ಸ್ಕೂಲ್ ಸಮವಸ್ತ್ರದಲ್ಲಿದ್ದ ಎರಡನೇ ತರಗತಿಯ ಮಗುವಿಗೆ ರಸ್ತೆ ಅಪಘಾತ. ಅಕ್ಟೋಬರ್ 7 ರಂದು ರಸ್ತೆ ತಡೆದು ಪ್ರತಿಭಟನೆ. ಅನುಮತಿ ಕೋರಿ. ” ಬೋವಿ ಸಮಾಜದ ತಾಲೂಕ ಅಧ್ಯಕ್ಷರು.ಪದ್ಮಣ್ಣ ಪೊಲೀಸ ಇಲಾಖೆಗೆ ಮನವಿ ಪತ್ರ…!!!

ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭಾ ತಾಲೂಕು ಘಟಕ ಹಾಗೂ ಸೀನಿ ಬಸಪ್ಪ ಕ್ಯಾಂಪ್ ಗ್ರಾಮ ಘಟಕ ಹಾಗೂ ನಗರ ಘಟಕ ಪದಾಧಿಕಾರಿಗಳೆಲ್ಲ ಸೇರಿ ನಮ್ಮ ಭೋವಿ ಸಮಾಜದ ಒಬ್ಬ ಮಗುವಿನ ಮೇಲೆ ಆದಂತಹ ಅಪಘಾತದ ವಿರುದ್ಧ ಎಲ್ಲಾ ಗಣಿ ಕಂಪನಿಗಳಿಗೆ ಸೀನಿ ಬಸಪ್ಪ ಕ್ಯಾಂಪ್ ಸಾರ್ವಜನಿಕರಿಗೆ ಸಾರ್ವಜನಿಕರಿಗೆ ಧೋಳಿನ ಸಮಸ್ಯೆ ಟ್ರಾಫಿಕ್ ಸಮಸ್ಯೆ ಹಾಗೂ ಸಾರ್ವಜನಿಕರ ಹೋರಾಟದ ಸಮಸ್ಯೆ ಶಾಲಾ ಮಕ್ಕಳಿಗೆ ಆಗುವ ಸಮಸ್ಯೆಯನ್ನು ವಿರೋಧಿಸಿ ಎಲ್ಲಾ ಗಣಿ ಕಂಪನಿಯಿಂದ ಬರತಕ್ಕಂತ ಗಣಿ ವಾಹನಗಳ ಆರ್ಭಟವನ್ನು ತಡೆಯಲು ನಾಳೆ ಬೆಳಿಗ್ಗೆ ಸ್ವಲ್ಪ ಕಾಲಗಳ ಅವಧಿ ರಸ್ತೆ ತಡೆಯನ್ನು ನಡೆಸಿ ಎಲ್ಲಾ ಗಣಿ ಕಂಪನಿ ಮುಖ್ಯ ವ್ಯವಸ್ಥಾಪಕರಿಗೆ ಮನವಿ ಪತ್ರಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಆದುದರಿಂದ ಇಂದು ಸಂಡೂರು ಪೊಲೀಸ್ ಠಾಣೆ ಮಾನ್ಯ ಸಿಪಿಐ ಸಾಹೇಬ್ರು ಹಾಗೂ ಮಾನ್ಯ ಪಿಎಸ್ಐ ಸಾಹೇಬರಿಗೆ ನೀಡಿದ್ದೇವೆ ನಮಗೆ ನಾಳೆ ಭದ್ರತೆಯನ್ನು ಕೋರಿ ಇಂದು ಮನವಿಯನ್ನು ನೀಡಲಾಗಿತ್ತು,

ಮತ್ತು ಸಂಡೂರ್ ಪೊಲೀಸ್ ಠಾಣದ ವತಿಯಿಂದ ನಾಳೆ ನಮಗೆ ಧರಣಿಗೆ ಅವಕಾಶ ಮಾಡಿಕೊಟ್ಟಿದ್ದಾದಲ್ಲಿ ಇಲ್ಲವಾದರೆ ಬೇರೆ ದಿನದಲ್ಲಿ ಹಮ್ಮಿಕೊಂಡಿದ್ದೆ ಆದಲ್ಲಿ ಆ ದಿನಾಂಕವನ್ನು ನಿಗದಿಪಡಿಸಿ ನಾವು ಎಲ್ಲರ ಗಮನಕ್ಕೆ ತಂದು ಈ ಹೋರಾಟಕ್ಕೆ ತಮ್ಮೆಲ್ಲರ ಸಹಕಾರ ನೀಡಬೇಕಾಗಿ ತಮ್ಮೆಲ್ಲರಲ್ಲೂ ಹೃದಯಪೂರ್ವಕವಾಗಿ ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾದಂತ ಭೋವಿ ಪದ್ಮಣ್ಣನವರು ತಮ್ಮೆಲ್ಲರಲ್ಲಿ ಬೇಡಿಕೊಳ್ಳುತ್ತಿದ್ದೇನೆ…

ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ

Leave a Reply

Your email address will not be published. Required fields are marked *