ಸಂಡೂರು ಪುರಸಭೆಯಲ್ಲಿ ಪೌರಕಾರ್ಮಿಕ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ಸಸಿಗೆ ನೀರಿರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಈ ಸಂದರ್ಭದಲ್ಲಿ ಅಧ್ಯಕ್ಷರು ಪುರಸಭೆ ಸಿರಾಜ್ ಹುಸೇನ್ ಮತ್ತು ಉಪಾಧ್ಯಕ್ಷರು ಶ್ರೀಮತಿ ಲತಾ ಎಮ್ ಸಿ ಉಜ್ಜಪ್ಪ ಸಂಸದರ ಶ್ರೀಮತಿ ಅನ್ನಪೂರ್ಣಮ್ಮ ಮಾಜಿ ಅಧ್ಯಕ್ಷರು ಅನಿತಾ ವಸಂತ್ ಕುಮಾರ್ ಮಾಜಿ ಉಪಾಧ್ಯಕ್ಷರುಆಶಾಲತಾ ಸೋಮಪ್ಪ ಕಾರ್ಮಿಕ ಸಂಘದ ಅಧ್ಯಕ್ಷರು ಮಲ್ಲಿಕಾರ್ಜುನ್ ಉಪಾಧ್ಯಕ್ಷರು ಎಲ್ಲಾ ವಾರ್ಡಿನ ಸದಸ್ಯರು ಹಾಗೂ ಪುರಸಭೆಯ ಮುಖ್ಯಾಧಿಕಾರಿ ಜಯಣ್ಣ ಎಲ್ಲಾಪುರಸಭೆಯ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಕಾರ್ಮಿಕರು ಈ ಸಂದರ್ಭದಲ್ಲಿ ಭಾಗವಹಿಸಿದರು ಮಾಜಿ ಶಾಸಕರು ಈಗಿನ ಸಂಸದರು ನಮಗೆ ಒಂದು ಎಕರೆ ಜಾಗ ನೀಡುತ್ತೇವೆಂದು ಕಳೆದ ಬಾರಿ ಮಾತು ಕೊಟ್ಟಿದ್ದರು ಆದರೆ ಈವರೆಗೆ ಎಷ್ಟೋ ಕಾರ್ಮಿಕರು ಬಾಡಿಗೆ ಮನೆಯಲ್ಲಿ ಇದ್ದೇವೆ. ಈವರೆಗೂ ಮನೆ ಕಟ್ಟಿಕೊಳ್ಳಲು ನಮಗೆ ಆಗುತ್ತಿಲ್ಲ ಜಾಗ ಕೊಟ್ಟ ನಂತರ ಮನೆ ಕಟ್ಟಿಕೊಳ್ಳಬೇಕೆಂದು ನಮ್ಮ ಎಲ್ಲಾ ಕಾರ್ಮಿಕರು ಸಂಸದರನ್ನು ಕಾಯುತ್ತಿದ್ದಾರೆ ಈ ಬಾರಿಯಾದರೂ ಕೊಟ್ಟ ಮಾತಿಗೆ ತಪ್ಪಲಾರದೆ ನಮಗೆ ಜಾಗವನ್ನು ಕೊಡಿಸಿ ಎಂದು ಮಲ್ಲಿಕಾರ್ಜುನ್ ಪೌರಕಾರ್ಮಿಕಅಧ್ಯಕ್ಷರು ಮಾತನಾಡಿದರು.
ಈ ಬಾರಿ ಅವರು ಕಾರ್ಯಕ್ರಮಕ್ಕೆ ಬರದೆ ಇದ್ದರೂ ಕೂಡ ಅವರ ಶ್ರೀಮತಿಯವರು ಬಂದಿರುವುದು ನಮಗೆ ಬಹಳ ಖುಷಿ ತಂದಿದೆ ಇವರಾದರೂ ನಮಗೆ ಒಂದು ಎಕರೆ ಜಾಗ ಕೊಡಲು ಸಂಸದರ ಬಳಿ ಮಾತನಾಡಿ ಕೊಡಿಸಬೇಕು ಕೊಳೆತೊಳೆಯುವ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ನಮ್ಮಿಂದ ಆಗುತ್ತಿಲ್ಲ ಎಂದು ಅವರು ಅಳಲನ್ನು ತೋಡಿಕೊಂಡರು ನಮ್ಮನ್ನು ಕೆಲಸ ಮಾಡಿಸಿಕೊಳ್ಳುವ ಅಧಿಕಾರಿಗಳು ನಮಗೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಸೌಲಭ್ಯಗಳ ಬಗ್ಗೆ ತಿಳಿಸುವುದಿಲ್ಲ ಓದಲು ಬರೆಯಲು ಬರದಂತಹ ನಮ್ಮ ಕಾರ್ಮಿಕರಿಗೆ ಯಾವುದು ಗೊತ್ತಾಗುವುದಿಲ್ಲ ಇನ್ನು ಮುಂದೆಯಾದರೂ ಸರ್ಕಾರದ ಸೌಲಭ್ಯಗಳನ್ನು ನೋಟಿಸ್ ಬೋರ್ಡ್ ಗೆ ಹಾಕಿ ನಮ್ಮ ಗಮನಕ್ಕೆ ತರಬೇಕೆಂದು ಪುರಸಭೆಯ ಮುಖ್ಯ ಅಧಿಕಾರಿ ಅವರಿಗೆ ಕೇಳಿಕೊಂಡರು. ಮುಖ್ಯ ಅಧಿಕಾರಿ ಯವರು ಇನ್ನು ಮುಂದೆ ಯಾವುದೇ ಸೌಲಭ್ಯ ಬಂದರೂ ಕಾರ್ಮಿಕರ ಮಕ್ಕಳಿಗೆ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು,ಮಾಜಿ ಅಧ್ಯಕ್ಷರಾದ ಅನಿತಾ ವಸಂತ್ ಕುಮಾರ್ ಅವರ ಇದ್ದಾಗ ಅರಿಯಸ್ ಕೊಟ್ಟಿದ್ದರು 11 ವರ್ಷದಲ್ಲಿ ನಾವು ಬಂದಾಗ ಕಾರ್ಮಿಕರಿಗೆ ಕೊಡಿಸಿದ್ದೆವು ಈ ಬಾರಿಯಾದರೂ ಪುರಸಭೆ ಅಧ್ಯಕ್ಷರು ಕಾರ್ಮಿಕರಿಗೆ ಹರಿಹರ್ಸ್ ಕೊಡಬೇಕೆಂದು ಅನಿತಾ ವಸಂತ್ ಕುಮಾರ್ ಅವರು ಮಾತನಾಡಿದರು.
ಮಾಜಿ ಶಾಸಕರು ಈಗಿನ ಸಂಸದರು ಅವರ ಶ್ರೀಮತಿ ಅನ್ನಪೂರ್ಣ ಅವರು ಅಧ್ಯಕ್ಷರು ಪೌರಕಾರ್ಮಿಕ ಇವರು ಕೇಳಿದಾಗ ವರ್ಷಕ್ಕೆ ಎರಡು ಬಾರಿ ಆರೋಗ್ಯ ಚಿಕಿತ್ಸೆ ಮಾಡಿಸುತ್ತೇವೆ. ಮನೆ ನಿರ್ಮಾಣ ಮಾಡಿಸಿಕೊಡುತ್ತೇವೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಫೀಸು ಪುಸ್ತಕ ಮುಂತಾದ ಯಾವುದೇ ತೊಂದರೆಯಾದ ಕಾರ್ಮಿಕರು ಬಂದು ಕೇಳಿದರೆ ಅವರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.ಪುರಸಭೆ ಅಧ್ಯಕ್ಷರು ಸಿರಾಜ್ ಹುಸೇನ್ ಅವರು ಮಾಜಿ ಅಧ್ಯಕ್ಷರು ಹೇಳಿದಾಗೆ ಹರಿಯರ್ಸ್ ಕೊಡಿಸುವುದು ನನ್ನ ಆದ್ಯ ಕರ್ತವ್ಯ ಮತ್ತು ಕೊಡಿಸುವ ಪ್ರಯತ್ನ ಮಾಡುತ್ತೇನೆ ಯಾವುದೇ ರೀತಿಯ ಕಾರ್ಮಿಕರಿಗೆ ತೊಂದರೆ ಆದರೆ ನಾವು ಮತ್ತು ಪುರಸಭೆಯ ಎಲ್ಲಾ ವಾರ್ಡಿನ ಸದಸ್ಯರು ಸೇರಿ ತೀರ್ಮಾನ ತೆಗೆದುಕೊಂಡು ಕಾರ್ಮಿಕರ ಮಕ್ಕಳಿಗೆ ಹಾಗೂ ಕಾರ್ಮಿಕರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು…
ವರದಿ. ಉಜ್ಜಿನಯ್ಯ ಸಂಡೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030