ಜಿವನ್ ಸಂಗೀತ್ ಸಂಸ್ಥೆಯ ಅಧ್ಯಕ್ಷರಾದ ಗೀತಾವೀರೇಶ್ ಹಾಗೂ ಸದಸ್ಯರು ಗಳಾದ ಶಿಲ್ಪಾಜೋಶಿ,ಸತೀಶ್ ಸೇಟ್ ಅವರು ಈ ತಂದೆ ಇಲ್ಲದ ಕೂಲಿ ಕಾರ್ಮಿಕರಾದ ರೇಣುಕಮ್ಮ ಹಾಗು ಪ್ರಥಮ ಪಿಯುಸಿ ಓದುತ್ತಿರುವ ಸಂಜನಾ ಎಂಬ ಹುಡುಗಿಗೆ ಪುಸ್ತಕ,ಪೆನ್ ಗಳನ್ನು ಹಾಗು ಮನೆಗೆ ದಿನಬಳಕೆ ರೇಶನ್ ಸಾಮಗ್ರಿಗಳನ್ನು ನೀಡಿದ್ದು,ಸಂಜನಾಗೆ ಓದಲು ನೆರವಾಗುತ್ತೇವೆ ಎಂದು ದೈರ್ಯದ ಮಾತುಗಳನ್ನು ಹೇಳಿ,ಓದಲು ಸ್ಪೊರ್ತಿದಾಯಕ ಮಾತುಗಳನ್ನು ಆಡಿ ಪ್ರೋತ್ಸಾಹಿಸಿದರು,
ಜೀವನ್ ಸಂಗೀತ್ ಸಂಸ್ಥೆಯು ಕಳೆದ ಒಂದೂವರೆ ವರ್ಷದಿಂದ ಅನೇಕ ಸೇವಾ ಕಾರ್ಯಕ್ರಮ ಗಳನ್ನು ಮಾಡುತ್ತಾ ಬಂದಿದೆ,,,, ಸಂಸ್ಥೆಯ ಮೂಲ ಉದ್ದೇಶ ಶಿಕ್ಷಣ,ಪರಿಸರ, ಮಹಿಳಾ ಸಬಲೀಕರಣ ವಾಗಿದ್ದು,,,,,ಸಂಸ್ಥೆಯು ಜಿಂದಾಲ್,ಸಂಡೂರಿನ ಸುತ್ತ ಮುತ್ತಲಿನ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಗಳನ್ನು,, ಭೀಮಾ ತೀರ್ಥ ಚಾರಣ ಪಥದಲ್ಲಿ ಸ್ವಚ್ಛತಾ ಕಾರ್ಯಕ್ರಮ,ಹಾಗೂ ಡಸ್ಟ್ ಬಿನ್ ಗಳನ್ನು ಅಳವಡಿಸಿದೆ,,ಸಂಡೂರು ತಾಲೊಕ್ಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಶಿಬಿರದಲ್ಲಿ ಮೆಹೆಂದಿ,ಚಿತ್ರಕಲೆ,ಮಣ್ಣಿನಿಂದ ಆಟಿಕೆ ತಯಾರಿಕೆ,ಮೋಟಿವೇಶನ್ ಸ್ಪೀಚ್,,ಒಂದು ದಿನದ ಜಿಂದಾಲ್ ದರ್ಶನ ಕಾರ್ಯಕ್ರಮ ಹಾಗು ಮಕ್ಕಳ ಬೇಡಿಕೆಯಂತೆ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಯಾವರೀತಿ ಚಕ್ ಇನ್,ಔಟ್ ವಿಧಾನ, ಮತ್ತು ವಿಮಾನಗಳನ್ನು ತೋರಿಸಲಾಯಿತು,,,ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಯೋಗ , ಧ್ಯಾನ ತರಬೇತಿ ಗಳನ್ನು ನೀಡುತ್ತಿದ್ದು,ಮಹಿಳಾ ಖೈದಿಗಳಿಗೆ ನೆಬುಲೈಸರ್ ಹಾಗು ದಿನ ನಿತ್ಯ ವಸ್ತುಗಳನ್ನೂ ನೀಡುತ್ತಿದ್ದಾರೆ.
ಮಹಿಳಾ ಖೈದಿಗಳಿಗೆ ಒಂದು ಲೈಬ್ರರಿ ಯನ್ನು ಸಹ ಮಾಡಿಕೊಟ್ಟಿದೆ,,ಅಷ್ಟೇ ಅಲ್ಲದೆ ತಾಳೂರು,ವಡ್ಡು,ಕಾಕಬಾಳು,ಇನ್ನೂ ಅನೇಕ ಸರ್ಕಾರಿ ಶಾಲೆಗಳಲ್ಲಿ ಮೋಟಿವೇಶನಲ್ ,ಸ್ಕಿಲ್ ಡೆವಲಪ್ ಕಾರ್ಯಕ್ರಮ ಗಳನ್ನು ನೀಡುತ್ತಿದೆ,, ಬಳ್ಳಾರಿ ಕಾಲೇಜಿನ ಅಂದ ಮಕ್ಕಳಿಗೆ ಪಠ್ಯಪುಸ್ತಕ ವನ್ನು ನೀಡಿದೆ,,,ಬಡ ವಿದ್ಯಾರ್ಥಿಗಳಿಗೆ ಶುಲ್ಕ ವನ್ನು ತುಂಬಿದ್ದು , ಕಂಪ್ಯೂಟರ್ ತರಬೇತಿಗಳನ್ನು ಕೊಡಿಸಲಾಗಿದೆ,,,ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಗೀತಾವೀರೇಶ್ ತಿಳಿಸಿದರು,,,, ಸಂಸ್ಥೆಯ ಸದಸ್ಯರು ಗಳಾದ ಪ್ರಿಯಾ,ನಿರ್ಮಲ,ವಾಣಿ,ಮಧು ಇನ್ನಿತರರು ಕೈ ಜೋಡಿಸುತ್ತಾ ಇದ್ದಾರೆ,ಹಾಗೂ ಜಿಂದಾಲ್ ಸಂಸ್ಥೆಯು ಸಹ ಈ ಸಂಸ್ಥೆಗೆ ಸಹಾಯ ಮಾಡುತ್ತಿದೆ,,..
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030