಸಂಡೂರಿನ ಉಪಚುನಾವಣೆ ಪ್ರಯುಕ್ತ ನೀತಿ ಸಮಿತಿ ಜಾರಿಗಾಗಿರುವುದರಿಂದ ಇದನ್ನು ಅರಿತುಕೊಂಡು ಕಾನೂನಿಗೆ ವಿರೋಧವಾಗದಂತೆ ಹಿರಿಯರು, ಗ್ರಾಮಸ್ಥರು, ಯುವಕರು,ಸರಳವಾಗಿ “ಆದಿ ಕವಿಯ” ಜಯಂತಿಯನ್ನು ಆಚರಣೆ ಮಾಡಿ ನೆರವೇರಿಸಿರುವುದು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು, ಸದಸ್ಯರು, ಊರಿನ ಸಮಸ್ತ ಹಿರಿಯ ನಾಗರಿಕರು ಭರವಹಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರ ಹನುಮಂತಪ್ಪ ಮಾತನಾಡಿ. ಮಹರ್ಷಿ ವಾಲ್ಮೀಕಿ ಅವರು, ಭಾರತದ ಮೊಟ್ಟ ಮೊದಲ ಮಹಾ ಕಾವ್ಯವನ್ನು ರಾಮಾಯಣವನ್ನು ರಚಿಸಿದರು ಹಾಗೂ ಮೊಟ್ಟ ಮೊದಲ ಆದಿ ಕವಿ ಎಂದು ಕರೆಯುತ್ತಾರೆ. ಇನ್ನು ಅನೇಕ ಮಹಾಕಾವ್ಯನೆ ರಚಿಸಿದ್ದಾರೆ ಒಂದು ಉತ್ತಮ ” ಜೀವಿತದ ಮಾರ್ಗವನ್ನು ಹಿಡಿದು ಇವರು, ಅನೇಕ ಜನರಿಗೆ ಮಾರ್ಗದರ್ಶಿಕರಾಗಿದ್ದಾರೆ. ಇವರ ಮಾರ್ಗದರ್ಶನಗಳು ಅನೇಕ ವ್ಯಕ್ತಿಗಳು ಇವರನ್ನು ಮಾರ್ಗದರ್ಶಕರನ್ನಾಗಿ ಇಟ್ಟುಕೊಂಡಿದ್ದಾರೆ. ನಾವು ನೀವು ಎಲ್ಲರು ಈ ವ್ಯಕ್ತಿಯ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಮಹರ್ಷಿಯಂತೆ ಜೀವಿಸೋಣ ಎಂದೆಲ್ಲ ಯುವಕರಿಗೆ ಮಾರ್ಗದರ್ಶನ ನೀಡಿದರು..
ವರದಿ.ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030