ವೋಟು ಕೇಳುವರಯ್ಯ ಮಾದಿಗರನ್ನು. ಮಾದಿಗರ ಗೋಳು ಕೇಳುವವರು ಯಾರಯ್ಯ.. ಭೀಮ್ ಆರ್ಮಿ ತಾಲೂಕ ಅಧ್ಯಕ್ಷರು:: ದರುಗೇಶ್ ಪೂಜಾರ್…!!!

Listen to this article

ವೋಟು ಕೇಳುವರಯ್ಯ ಮಾದಿಗರನ್ನು. ಮಾದಿಗರ ಗೋಳು ಕೇಳುವವರು ಯಾರಯ್ಯ.. ಭೀಮ್ ಆರ್ಮಿ ತಾಲೂಕ ಅಧ್ಯಕ್ಷರು:: ದರುಗೇಶ್ ಪೂಜಾರ್. ಸಂಡೂರು ತಾಲೂಕಿನ ಸಿ.ಕೆ.ಹಳ್ಳಿ ಗ್ರಾಮದ. ಭೀಮ್ ಆರ್ಮಿ ತಾಲೂಕ್ ಅಧ್ಯಕ್ಷರಾದಂತಹ ದುರುಗೇಶ್ ಪೂಜಾರ್. ಮಾದಿಗರ ಗೋಳನ್ನು ತನ್ನ ಅಂತರಾಳದಿಂದ ವ್ಯಕ್ತಪಡಿಸಿದ್ದಾನೆ. ನಾನು ಚಿಕ್ಕವನಿಂದ ಇಲ್ಲಿಗೆ 35 ವರ್ಷಗಳಾಗಿವೆ. ಎಸ್ಸಿ ಸಮುದಾಯವನ್ನು, ಮತ್ತು ಜನರನ್ನು. ರಾಜಕೀಯವಾಗಿ ದುರ್ಬಳಿಕೆ ಮಾಡಿರುವುದು. ಮತ್ತು ಅವರನ್ನು ಓಟಿಗಾಗಿ ಬಳಸಿಕೊಂಡಿರುವುದು. ದೊಡ್ಡ ದುರಂತವಾಗಿದೆ. ಯಾಕೆಂದರೆ ನಾನು ಚಿಕ್ಕವನಿರುವಾಗನಿಂದ ಇಲ್ಲಿವರೆಗೂ, ಮಾದಿಗ ಸಮುದಾಯದ ಒಬ್ಬರನ್ನಾದರೂ ರಾಜಕೀಯ ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗುವವರು. ಯಾರು ಎಂಬುದು ನನಗೆ ಪ್ರಶ್ನೆಯಾಗಿದೆ.. ಇದು ಒಂದು ಭಾಗವಾದರೆ. ಇನ್ನೊಂದು ಭಾಗವು, ಎಸ್ಸಿ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಮಕ್ಕಳ ಭವಿಷ್ಯಕ್ಕೆ. “ಉಂಡ ಮನೆಗೆ ಎರಡು ಬಗೆದಂತೆ ” ಗಾದೆಯಂತೆ ಈಗಿನ ಸರ್ಕಾರ ಮಾಡುತ್ತಿದೆ. ಯಾವುದೆಂದರೆ’ ಸುಪ್ರೀಂ ಕೋರ್ಟ್ ಆದೇಶ ಮಾಡಿರುವ. ಒಳ ಮೀಸಲಾತಿಯ ಜಾರಿಗೆ ಕುರಿತು ಸ್ಪಷ್ಟ ಮಹತ್ವದ ತೀರ್ಪು ನೀಡಿದೆ. ಮಾದಿಗರ ವೋಟು ಪಡೆದುಕೊಂಡ ಸರ್ಕಾರವು. ಸುಪ್ರೀಂ ಕೋರ್ಟ್ ಆದೇಶವನ್ನು ನಿರ್ಲಕ್ಷತನ ಮಾಡುತ್ತಿದೆ. ಯಾಕೆಂದರೆ ಎಸ್ಸಿ ಸಮುದಾಯದ ದುರ್ಬಲತೆಯನ್ನು, ಅಥವಾ ತಾಳ್ಮೆಯನ್ನು, ಪರೀಕ್ಷಿಸುತ್ತಾ ಬಂದಿದೆ . ಒಳ ಮೀಸಲಾತಿಯ ಜಾರಿಗೆ ಮಾಡುವ ಕುರಿತು.

ಸರ್ಕಾರ ಏನಾದರೂ ಎಡವಿದ್ದಲ್ಲಿ. ಸರ್ಕಾರಕ್ಕೆ ದೊಡ್ಡ ಕಳಂಕ ಬರುತ್ತದೆ. ಅತಿ ಹೆಚ್ಚು ಮಾದಿಗರ ವೋಟನ್ನು ಪಡೆದ ನೀವು ಅವರ ಹಕ್ಕನ್ನು ನೀವು ನೀಡದಿದ್ದರೆ. ಸಂಡೂರು ತಾಲೂಕಿನಲ್ಲಿ ನಡೆಯುವ ಉಪಚುನಾವಣೆಯಲ್ಲಿ. ನಿಮಗೆ ತಕ್ಕ ಪಾಠವನ್ನು ಕಲಿಸುತ್ತೇವೆ. ನಿಮಗೆ ಹೇಳಲು ಈ ಕೆಳಗಿನ ವಿಚಾರಗಳನ್ನು ನಾವು ನೋಡಿದಾಗ. ಮಾದಿಗರನ್ನು ತುಳಿಯುತ್ತಾ ಬಂದಿರುವುದು ನಮಗೆ ಗೊತ್ತಾಗುತ್ತದೆ.
ಮಾದಿಗರ_ಅಳಲು
ನಮಗೆ ಒಳ ಮೀಸಲಾತಿ ಯಾಕೆ ಬೇಕು ಎಂದರೆ ನಮಗಿರುವ ಅಸ್ಪೃಶ್ಯತೆ ಎನ್ನುವ ಅತಿ ದೊಡ್ಡ ಸಾಮಾಜಿಕ ರೋಗ ಇರುವ ಕಾರಣ ರಾಜಕೀಯದಲ್ಲಿ ಗೆಲುವಾಗುತ್ತಿಲ್ಲ ಆರ್ಥಿಕವಾಗಿ ಸಧೃಡರಾಗಲು ಆಗುತ್ತಿಲ್ಲ, ನಾವು ಪರಿಶಿಷ್ಟರ ಪಟ್ಟಿಯಲ್ಲಿದ್ದು ಸೌಲಭ್ಯಗಳ ವಂಚಿತರು ಎನ್ನುವುದಕ್ಕೆ ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ.

ಹಡಗಲಿ ಲಮಾಣಿ ಪಿಟಿ ಪರಮೇಶ್ವರ ಅವರು ಸೋತು ಅಲ್ಲಿ ಗೆಲ್ಲುವ ಕ್ರಿಷ್ಣನಾಯಕ್ ಎನ್ನುವವರು ಅದೇ ಲಮಾಣಿ ಸಮುದಾಯದವರೇ.

ಹಗರಿಬೊಮ್ಮನ ಹಳ್ಳಿಯ ಭೀಮ ನಾಯಕ್ ಸೋತು ಅದೇ ಸ್ಥಾನಕ್ಕೆ ಗೆದ್ದು ಬರುವ ನೇಮಿರಾಜ್ ನಾಯಕ್ ಅದೆ ಲಮಾಣಿ ಸಮುದಾಯದವರೇ.

ಕುಡಚಿ ಕ್ಷೇತ್ರದ ಲಮಾಣಿ ಸಮುದಾಯದ ರಾಜೀವ್ ಸೋತು ಅದೇ ಸ್ಥಾನಕ್ಕೆ ಗೆದ್ದು ಬರುವ ಮಹೇಂದ್ರ ಅದೇ ಲಮಾಣಿ ಸಮುದಾಯದವರೇ.

ಕನಕಗಿರಿ ಕ್ಷೇತ್ರದ ಮಾದಿಗ ಸಮುದಾಯದ ದಡೆಸೂಗೂರ್ ಬಸವರಾಜ್ ಸೋತು ಶಿವರಾಜ್ ತಂಗಡಗಿ ಗೆಲ್ಲುವುದು ದಡೆಸೂಗೂರು ಬಸವರಾಜ್ ಎನ್ನುವವರು ಅಸ್ಪೃಶ್ಯತೆ ಎನ್ನುವುದು ಒಂದು ದೊಡ್ಡ ಕಾರಣ.

ಇಷ್ಟು ಮಾತ್ರವಲ್ಲ ನಮಗೆ ಅಸ್ಪೃಶ್ಯತೆ ಎನ್ನುವ ಸಾಮಾಜಿಕ ರೋಗ ಇರುವ ಕಾರಣ ನಮ್ಮ ಸಮುದಾಯ ಗ್ರಾಮ ಪಂಚಾಯತಿ ತಾಲೂಕ ಪಂಚಾಯತಿ ಜಿಲ್ಲಾ ಪಂಚಾಯತ ಇಂತಹ ಚುನಾವಣೆಯಲ್ಲಿ ಸಹಿತ ನಾವು ಗೆಲ್ಲುತ್ತಿಲ್ಲ ಅನೇಕ ಊರುಗಳಲ್ಲಿ ಲಮಾಣಿ ಕೊರಮ ಕೊರಚ ಭೋವಿ ವಡ್ಡರು ಒಂದೊಂದು ಮನೆ ಇದ್ದರೂ ಅವರೇ ಗೆಲ್ಲುತ್ತಾರೆ ನೂರಾರು ಮನೆ ಇರುವ ನಾವುಗಳು ಸೋಲುತ್ತೇವೆ..

ಹೀಗಿದ್ದಾಗ ನಮಗೆ ಮೀಸಲಾತಿ ಕೊಟ್ಟಿದ್ದೀವಿ ಎನ್ನುವ ಸರ್ಕಾರಗಳಿಗೆ ಈ ತರಹದ ವ್ಯವಸ್ಥೆ ಅರ್ಥವಾಗುತ್ತಿಲ್ಲವಾ.? ಇದರಿಂದ ಅಸ್ಪೃಶ್ಯ ಸಮಾಜವಾದ ಮಾದಿಗ ಸಮುದಾಯಕ್ಕೆ ಅನ್ಯಾಯ ವಾಗುತ್ತಿದೆ ಎನ್ನುವ ಅಂಶಗಳು ಪರಿಜ್ಞಾನ ಇಲ್ಲವಾ.?

ಸದಾಶಿವ ಆಯೋಗ ವಿಚಾರ ಬಂದಾಗ ಅಣ್ಣತಮ್ಮ ಎಂದೆನಿಸಿಕೊಂಡ ಸಮುದಾವೂ ತಮ್ಮ ಜಾಣತನದಿಂದ ಅಸ್ಪೃಶ್ಯ ಸಮುದಾಯವಾದ ಮಾದಿಗ ಸಮುದಾಯದ ಸಹವಾದ ಬಿಟ್ಟು ಸ್ಪೃಷ್ಯ ಸಮುದಾಯಗಳ ಜೊತೆ ಒಡನಾಡಿಯಾಗಿ ತನ್ನ ಜನಸಂಖ್ಯೆಗೂ ಅಧಿಕವಾದ ಅಧಿಕಾರ ಸೌಲಭ್ಯಗಳು ಪಡೆಯುತ್ತಿರುವುದು ಸರ್ಕಾರಗಳಿಗೆ ಅರ್ಥವಾಗುತ್ತಿಲ್ಲವೇ.?

ಇದನ್ನು ಅರ್ಥ ಮಾಡಿಕೊಂಡಿರುವ ಮಾದಿಗ ಸಮುದಾಯದ ಲೀಡರ್ ಗಳು ನಾವು ಸದಾಶಿವ ಆಯೋಗದ ಬಗ್ಗೆ ಮಾತಾಡಿದರೆ ನಮ್ಮ ಅಧಿಕಾರ ಸಹಿತ ಕಳೆದುಕೊಂಡು ಬಿಡುತ್ತೇವೆ ಎಂದು ಸುಮ್ಮನಿದ್ದಾರೆ, ಆದರೆ ಹೋರಾಟಗಾರರು ಸಾಯುತ್ತಿದ್ದಾರೆ ಕುಟುಂಬಗಳು ಬಿಟ್ಟು ರಾಜ್ಯ ಸುತುತ್ತಾ ನಮ್ಮ ಜನಗಳನ್ನು ಎಚ್ಚರಿಸುತ್ತಿದ್ದಾರೆ…

ವರದಿ, ಕಾಶೆಪ್ಪ ಸಂಡೂರು ಗ್ರಾಮಾಂತರ

 

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend