” ರಣಜಿತ್ ಪುರ “”: “ದಲಿತ ಮಹಿಳಾ ಗ್ರಾಮ ಸಮಿತಿಯ ಅಧ್ಯಕ್ಷರನ್ನಾಗಿ ಹೆಚ್ ಹುಲಿಗೆಮ್ಮ ನೇಮಕ” “ತಹಸಿಲ್ದಾರರಿಗೆ ಮನವಿ ಪತ್ರ ನೀಡಿ ಸಮಿತಿಯ ಉಪಾಧ್ಯಕ್ಷರು ಸರ್ವ ಸದಸ್ಯರ ಪರಿಚಯ”) ‘ ಕರ್ನಾಟಕ ದಲಿತ ಸಂಘರ್ಷ ಸಮಿತಿ'( ಅಂಬೇಡ್ಕರ್ ವಾದ) ದಲಿತ ಮಹಿಳಾ ಗ್ರಾಮ ಸಮಿತಿಯನ್ನು ರಣಜಿತ್ ಪುರ ಗ್ರಾಮದಲ್ಲಿ ರಚನೆ ಮಾಡಲಾಯಿತು ಗ್ರಾಮದ ಮಹಿಳಾ ಘಟಕ ಉಸ್ತುವಾರಿಯನ್ನು ಹೆಚ್ಚು ರಮೇಶ್ ಹಾಗೂ ದುರುಗಪ್ಪ ವಹಿಸಿದ್ದು ” ಕರ್ನಾಟಕ ದಲಿತ ಸಂಘರ್ಷ ಸಮಿತಿಯಾ ತಾಲೂಕ ಅಧ್ಯಕ್ಷರಾದಂತಹ ಕುಮಾರಸ್ವಾಮಿ ವಕೀಲರು ಲಕ್ಷ್ಮಿಪುರ. ಉಪಾಧ್ಯಕ್ಷರುಗಳಾದ ಈರಣ್ಣ ಎಚ್‌ಟಿ. ಹುಲುಗಪ್ಪ ಜೈಸಿಂಗಪುರ. ಇವರ ಸಮ್ಮುಖದಲ್ಲಿ ಸಂಡೂರು ತಾಲೂಕಿನ ರಣಜಿತ್ ಪುರ ಗ್ರಾಮದಲ್ಲಿ ( ಅಂಬೇಡ್ಕರ್ ವಾದ ) ದಲಿತ ಮಹಿಳಾ ಗ್ರಾಮ ಸಮಿತಿಯಾ ಅಧ್ಯಕ್ಷರನ್ನಾಗಿ H. ಹುಲಿಗೆಮ್ಮ ಇವರನ್ನು ಆಯ್ಕೆ ಮಾಡಿ ಸಂಡೂರು ತಾಲೂಕ ಕಚೇರಿಯ ತಹಶೀಲ್ದಾರರಿಗೆ ಮನವಿ ಪತ್ರ ಕೊಡುವುದರ ಮೂಲಕ ಸಮಿತಿಯ ಉಪಾಧ್ಯಕ್ಷರನ್ನು ಸರ್ವ ಸದಸ್ಯರನ್ನು ಪರಿಚಯ ಮಾಡಿದರು.’ ಈ ಸಂದರ್ಭದಲ್ಲಿ ತಹಸೀಲ್ದಾರರು ಮಾತನಾಡಿ’ ” ಮಹಿಳೆಯರಿಗೆ ಸಂಘ ಸಂಸ್ಥೆಯ ಅವಶ್ಯಕತೆ ತುಂಬಾ ಇದ್ದು ಇದನ್ನು ಸಾಮಾಜಿಕ ಹಿತದೃಷ್ಟಿಯಿಂದ ಸರಿಯಾದ ರೀತಿಯಲ್ಲಿ ಬೆಳೆಸಿಕೊಂಡು ನಿಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಳ್ಳಿ ಮತ್ತು ನಾವು ಕರೆಯುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಬಂದು ಹಾಜರಾಗಿ ನೂತನ ಕಾನೂನು ಬದ್ಧವಾದ ವಿಷಯಗಳನ್ನು ತಿಳಿದುಕೊಳ್ಳಿ ಹಾಗೂ,ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ದುಡಿಯಿರಿ ಮತ್ತು ಮೂಲಭೂತ ಹಕ್ಕುಗಳು ಮತ್ತು ಸೌಕರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ ಎಂದು ಎಲ್ಲ ಮಹಿಳೆ ಸದಸ್ಯರಲ್ಲಿ ಮನವಿ ಮಾಡಿ ಮನವಿ ಪತ್ರವನ್ನು ಸ್ವೀಕರಿಸಿದರು ಸಮಿತಿಯ ಅಧ್ಯಕ್ಷರಾದ ಹೆಚ್ ಹುಲಿಗೆಮ್ಮ ಮಾತನಾಡಿ ಸ್ತ್ರೀಯರ ಸ್ಥಾನಮಾನಗಳ ಬಗ್ಗೆ ಅತಿ ಹೆಚ್ಚು ಗಮನಹರಿಸುತ್ತೇವೆ ಹಾಗೂ ಕಾನೂನಿನ ಸಲಹೆ ಪಡೆದು ಮುಂದುವರೆಯುತ್ತೇವೆ ಎಂದು ಮಾತನಾಡಿ ತಾಸಿಲ್ದಾರರಿಗೆ ಸಮಿತಿಯ ಸರ್ವ ಸದಸ್ಯರ ಪರಿಚಯ ಮಾಡಿದರು.ಸಂಘಟನಾ ಸಂಚಾಲಕರು ದಾನಮ್ಮ.ಸಿದ್ದಮ್ಮ.ನೀಲಮ್ಮ.ಲಕ್ಷ್ಮಿ. ಪಾರ್ವತಿ. ಹುಲಿಗೆಮ್ಮ. ಎರಿಯಮ್ಮ. ಖಜಾಂಚಿ,ಲಕ್ಷ್ಮಿ.ಕಾರ್ಯಕಾರಣಿ ಸಮಿತಿ ಹುಲಿಗಮ್ಮ. ಲತಾ. ಮೂಗಮ್ಮ. ಸಕ್ರಮ. ರುದ್ರಮ್ಮ. ಹೆಚ್ ತಾಯಮ್ಮ. ಶಾಕುಂತಲ. ಪಾರ್ವತಿ. ಹೆಚ್ ಕೆ ರೇಣುಕಾ. ಗೀತಮ್ಮ. ದುರುಗಮ್ಮ .ಶಿವಮ್ಮ ಮರಿಯಮ್ಮ. ಹೊನ್ನೂರಮ್ಮ. ದಾನಮ್ಮ. ಹುಲಿಗೆಮ್ಮ ಕೆ. ರಾಜಮ್ಮ. ರೇಖಾಮ್ಮ. ಕೀರ್ತಿ ಹೆಚ್. H ರೇಖಾಮ. ಹಂಪಮ್ಮ. ಶಾರದಮ್ಮ. ಕಮಲಮ್ಮ. ಅನಿತಾ. ಕೊಲ್ಲಮ್ಮ. ಯಲ್ಲಮ್ಮ. ಹಾಗೂ ಗ್ರಾಮದ ಇನ್ನುಳಿದ ಎಲ್ಲಾ ಮಹಿಳಾ ಸದಸ್ಯರು ಭಾಗವಹಿಸಿದ್ದರು…
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030