ಸಂಡೂರು ತಾಲೂಕಿನ ಕೊನೆಹಳ್ಳಿಯಲ್ಲಿ ಚಿಗುರಿದ ಅದ್ಭುತ ಪ್ರತಿಭೆ ರಾಜ್ಯ ಮಟ್ಟಕ್ಕೆ ಆಯ್ಕೆ…!!!

ಸಂಡೂರು ತಾಲೂಕಿನ ಕೊನೆಹಳ್ಳಿಯಲ್ಲಿ ಚಿಗುರಿದ ಅದ್ಭುತ ಪ್ರತಿಭೆ ಕಥೆ ಹೇಳುವ ಸ್ಪರ್ಧೆ ಸಂಜನಾ ಎನ್ ಬಿ ರಾಜ್ಯ ಮಟ್ಟಕ್ಕೆ ಆಯ್ಕೆ ಸಂಡೂರು ತಾಲೂಕಿನ ಕೊನೆಯ ಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊತಲಕುಂಟೆ ಗ್ರಾಮದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಕಥೆ ಹೇಳುವ ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಸಂಜನಾ ಎನ್ ಬಿ ಕಥೆ ಹೇಳುವ ಸ್ಪರ್ಧೆಯಲ್ಲಿ ಜಯಭೇರಿ ವಂದಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವ 07 ನೇ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಹೆಜ್ಜೆ ಇಟ್ಟಿದ್ದಾಳೆ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರ ಸಹಕಾರದಿಂದ ವಲಯಮಟ್ಟ ತಾಲೂಕು ಮಟ್ಟ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಜ್ಯದಲ್ಲಿ ಭಾಗವಹಿಸಲು ಸೆಡ್ಡು ಹೊಡೆದಿದ್ದಾಳೆ ಗ್ರಾಮದ ಜನತೆಗೆ ಶಾಲೆಯ ಕ್ರೀಡೆ ಮನೋಭಾವ ಹೊಂದಿದ ಮಕ್ಕಳಿಗೆ ಸ್ಪೂರ್ತಿಯಾಗಿದ್ದ್ದಾಳೆ ಶಾಲೆ ಶಿಕ್ಷಕರು SDMC ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಶುಭಕೋರಿ ಸಂತೋಷ ವ್ಯಕ್ತಪಡಿಸಿದ್ದಾರೆ…

ವರದಿ. ಕಾಶಪ್ಪ ಸಂಡೂರು ಗ್ರಾಮಾಂತರ

Leave a Reply

Your email address will not be published. Required fields are marked *