ವ್ಯಾಲಿ ರೆಸಿಡೆನ್ಸಿಯಲ್ ಸ್ಕೂಲ್ ಸಂಡೂರು ವಿಶ್ವಕರ್ಮ ಜಯಂತಿ ಹಾಗೂ ಕಲ್ಯಾಣ ಕರ್ನಾಟಕ ದಿನಾಚರಣೆ… ಸಂಡೂರು ಪಟ್ಟಣದಲ್ಲಿರುವ ವ್ಯಾಲಿ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ವಿಶ್ವಕರ್ಮ ಜಯಂತಿ ಹಾಗೂ ಕಲ್ಯಾಣ ಕರ್ನಾಟಕ ದಿನಾಚರಣೆ ಆಚರಣೆ ಮಾಡಲಾಯಿತು. ಬಡ ಮಕ್ಕಳಿಗೆ ಕಡಿಮೆ ಶಾಲಾ ಶುಲ್ಕವನ್ನು ಪಡೆದುಕೊಂಡು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಡ ಮಕ್ಕಳ ಸ್ಕೂಲ್ ಎಂದೇ ಹೆಸರುವಾಸಿಯಾಗಿರುವ ಈ ಶಾಲೆಯಲ್ಲಿ ಇಂದು ವಿಶ್ವಕರ್ಮ ಜಯಂತಿ ಹಾಗೂ ಕಲ್ಯಾಣ ಕರ್ನಾಟಕ ದಿನಚರಣೆಯನ್ನು ಬಹಳ ಶಿಸ್ತುಬದ್ಧವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಣೆ ಮಾಡಲಾಯಿತು, ಈ ಸುಂದರ ಕಾರ್ಯಕ್ರಮದ ನಿರೂಪಣೆಯನ್ನು ರಾಧಾ ಮೇಡಂ ಪ್ರಾರಂಭ ಮಾಡಿ ಧ್ವಜಾ ಕಾರ್ಯಕ್ರಮವನ್ನು ಮುಖ್ಯ ಗುರುಗಳಾದ ತಿಪ್ಪಣ್ಣ ಸರ್ ನಂತರ ಸ್ವಾಗತ ಭಾಷಣವನ್ನು ರಾಜು ಮಾಡಿ ಪ್ರೀತಿಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಗೀತೆಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಭಾಷಣವನ್ನು ನಂದಿತಾ ಅರ್ಚನಾ ಆಯುಷ್ಯ ಸಾನಿಯಾ ಸಮೀರ್ ಅದ್ಭುತವಾಗಿ ಭಾಷಣ ಮಾಡಿದರು… ಕಾರ್ಯಕ್ರಮದ ಮುಖ್ಯ ಅಧ್ಯಕ್ಷತೆಯನ್ನು ವಹಿಸಿ ದಂತ ರಮೇಶ್ ಎಂ ಡಿ ಅವರು ಮಾತನಾಡಿ ಕರ್ನಾಟಕದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶವು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ತೀರ ಹಿಂದುಳಿದ ಪ್ರದೇಶವಾಗಿತ್ತು 17 ಸೆಪ್ಟಂಬರ್ 1948ರ ಪೂರ್ವದಲ್ಲಿ ನಿಜ ಮನ ಆಳ್ವಿಕೆಗೆ ಒಳಪಟ್ಟಿತ್ತು ಹೈದರಾಬಾದ್ ನಿಜಾಮನ ಖಾಸಗಿ ಸೈನ್ಯವಾದ ರಜಾಕರಪಡೆ ಇಂದ ಹಿಂಸಚಾರ ಹತ್ಯಾಕಾಂಡ ದೌರ್ಜನ್ಯಗಳನ್ನು ಮಾಡುತ್ತಿದ್ದರು ಈ ಒಂದು ಕೋಮು ಗಲಭೆಗಳ ವಿರುದ್ಧವಾಗಿ ಸ್ವಾಮಿ ರಾಮಾನಂದ ತೀರ್ಥರು ಸರ್ದಾರ್ ಶರಣ ಗೌಡ ಇನಂದರ್ ಹೋರಾಡಿದರು ಪ್ರಮುಖವಾಗಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಆಪರೇಷನ್ ಫೋಲೋ ಎಂಬ ಪೊಲೀಸ್ ಕಾರ್ಯಾಚರಣೆ ಮುಖಾಂತರ ಹೈದ್ರಾಬಾದನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಸವಿಸ್ತಾರವಾಗಿ ಮಕ್ಕಳಿಗೆ ತಿಳಿಸಿದರು ಹಾಗೂ ಅಭಿವೃದ್ಧಿಯ ದೃಷ್ಟಿಕೋನದಿಂದ 371 ಜೆ ಅಡಿಯಲ್ಲಿ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ ಎಂದು ಸಂಪೂರ್ಣ ಮಾಹಿತಿ ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು…
ವರದಿ, ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030